Saint Heritage: ಭಾರತೀಯ ಸಂತ ಪರಂಪರೆಯಲ್ಲಿ ಬಂಥನಾಳ ಲಚ್ಯಾಣ ಪರಂಪರೆಗೆ ಮಹತ್ವದ ಸ್ಥಾನವಿದೆ- ಗುರುಸಂಗನ ಬಸವ ಶ್ರೀ

ವಿಜಯಪುರ: ಭಾರತೀಯ ಸಂತ ಪರಂಪರೆಯಲ್ಲಿ ಬಂಥನಾಳ- ಲಚ್ಶಾಣ ಪರಂಪರೆಗೆ ಮಹತ್ವದ ಸ್ಥಾನವಿದೆ ಎಂದು ಯರನಾಳದ ಗುರುಸಂಗನಬಸವ ಶ್ರೀಗಳು ಹೇಳಿದರು.

ವಿಜಯಪುರ ತಾಲೂಕಿನ ಕಗ್ಗೊಡ ಗ್ರಾಮದಲ್ಲಿ ಸಿದ್ಧಲಿಂಗ ಮಹಾರಾಜರ ಮಠದಲ್ಲಿ ಆಯೋಜಿಸಲಾಗಿದ್ದ ಲಚ್ಶಾಣ ಸಿದ್ಧಲಿಂಗ ಮಹಾರಾಜರ ಜೀವನದರ್ಶನ ಪ್ರವಚನ ಮಂಗಲ ಹಾಗೂ ಶ್ರೀಮಠದ ಮಾಧವಾನಂದ ಮಹಾರಾಜರು ಲೋಕ ಕಲ್ಶಾಣಾರ್ಥವಾಗಿ 41ದಿನಗಳ ಕಾಲ ಕೈಗೊಂಡಿದ್ದ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಗ್ಗೊಡದಲ್ಲಿ ಯರನಾಳ ಯರನಾಳದ ಗುರುಸಂಗನಬಸವ ಶ್ರೀಗಳು ಆಶೀರ್ವಚನ ನೀಡಿದರು

ಬಂಥನಾಳದ ಶಂಕರಲಿಂಗ ಮಹಾರಾಜರ ಪ್ರೀತಿಯ ಶಿಷ್ಯರಾಗಿದ್ದ ಲಚ್ಶಾಣದ ಸಿದ್ಧಲಿಂಗ ಮಹಾರಾಜರು ಹಲವು ಪವಾಡಗಳನ್ನು ಮಾಡಿ ಭಕ್ತರಿಗೆ ನೆರವಾಗಿದ್ದರು ಎಂದು ಗುರುಸಂಗನ ಬಸವ ಶ್ರೀಗಳು ಹೇಳಿದರು.

ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯರು ಮಾತನಾಡಿ ಸಾಧು ಸಂತರು ಮಾಡುವ ಜಪತಪಗಳು ಲೋಕ ಕಲ್ಶಾಣಕ್ಕಾಗಿಯೇ ಹೊರತು ಅವರ ಹಿತಕ್ಕಾಗಿ ಅಲ್ಲ.  ಮಾಧವಾನಂದರು ಮಾಡಿದ ಅನುಷ್ಠಾನದಿಂದ ಇಂದು ಕಗ್ಗೋಡದ ಸಿಂದ್ಧಲಿಂಗ ಮಹಾರಾಜರ ಮಠವು ಪಾವನ ಕ್ಷೇತ್ರವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗದುಗಿನ ವೀರಯ್ಶ ಶಾಸ್ತ್ರಿಗಳು ಲಚ್ಶಾಣ ಸಿದ್ಧಲಿಂಗ ಮಹಾರಾಜರ ಜೀವನ ದರ್ಶನ ಪ್ರವಚನ ಮುಕ್ತಾಗೊಳಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಧವಾನಂದ ಪ್ರವಚನಕಾರ ವೀರಯ್ಶ ಶಾಸ್ತ್ರಿ ಹಾಗೂ 41 ದಿನಗಳ ಕಾಲ ಗವಾಯಿ ದೀಪಕ ಹಿಜೇರಿ ನಿರಂತರವಾಗಿ ಭಜನಾ ಸೇವೆ ಮಾಡಿದ ಬಸವೇಶ್ವರ ಭಜನಾ ಮಂಡಳಿಯ ಸದಸ್ಶರಿಗೆ ಜಾತ್ರಾ ಕಮೀಟಿ ವತಿಯಿಂದ ಸನ್ಮಾನಿಸಲಾಯಿತು.  ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸರಡಗಿಯ ಶಕ್ತಿಪೀಠದ ಶಿವಕುಮಾರ ಶ್ರೀ ವರಲಿಂಗ ಸ್ವಾಮೀಜಿ, ಶ್ರೀ ಬೀರಪ್ಪ ಮುತ್ಶಾ, ರಾಯಚೂರ ಹಣಮಂತ ಮಹಾರಾಜರು, ಕಕ್ಕಳಮೇಲಿ ರಾಚಯ್ಶ ಹಿರೇಮಠ, ಕಲ್ಶಾಣಪ್ಪ ಉಕಮನಾಳ ಸೇರಿದಂತೆ ಜಾತ್ರಾ ಕಮೀಟಿ ಸದಸ್ಶರು, ಕಗ್ಗೋಡ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌