Knowledge Malagi: ನಡೆ, ನುಡಿಯ ಮೂಲಕ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಬದಲಾವಣೆ ಮಾಡುವವರೆ ನಿಜವಾದ ಶಿಕ್ಷಕರು- ಡಾ. ವಿ. ವಿ. ಮಳಗಿ

ವಿಜಯಪುರ: ತಮ್ಮ ನಡೆ-ನುಡಿ ಮೂಲಕ ವಿದ್ಯಾರ್ಥಿಗಳನ್ನು ಧನಾತ್ಮಕ ಬದಲಾವಣೆಯಾಗುವಂತೆ ಮಾಡುತ್ತಾರೊ ಅವರೆ ನಿಜವಾದ ಶಿಕ್ಷಕರಾಗುತ್ತಾರೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಮೌಲ್ಯಮಾಪನ ಕುಲಸಚಿವ ಡಾ.ವಿ.ವಿ ಮಳಗಿ ಅಭಿಪ್ರಾಯಪಟ್ಟರು.

ಬಿಎಲ್‍ಡಿಇ ಸಂಸ್ಥೆಯ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟುಹಬ್ಬದ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನವಿದ್ದಲ್ಲಿ ಸಹೃದಯತೆ ಇರುತ್ತದೆ. ಸ್ವಂತ ಅರಿವು, ನಿರಂತರ ಕಲಿಕೆ, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಸಾಮಥ್ರ್ಯ, ಆಧುನಿಕ ತಂತ್ರಜ್ಞಾನಕ್ಕೆ ತಮ್ಮನ್ನು ಅಳವಡಿಸಿಕೊಂಡರೆ ಮಾತ್ರ ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಆಡಳಿತಾಧಿಕಾರಿ ಡಾ. ಕೆ. ಜಿ. ಪೂಜಾರಿ ಮಾತನಾಡಿ, ಇಂದಿನ ಕಲಿಯುವಿಕೆ ಹಾಗೂ  ಕಲಿಸುವಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯದ ಅರಿವು ಮೂಡಿಸುವುದರ ಮೂಲಕ ಅವರಲ್ಲಿ ದೇಶಾಭಿಮಾನವನ್ನು ಬೆಳೆಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಗಾಗಿ ಇರುವ ಪ್ರೌಢ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವಾ ನಿವೃತ್ತಿ ಹೊಂದಿದ ಆರ್.ವಿ.ತೊರವಿ, ವಿ.ಎಸ್.ತಿಮ್ಮನಗೌಡರ ಹಾಗೂ ಸಿ.ಆರ್.ಮುಳವಾಡ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ. ಬಿ.ವಾಯ್. ಖಾಸನಿಸ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸಹನಾ ಕುಲಕರ್ಣಿ ಪ್ರಾರ್ಥಿಸಿದರು. ಶ್ರೀಧರ ಝೆಂಡೆ ಸ್ವಾಗತಿಸಿ, ಪರಿಚಯಿಸಿದರು. ಅಲಾಭಕ್ಷ ಇನಾಮದಾರ ನಿರೂಪಿಸಿದರು. ಗೀತಾಂಜಲಿ ಬೊಂಡಾರ್ಡೆ ವಂದಿಸಿದರು.

Leave a Reply

ಹೊಸ ಪೋಸ್ಟ್‌