ವಿಜಯಪುರ: ಏಕತೆ ಮತ್ತು ಶಿಸ್ತು ದೇಶಾಭಿಮಾನ ಎಂಬ ಧೈಯವಾಕ್ಯ ಹೊಂದಿರುವ ಎನ್ ಸಿ ಸಿ ದೇಶದ ಯುವಕರಿಗೆ ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಪ್ರೇರೆಪಿಸುತ್ತಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಶನದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವಿದ ಜಮಾದಾರ ಹೇಳಿದ್ದಾರೆ.
ವಿಜಯಪುರ ನಗರದ ಎನ್ ಸಿ ಸಿ ತರಬೇತಿ ಕೇಂದ್ರದಲ್ಲಿ 36 ಕರ್ನಾಟಕ ಎನ್ ಸಿ ಸಿ ಬಟಾಲಿಯನ್ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಬೆಂಗಳೂರು ಕೇಂದ್ರ ರಕ್ಷಣಾ ಮಂತ್ರಾಲಯ ಸಂಯುಕ್ತ ಆಶ್ರಯದಲ್ಲಿ ಅಂತಾರಾಜ್ಯ ಮಟ್ಟದ ಭೂಸೇನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ನಾನಾ ಸ್ಪರ್ಧೆಗಳಲ್ಲಿ ವಿಜೇತ ಕೆಡೆಟ್ ಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಎನ್ ಸಿ ಸಿ ಕೆಡೆಟ್‌ಗಳಿಗೆ ತರಬೇತಿಗಳಿಂದ ಸಾಹಸ, ಪರಿಶೋಧನಾ, ಜಿಜ್ಞಾಸೆ, ತ್ರಾಣ ಸಹಿಷ್ಣುತೆ, ಶಿಸ್ತು, ಧೈರ್ಯ, ಸದೃಢತೆ, ಆತ್ಮವಿಶ್ವಾಸ, ನಿಸ್ವಾರ್ಥ ಸೇವೆ, ಆದರ್ಶ ಗುಣಗಳನ್ನು ಸದೃಢಗೊಳಿಸಲಾಗುತ್ತಿದೆ. ಯುವಕರು, ರಾಷ್ಟ್ರದ ಚಿಂತನೆಯೊಂದಿಗೆ ಮುಂದೆ ಸಾಗಲು ಪ್ರಾರಂಭಿಸುತ್ತಾರೋ ಆ ದೇಶವನ್ನು ಯಾವುದೇ ಶಕ್ತಿ ತಡೆಯಲಾರದು, ಜೀವನದ ಎಲ್ಲ ಹಂತಗಳಲ್ಲಿ ನಾಯಕತ್ವದ ಗುಣಗಳನ್ನು ಇಚ್ಚಾಶಕ್ತಿಯಿಂದ ಬೆಳೆಸಿಕೊಂಡು ಭವಿಷ್ಯದ ದೊಡ್ಡ ಸವಾಲುಗಳನ್ನು ಎದುರಿಸಲು ದೈಹಿಕ ಸಾಮರ್ಥ್ಯ, ಮನಸ್ಸಿನ ಸಮತೋಲನದೊಂದಿಗೆ ಮುನ್ನುಗ್ಗಿ ನಿಸ್ವಾರ್ಥ ಭಾವದಿಂದ ದೇಶಕ್ಕಾಗಿ ಸೇವೆ ಸಲ್ಲಿಸಲು ಅಣಿಯಾಗಬೇಕು ಎಂದು ಹೇಳಿದರು.
ಈ ಸಮಾರಂಭದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶಕುಮಾರ ಮಾಲಗತ್ತಿ, ಮೈಸೂರಿನ ಕಮಾಂಡಿಂಗ್ ಆಫೀಸರ ಕನಲ್ ಕೆ. ಎಸ್. ಬಿಸ್ತ, ದಾವಣಗೆರೆ ಕಮಾಂಡಿಂಗ್ ಆಫೀಸರ ಕನಲ್ ಮನೀಶ ಆಸ್ತಾನಾ, ಬಳ್ಳಾರಿ ಗ್ರೂಪ್ ಕಮಾಂಡರ್ ಕನಲ್ ಪುನೀತ ಲೇಹಲ್, ಕನಲ್ ಶಾಜೀ, ಸುಬೇದಾರ, ಮೇ. ಕುರಾಂದಲೆ, ಫಿಲ್ಮ ಸೆನ್ಸಾರ್ ಬೋರ್ಡ್ ಸದಸ್ಯ ರಾಘವೇಂದ್ರ ಗುರಜಾಲ, ಕ್ಯಾ. ಮಹಾಂತೇಶ ಕನ್ನೂರ, ಲೆಫ್ಟಿನಂಟ್‌ಗಳಾದ ಗಿರೀಶ ಅಕಮಂಚಿ, ಆರ್. ಕೆ. ಬಿದರಕುಂದಿ, ಚೀಪ್ ಆಫೀಸರ್ ವಿ. ಎಂ. ಪಾಟೀಲ, ಅಮರಖೇಡ, ವಾಲ್ವೇಕರ ಮುಂತಾದವರು ಉಪಸ್ಥಿತರಿದ್ದರು.
ಒಂದು ವಾರ ನಡೆದ ಈ ಶಿಬಿರದಲ್ಲಿ ಎನ್ ಸಿ ಸಿ ಕೆಡಟ್ ಗಳಿಗೆ ಸಶಸ್ತ್ರ ತರಬೇತಿ ನಕ್ಷೆ
ಓದುವಿಕೆ, ಪಿಲ್ಸ್‌ಕ್ರಾಪ್ಸ್, ಬ್ಯಾಟಲ್ ಕ್ರಾಪ್‌ಡೀಲ್, ಟೆಂಟ್ ಪಿಚಿಂಗ ಮತ್ತು ವ್ಯವಸ್ಥೆಗಳು, ಸೇವಾ ವಿಷಯ
ಪರೀಕ್ಷೆ, ಡೀಲ್ ಫರೇಡ್, ಆರೋಗ್ಯ ಮತ್ತು ನೈರ್ಮಲ್ಯದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಮತ್ತು ಗೋವಾ ರಾಜ್ಯದ 500 ಎನ್ ಸಿ ಸಿ ಕೆಡಿಟ್‌ಗಳು ಇದರಲ್ಲಿ ಭಾಗವಹಿಸಿದ್ದರು. ನಾನಾ ಸ್ಪರ್ಧೆಗಳಲ್ಲಿ ಆಯ್ಕೆಯಾದ ಕೆಡಟ್‌ಗಳನ್ನು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಶಿಬಿರಕ್ಕೆ ಆಯ್ಕೆ ಮಾಡಲಾಯಿತು.