Yatnal Appreciation: ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಸೇವೆಯನ್ನು ಶ್ಲಾಘಿಸಿದ ಶಾಸಕ ಯತ್ನಾಳ

ವಿಜಯಪುರ: ನಗರದ ಜೋರಾಪುರ ಪೇಠದ ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಪ್ರತಿಷ್ಠಾಪಿಸಿದ್ದ ಸಂಕಲ್ಪ ಸಿದ್ಧಿ ಗಣಪತಿಯ ವಿಸರ್ಜನೆ ಮೆರವಣಿಗೆಯನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದೇಶೀಯ ಕಲೆ, ಸಾಂಸ್ಕೃತಿಕ ಬಿಂಬವಾದ ಲೇಜಿಮ್ ನ್ನು ಮಂಡಳಿಯ ಕಾರ್ಯಕರ್ತರು ತರಬೇತಿ ಪಡೆದು ಮೆರವಣಿಗೆಯಲ್ಲಿ ಪ್ರದರ್ಶನ ನೀಡುತ್ತಿರುವುದು ಇತರರಿಗೆ ಮಾದರಿಯಾಗಿದೆ.  ಅಲ್ಲದೆ, ಏಳು ದಿನಗಳ ಕಾಲ ಅನೇಕ ಸಾಮಾಜಿಕ ಸಾಂಸ್ಕೃತಿಕ ಮತ್ತು ಉಚಿತ ಲಸಿಕಾ ಮೇಳ ,ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ,ಆರೋಗ್ಯ ಅರಿವು ಮೂಡಿಸುವುದು ,ಉಚಿತ ಆರೋಗ್ಯ ಕಾರ್ಡ್ ವಿತರಿಸುವುದು ,ಪ್ರತಿ ನಿತ್ಯ ಅನ್ನದಾಸೋಹ , ಭರತನಾಟ್ಯ ಪ್ರದರ್ಶನ ,ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನ ಕಾರ್ಯಕ್ರಮಗಳು ಮಾದರಿಯಾಗಿವೆ.  ಗಜಾನನ ಮಂಡಳಿಯು ಇನ್ನೂ ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಗಳನ್ನು ಮಾಡಿ ರಾಜ್ಯದಲ್ಲಿಯೇ ಮಾದರಿ ಗಣೇಶ ಮಂಡಳಿಯಾಗಿ ಹೊರಹೊಮ್ಮಲಿ ಎಂದು ಶುಭ ಕೋರಿದರು.

ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಗಣೇಶ ವಿಸರ್ಜನೆ ಮೆರವಣಿಗೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು

ಈ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಎಕ್ಸಿಕ್ಯೂಟಿವ್ ಎಂಜಿನಿಯರ್ ಶಂಭುಲಿಂಗ ಹೇರಲಗಿ, ಮಂಡಳಿಯ ಅಧ್ಯಕ್ಷ ಶಂಕರ ಮಿರ್ಜಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಾಹುಲ ಜಾಧವ, ಸಂಗಪ್ಪ ಹೇರಲಗಿ, ಪರಶುರಾಮ ರಜಪೂತ, ಮುಖಂಡರಾದ ರೇವಣಸಿದ್ದಪ್ಪ ಗಿಡವೀರ, ಉಮಾಕಾಂತ್ ಲೋಣಿ, ಶಿವರುದ್ರ ಬಾಗಲಕೋಟ, ವಿಶ್ವನಾಥ್ ಬೀಳಗಿ, ಪವಾಡೆಪ್ಪ ಗಿಡವೀರ, ಶಂಕರ ಹೇರಲಗಿ, ಶಶಿ ಜವಳಿ, ಗಣೇಶಪ್ಪ ಮಿರ್ಜಿ, ಪ್ರಶಾಂತ ಕವಿಶೆಟ್ಟಿ, ಸಾಹೇಬಗೌಡ ಪಾಟೀಲ, ಜಿತೇಂದ್ರ ವಂದಾಲ, ಸಿದ್ದು ಅಂಗಡಿ, ಉಮಾಕಾಂತ ಹೇರಲಗಿ, ರಾಜಶೇಖರ ಹುಣಶಾಳ, ಸಿದ್ರಾಮಪ್ಪ ಉಪ್ಪಣಗಿ, ಶಂಕರ ಲೋಣಿ, ಕೊಟ್ರಪ್ಪ ಹುಣಶಾಳ, ಮುಂತಾದವರು ಉಪಸ್ಥಿತರಿದ್ದರು.

ಅನಂತ್ ಗಿಡವೀರ, ಅಮೀತ್ ಕುರ್ಲೆ, ಶಿವಾನಂದ ಗಿಡವೀರ, ರವಿ ಹೇರಲಗಿ, ಮಹೇಶ ಕುರ್ಲೆ, ಆಶಿಶ ಹುಣಶಾಳ, ಧನಂಜಯ ಶಾಪೂರ, ಪಾಲಂಕಿ ಕುರ್ಲೆ, ವಿಜಯ್ ಸೂರ್ಯವಂಶಿ, ರವಿ ಮಿರ್ಜಿ, ರಾಜು ಲೋಣಿ, ಸುರೇಶ ಗಿಡವೀರ, ಶಿವಶಂಕರ ಕುರ್ಲೆ ಮುಂತಾದವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

 

Leave a Reply

ಹೊಸ ಪೋಸ್ಟ್‌