Teachers Day: ವಿದ್ಯಾರ್ಥಿಗಳ ಭವಿಷ್ಯ, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ- ಡಾ. ಎಸ್. ಸಚ್ಚಿದಾನಂದ ಆರಾಧ್ಯ

ವಿಜಯಪುರ: ವಿದ್ಯಾರ್ಥಿಗಳ ಜೀವನ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹದ್ದಾಗಿದೆ ಎಂದು ರಾಜೀವ ಗಾಂಧಿ ಆರೋಗ್ಯ ವಿವಿ ನಿವೃತ್ತ ಉಪಕುಲಪತಿ ಡಾ.ಎಸ್.ಸಚ್ಚಿದಾನಂದ ಆರಾಧ್ಯ ಹೇಳಿದ್ದಾರೆ.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಸೇವೆ ಸಲ್ಲಿಸಿದ ವಿವಿಯ ವೈದ್ಯಕೀಯ ಶಿಕ್ಷಕ ಡಾ. ಆರ್. ಬಿದರಿ ಶಿಕ್ಷಕರ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು

ನೂತನ ಶಿಕ್ಷಣ ನೀತಿ (ಎನ್.ಇ.ಪಿ) ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಇಗ ಕೌಶಲ್ಯಾಧಾರಿತ ಶಿಕ್ಷಣ ಅಗತ್ಯವಾಗಿದ್ದು, ಶಿಕ್ಷಕರು ಕಾಲಕ್ಕೆ ತಕ್ಕಂತೆ ತಯಾರಾಗಬೇಕಿದೆ ಎಂದು ಹೇಳಿದರು.

ವಿವಿ ಕುಲಪತಿ ಡಾ.ಆರ್.ಎಸ್.ಮುಧೋಳ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಶಿಕ್ಷಕರು ಅದಕ್ಕೆ ಬದ್ಧರಾಗಿ ದೇಶವನ್ನು ಮುನ್ನೆಡಸಲು ಕಾರ್ಯೋನ್ಮುಖರಾಗಬೇಕು. ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಾಜಕ್ಕೆ ಪೂರಕವಾಗಿ ಬಹುಮುಖಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ಉತ್ತಮ ಸೇವೆ ಸಲ್ಲಿಸಿದ ವಿವಿಯ ವೈದ್ಯಕೀಯ ಶಿಕ್ಷಕರಾದ ಡಾ. ಎಸ್. ವಿ. ಪಾಟೀಲ ಅವರಿಗೆ ಶಿಕ್ಷಕರ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಿವಿಯ ವೈದ್ಯಕೀಯ ಶಿಕ್ಷಕರಾದ ಡಾ.ಆರ್.ಬಿದರಿ, ಡಾ.ಎಸ್.ವಿ.ಪಾಟೀಲ ಅವರಿಗೆ ಶಿಕ್ಷಕರ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ, ಡಾ. ಶೈಲಜಾ ಎಸ್.ಪಾಟೀಲ, ಡಾ.ಸುಮಂಗಲಾ ಎಸ್.ಪಾಟೀಲ, ಡಾ.ಮಂಜುನಾಥ ಕೋಟೆನ್ನವರ, ಡಾ.ಸ್ಮೀತಾ ಬಗಲಿ, ಡಾ.ಸಂತೋಷ ರಾಮದುರ್ಗ, ಡಾ.ಎಸ್.ಎಸ್.ಕಲ್ಯಾಣಶೆಟ್ಟರ, ಡಾ.ಬಿ.ಎಸ್.ಪಾಟೀಲ ಮತ್ತು ಡಾ.ರಾಜಶ್ರೀ ಎಲಿವಾಳ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬಿ ಎಲ್ ಡಿ ಇ ಡೀಮ್ಡ್ ವಿವಿ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಈ ಕಾರ್ಯಕ್ರಮದಲ್ಲಿ ಸಮಕುಲಪತಿ ಡಾ.ಅರುಣ ಇನಾಮದಾರ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ರಿಜಿಸ್ಟಾರರ್ ಡಾ.ರಾಘವೇಂದ್ರ ಕುಲಕರ್ಣಿ ಉಪಸ್ಥಿತರಿದ್ದರು.  ಉಪಪ್ರಾಚಾರ್ಯ ಡಾ.ಎಂ.ಬಿ.ಪಾಟೀಲ ವಂದಿಸಿದರು.

Leave a Reply

ಹೊಸ ಪೋಸ್ಟ್‌