ವಿಜಯಪುರ: ಸಹಕಾರ ಬ್ಯಾಂಕಗಳು ಸರ್ವ ಸದಸ್ಯರ ಮೇಲೆ ನಿಂತಿವೆ ಎಂದು ವಿಜಯಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಮತ್ತು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಕರ್ನಾಟಕ ಮೈನಾರಿಟಿ ಕೋ- ಆಪರೇಟಿವ್ ಸಹಕಾರಿ ಬ್ಯಾಂಕಿನ 3ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಬ್ಯಾಂಕಗಳು ಮುಚಲ್ಪಡುವ ಸಮಯದಲ್ಲಿ ಯಶಸ್ಸು ಕಂಡ ಏಕೈಕ ಕರ್ನಾಟಕ ಮೈನಾರಿಟಿ ಸಹಕಾರ ಬ್ಯಾಂಕ್ ಮೂರನೇ ಶಾಖೆ ಪ್ರಾರಂಭಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
2004 ಆರಂಭವಾದ ಬ್ಯಾಂಕ್ ಇಂದು 18 ವರ್ಷದಲ್ಲಿ ಸುಮಾರು ರೂ. 20 ಕೋ. ವ್ಯವಹಾರ ಮಾಡಿರುವುದು ಗಮನಾರ್ಹವಾಗಿದೆ. ಆರು ವರ್ಷಗಳಿಂದ ಜಿಲ್ಲೆಯ ಸಹಕಾರ ಬ್ಯಾಂಕಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಶಿವಾನಂದ ಪಾಟೀಲ ಹೇಳಿದರು.
ಅಧ್ಯಕ್ಷ ಅಬ್ದುಲ್ರಹೇಮಾನ ಹಿಪ್ಪರಗಿ ಪ್ರಾಸ್ತವಿಕವಾಗಿ ಮಾತನಾಡಿ, ಬ್ಯಾಂಕ್ 18 ವರ್ಷಗಳಲ್ಲಿ ಆರು ವಿಡಿಸಿಸಿ ಅಧಿನದಲ್ಲಿ ಪ್ರಥಮ ಬಹುಮಾನ ಪಡೆದ ಏಕೈಕ ಬ್ಯಾಂಕ್ ಆಗಿದೆ. ನಮ್ಮದು. ದುಡಿದು ತಿನ್ನುವ ಕೈಗಳಿಗೆ ಸಹಕಾರ ನೀಡುವ ಬ್ಯಾಂಕ್ ಆಗಿದೆ. ನಮಗೆ ಷೇರುದಾರರೇ ಜೀವಾಳ. ನಮ್ಮ ನಿರ್ದೇಶಕರು ಶ್ರಮ ಇಂದು ಒಟ್ಟು ನಾಲ್ಕು ಶಾಖೆ ಪ್ರಾರಂಭವಾಗಲು ಸಹಾಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮನಗೂಳಿಯ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಬ್ಯಾಂಕು ಕರ್ನಾಟಕಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಲಿ ಎಂದು ಶುಭ ಕೋರಿದರು.
ಹಜರತ್ ಸೈಯದ್ ಅಕ್ತರ ಪಾಶ್ಯಾ ಹುಸೇನ್ಚಿಸ್ತಿ, ಸಜ್ಜಾದೆಪೀರಾ ಮುಶ್ರೀಫ್, ಎಸ್. ಎಂ. ಪಾಟೀಲ ಗಣಿಹಾರ, ಚಿದಾನಂದ ನಿಂಬಾಳ, ಚಂದ್ರಶೇಖರ ಪಾಟೀಲ, ಕಿರಣ ಹೋಟಗಿ, ಸಲೀಮ್ ನಾಗಠಾಣ, ಬಸವರಾಜ ಸೋಮಾಪುರ, ಎಸ್. ಜಿ. ಕುಂಬಾರ, ಸೈಯದ್ ನಿಡೋಣಿ, ಶಾಹಿದ್ ಹೊರ್ತಿ, ಅಬ್ದುಲ್ ರೌಫ್ ಕಾಖಂಡಕಿ, ಆರ್. ಬಿ. ಜಾಕ್ಕನಗೌಡರ, ಜಿ. ಎಂ. ಟಂಕಸಾಲಿ, ಬಾಗಲಕೋಟ, ಹೊನ್ನಮಲ್ಲಗೌಡ ಸಾರವಾಡ, ಸಲೀಂ ಕಲಾದಗಿ, ಸುನಿಲ ಬಿರಾದಾರ, ಅನಿಲಕುಮಾರ ರಾಮಾಪುರ, ನಿರ್ದೇಶಕರಾದ ಲಿಯಾಕತಲಿ ಸೌದಿ, ಮಹಮ್ಮದ್ ಯೂಸುಫ್ ನಾಗಠಾಣ, ಮೆಹಬುಬಸಾಬ್ ಹೊನ್ನುಟಗಿ, ಸಾಹೇಬಲಾಲ್ ಬಾಗಮಾರೆ, ನಂಬಿರಸೂಲ್ ಮೇಟಿ, ಮೈನೂದ್ದಿನ ಕೋತ್ವಾಲ, ಮೆಹಬೂಬ್ ಚೌದ್ರಿ, ರಿಹಾನಾ ತೆಲಸಂಗ, ಜುಲೇಖಾ ಮಕಾಂದಾರ, ಕಮಲವ್ವ ಭಜಂತ್ರಿ ಹಾಗು ಶೇರದಾರರು ಉಪಸ್ಥಿತರಿದ್ದರು.
ಎಂ. ಎಂ. ನಾಗಠಾಣ ಸ್ವಾಗತಿಸಿದರು, ಡಾ. ಎಸ್. ಸಿ. ಮುಲ್ಲಾ ನಿರೂಪಿಸಿದರು. ಬ್ಯಾಂಕಿನ ಸಿಇಓ ಎಂ. ಯು. ನಗರಸಿ ವಂದಿಸಿದರು.