Rain Visit: ಮಳೆ ಪೀಡಿತ ಪ್ರದೇಶಗಳಿಗೆ ಡಿಸಿ ದಾನಮ್ಮನವರ, ಶಾಸಕ ಡಾ. ದೇವಾನಂದ ಚವ್ಹಾಣ, ಎಸಿ ಮಾಲಗತ್ತಿ ಭೇಟಿ, ಪರಿಶೀಲನೆ
ವಿಜಯಪುರ: ಗುಮ್ಮಟ ನಗರಿಯಲ್ಲಿ ಮುಸ್ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವಾರು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಿರುಸಿನಿಂದ ಸುರಿದ ಮಳೆಯಿಂದಾಗಿ ಸಂಜೆ ಸೂರ್ಯಾಸ್ತಕ್ಕೂ ಮುನ್ನವೇ ಭಾರಿ ಕತ್ತಲೆಯ ವಾತಾವರಣ ಉಂಟಾಗಿತ್ತು. ನಂತರ ಸುಮಾರು ಹೊತ್ತು ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳೆಲ್ಲವೂ ಹಳ್ಳಗಳಾಗಿ ಮಾರ್ಪಟ್ಟು ಧಾರಾಕಾರ ನೀರು ಹರಿಯುತ್ತಿತ್ತು. ಮತ್ತೋಂದೆಡೆ ತಗ್ಗು ಪ್ರದೇಶಗಳು ಹೊಂಡಗಳಾಗಿ ಮಾರ್ಪಟ್ಟಿದ್ದವು. ಈ ಮಧ್ಯೆ, ಮನೆಗಳಿಗೆ ನೀರು ನುಗ್ಗಿದ ಪ್ರದೇಶವಾದ ಶಿಕಾರಖಾನೆ ಬಳಿಯ ಗಾಂಧಿನಗರ, ಕಾವಿಪ್ಲಾಟ್ ಸೇರಿದಂತೆ ನಾನಾ ಪ್ರದೇಶಗಳಿಗೆ ವಿಜಯಪುರ […]
Heavy Rain: ಗುಮ್ಮಟ ನಗರಿಯಲ್ಲಿ ಭಾರಿ ಮಳೆ ಹಲವಾರು ಕಡೆ ಮನೆಗಳಿಗೆ ನುಗ್ಗಿದ ನೀರು ಸಾರ್ವಜನಿಕರ ಪರದಾಟ ಸುದ್ದಿಗೆ ಸಂಬಂಧಿಸಿದ ವಿಡಿಯೋ-1.
ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಸಂಜೆ ಸುರಿದ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಜಯಪುರ ನಗರದಲ್ಲಿ ಸಂಜೆ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸುರಿದ ಧಾರಾಕಾರಯಿಂದಾಗಿ ಸಾರ್ವಜಿಕರಿಗೆ ತೀವ್ರ ತೊಂದರೆಯಾಗಿದೆ. ಭಾರಿ ಮೋಡ ಕವಿದ ವಾತಾವರಣ ಮತ್ತು ಧಾರಾಕಾರ ಮಳೆಯಿಂದಾಗಿ ಕೇವಲ ಐದು ಅಡಿ ಎದುರಿಗಿದ್ದ ವಸ್ತುಗಳು ಸ್ಪಷ್ಟವಾಗಿ ಕಾಣಿಸದಂಥ ಪರಿಸ್ಥಿತಿ ಉಂಟಾಗಿತ್ತು. ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲನಿ, ಶಹಾಪೇಟೆ, ಅಪ್ಸರಾ ಟಾಕೀಸ್, ಆದರ್ಶ ನಗರ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಸಾರ್ವಜನಿಕರು ಹೈರಾಗಣಾಗಿದ್ದಾರೆ. […]
NEET Honour: ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶಾಂತಿನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ
ವಿಜಯಪುರ: ನೀಟ್(NEET) ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶಾಂತಿನಿಕೇತನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ವಿಜಯಪುರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ, ವಿದ್ಯಾರ್ಥಿಗಳ ಒಳ್ಳೆಯ ಫಲಿತಾಂಶದ ಹಿಂದೆ ಸತತ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಇರುತ್ತದೆ. ಅವಕಾಶವಿದ್ದಾಗ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪಿಯು ಹಂತವು ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖವಾಗಿದೆ. ಜೀವನದ ಉನ್ನತ ಮಟ್ಟಕ್ಕೆ ಹೋಗುಲು ಹಲವಾರು ಅವಕಾಶಗಳಿದ್ದು, ಈ ಸಾಧನೆಗೆ […]
Saint Heritage: ಭಾರತೀಯ ಸಂತ ಪರಂಪರೆಯಲ್ಲಿ ಬಂಥನಾಳ ಲಚ್ಯಾಣ ಪರಂಪರೆಗೆ ಮಹತ್ವದ ಸ್ಥಾನವಿದೆ- ಗುರುಸಂಗನ ಬಸವ ಶ್ರೀ
ವಿಜಯಪುರ: ಭಾರತೀಯ ಸಂತ ಪರಂಪರೆಯಲ್ಲಿ ಬಂಥನಾಳ- ಲಚ್ಶಾಣ ಪರಂಪರೆಗೆ ಮಹತ್ವದ ಸ್ಥಾನವಿದೆ ಎಂದು ಯರನಾಳದ ಗುರುಸಂಗನಬಸವ ಶ್ರೀಗಳು ಹೇಳಿದರು. ವಿಜಯಪುರ ತಾಲೂಕಿನ ಕಗ್ಗೊಡ ಗ್ರಾಮದಲ್ಲಿ ಸಿದ್ಧಲಿಂಗ ಮಹಾರಾಜರ ಮಠದಲ್ಲಿ ಆಯೋಜಿಸಲಾಗಿದ್ದ ಲಚ್ಶಾಣ ಸಿದ್ಧಲಿಂಗ ಮಹಾರಾಜರ ಜೀವನದರ್ಶನ ಪ್ರವಚನ ಮಂಗಲ ಹಾಗೂ ಶ್ರೀಮಠದ ಮಾಧವಾನಂದ ಮಹಾರಾಜರು ಲೋಕ ಕಲ್ಶಾಣಾರ್ಥವಾಗಿ 41ದಿನಗಳ ಕಾಲ ಕೈಗೊಂಡಿದ್ದ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಬಂಥನಾಳದ ಶಂಕರಲಿಂಗ ಮಹಾರಾಜರ ಪ್ರೀತಿಯ ಶಿಷ್ಯರಾಗಿದ್ದ ಲಚ್ಶಾಣದ ಸಿದ್ಧಲಿಂಗ ಮಹಾರಾಜರು ಹಲವು ಪವಾಡಗಳನ್ನು ಮಾಡಿ ಭಕ್ತರಿಗೆ ನೆರವಾಗಿದ್ದರು […]