Heavy Rain: ಗುಮ್ಮಟ ನಗರಿಯಲ್ಲಿ ಭಾರಿ ಮಳೆ ಹಲವಾರು ಕಡೆ ಮನೆಗಳಿಗೆ ನುಗ್ಗಿದ ನೀರು ಸಾರ್ವಜನಿಕರ ಪರದಾಟ ಸುದ್ದಿಗೆ ಸಂಬಂಧಿಸಿದ ವಿಡಿಯೋ-1.

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಸಂಜೆ ಸುರಿದ ಧಾರಾಕಾರ  ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿಜಯಪುರ ನಗರದಲ್ಲಿ ಸುರಿದ ಧಾರಾಕಾರ ಮಳೆಯ ದೃಶ್ಯ

ವಿಜಯಪುರ ನಗರದಲ್ಲಿ ಸಂಜೆ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸುರಿದ ಧಾರಾಕಾರಯಿಂದಾಗಿ ಸಾರ್ವಜಿಕರಿಗೆ ತೀವ್ರ ತೊಂದರೆಯಾಗಿದೆ.  ಭಾರಿ ಮೋಡ ಕವಿದ ವಾತಾವರಣ ಮತ್ತು ಧಾರಾಕಾರ ಮಳೆಯಿಂದಾಗಿ ಕೇವಲ ಐದು ಅಡಿ ಎದುರಿಗಿದ್ದ ವಸ್ತುಗಳು ಸ್ಪಷ್ಟವಾಗಿ ಕಾಣಿಸದಂಥ ಪರಿಸ್ಥಿತಿ ಉಂಟಾಗಿತ್ತು.

ನಗರದ ಗಚ್ಚಿನಕಟ್ಟಿ ಕಾಲನಿಯಲ್ಲಿ ಹೊಂಡದಂತೆ ಗೋಚರಿಸುತ್ತಿರುವ ಮಳೆಯ ನೀರು

ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲನಿ, ಶಹಾಪೇಟೆ, ಅಪ್ಸರಾ ಟಾಕೀಸ್, ಆದರ್ಶ ನಗರ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಸಾರ್ವಜನಿಕರು ಹೈರಾಗಣಾಗಿದ್ದಾರೆ.

ಗಚ್ಚಿನಕಟ್ಟಿ ಕಾಲನಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಕೈಕೊಟ್ಟ ವಿದ್ಯುತ್ ನಿಂದಾಗಿ ಸಾರ್ವಜನಿಕ ಅಲ್ಲಿನ ಜನತೆ ಪರದಾಡುವಂತಾಗಿತ್ತು.  ಇಲ್ಲಿನ ರಸ್ತೆಗಳು ಹಳ್ಳಗಂತಾಗಿದ್ದು, ಧೋ ಎಂದು ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ದೃಷ್ಯಗಳು ಮಳೆಯ ಪ್ರಮಾಣಕ್ಕೆ ಸಾಕ್ಷಿಯಾಗಿತ್ತು.

ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲನಿಯಲ್ಲಿ ರಸ್ತೆಗಳಲ್ಲಿ ಹಳ್ಳದಂತೆ ಹರಿಯುತ್ತಿರುವ ನೀರು

ಮತ್ತೋಂದೆಡೆ ಶಹಾಪೇಟೆ ಮತ್ತು ಅಪ್ಸರಾ ಟಾಕೀಸ್ ಬಳಿಯೂ ಮಳೆಯ ಅಪಾರ ಪ್ರಮಾಣ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನರ ಗೋಳು ಹೇಳತೀರದಾಗಿತ್ತು.  ಜನರು ಮನೆಯಲ್ಲಿ ನೀರು ನುಗ್ಗಿದ್ದರಿಂದ ಹೊರಗಡೆ ಹೋಗಲು ಪ್ರಯತ್ನಿಸಿದರೂ ಹೊರಗಡೆ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿತ್ತು.

ಗಚ್ಚಿನಕಟ್ಟಿ ಕಾಲನಿಯಲ್ಲಿ ಮನೆಗಳಿಗೆ ನುಗ್ಗಿದ ನೀರು

ಆದರ್ಶ ನಗರದಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾಗಿರುವ ಸಿಸಿ ರಸ್ತೆಯ ಮಧ್ಯದಲ್ಲಿಯ ಚರಂಡಿಯ ನೀರು ಚೆಂಬರ್ ಮೂಲಕ ಹೊರಗೆ ಹರಿಯಲಾರಂಭಿಸಿದೆ.  ಮತ್ತೋಂದರೆ ಕುಸೂರು ಎಂಬುವರ ಮನೆಗೆ ನೀರು ನುಗ್ಗಿದೆ.

ಆದರ್ಶ ನಗರದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿರುವ ಸಿಸಿ ರಸ್ತೆಯ ಮೇಲೆ ಚೇಂಬರ್ ಮೂಲಕ ಹೊರ ಬರುತ್ತಿರುವ ಚರಂಡಿ ನೀರು

ಅಪ್ಸರಾ ಟಾಕೀಸ್ ಬಳಿ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಬೈಕುಗಳು ಮತ್ತು ಕಾರುಗಳು ಮುಳುಗಡೆಯಾಗಿ ಸಿನೇಮಾ ವೀಕ್ಷಣೆಗೆ ಬಂದಿದ್ದ ಜನರ ಗೋಳು ಹೇಳತೀರದಾಗಿತ್ತು.  ಮನರಂಜನೆಗಾಗಿ ಚಿತ್ರಮಂದಿರಕ್ಕೆ ಬಂದರೆ ಹೊರಗಡೆ ಅವರು ತಂದಿದ್ದ ವಾಹನಗಳು ನೀರಿನಲ್ಲಿ ಮುಳುಗಿ ತೊಂದರೆ ಎದುರಿಸಿದರು.

ಅಪ್ಸರಾ ಟಾಕೀಸ್ ನಲ್ಲಿ ನೀರನಲ್ಲಿ ಮುಳುಗಿರುವ ನಾನಾ ವಾಹನಗಳು

ಈ ಮಧ್ಯೆ, ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಹುತಾತ್ಮರ ವೃತ್ತ ಅಂದರೆ ಮೀನಾಕ್ಷಿ ಚೌಕಿನಲ್ಲಿಯೂ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಜನರ ಒಡಾಟ ಸ್ಥಗಿತಗೊಂಡಿತ್ತು.  ಈ ಪ್ರದೇಶದ ಮೇಲ್ಭಾಗದಲ್ಲಿರುವ ಪ್ರದೇಶದ ಅಪಾರ ಪ್ರಮಾಣ ನೀರು ಹರಿದು ಬಂದಿದ್ದರಿಂದ ಅಲ್ಲಿ ಹೊಂಡದ ದೃಶ್ಯ ಉಂಟಾಗಿತ್ತು.  ಇಲ್ಲಿಯೂ ಕೂಡ ನಾನಾ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.  ಬೈಕ್, ಸ್ಕೂಟರ್, ಅಟೋ ಮತ್ತು ಕಾರುಗಳು ನೀರಿನಲ್ಲಿ ಮುಳುಗಿದ್ದರಿಂದ ಅವುಗಳ ಮಾಲಿಕರಿಗೆ ತೀವ್ರ ತೊಂದರೆಯಾಯಿತು.  ಈ ಅಟೋಮೊಬೈಲ್ ವಾಹನಗಳ ಎಂಜಿನ್ ಗಳು ನೀರನಲ್ಲಿ ಮುಳುಗಿದ್ದರಿಂದ ಬಹಳಷ್ಟು ಕಡೆಗಳಲ್ಲಿ ನಾನಾ ತರಹದ ವಾಹನಗಳಿಗೆ ಸಂಕಷ್ಟ ಎದುರಾಗಿದೆ.

ಬಿ ಎಲ್ ಡಿ ಇ ಆಸ್ಪತ್ರೆಯ ಎದುರಿಗಿರುವ ಬಡಾವಣೆಯಲ್ಲಿ ನೀರನಲ್ಲಿ ಮುಳುಗಡೆಯಾಗಿರುವ ರಸ್ತೆ

ವಿಜಯಪುರ ನಗರದ ಬಹುತೇಕ ರಸ್ತೆಗಳು ಧಾರಾಕಾರ ಮಳೆಯಿಂದಾಗಿ ಹಳ್ಳಗಳಾಗಿ ಮಾರ್ಪಟ್ಟಿದ್ದವು.  ಎಲ್ಲಿ ನೋಡಿದರೂ ನೀರೇ ನೀರು ಕಾಣುವಂತಾಗಿತ್ತು.

Leave a Reply

ಹೊಸ ಪೋಸ್ಟ್‌