Siddheshwar Bank: ಶ್ರೀ ಸಿದ್ದೇಶ್ವರ ಬ್ಯಾಂಕಿಗೆ ಈ ವರ್ಷ ರೂ. 1. 75 ಕೋ. ನಿವ್ವಳ ಲಾಭ- ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಆಡಳಿತ ಮಂಡಳಿ

ವಿಜಯಪುರ: ನಗರ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ 110ನೇ ಸರ್ವ ಸಾಧಾರಣ ಸಭೆ ನಗರದ ಬಂಥನಾಳ ಪರಮಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಸಮುದಾಯ ಭವನದಲ್ಲಿ ನಡೆಯಿತು.  

ಬ್ಯಾಂಕಿನ ಹಿರಿಯ ಸದಸ್ಯರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಸಸಿಗೆ ನೀರುಣಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಸಭೆಯಲ್ಲಿ ನಾನಾ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು

 

ಸಭೆಯಲ್ಲಿ ಮಾತನಾಡಿದ ಬ್ಯಾಂಕಿನ ಅದ್ಯಕ್ಷ ಪ್ರಕಾಶ ಎಸ್. ಬಗಲಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ರೂ. 1 ಕೋಟಿ 75 ಲಕ್ಷ 44 ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಮನೆ ನಿರ್ಮಾಣಕ್ಕೆ ಹಾಗೂ ವ್ಯವಹಾರಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುವುದು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಸದಸ್ಯರು ಮತ್ತು ಬ್ಯಾಂಕಿನ ಹಿತೈಷಿಗಳಿಂದಾಗಿ ರೂ. 588.53 ಕೋ. ಠೇವಣಿ ಮತ್ತು ರೂ. 674.24 ಕೋ. ದುಡಿಯುವ ಬಂಡವಾಳ ಹೊಂದಿದೆ ಎಂದು ಪ್ರಕಾಶ ಎಸ್. ಬಗಲಿ ತಿಳಿಸಿದರು.

ಸಭೆಯಲ್ಲಿ ಸದಸ್ಯರು ಕೇಳಿದ ನಾನಾ ಪ್ರಶ್ನೆಗಳಿಗೆ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ ಎಸ್. ಬಗಲಿ, ನಿರ್ದೇಶಕ ರಮೇಶ ಬಿದನೂರ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ಎಲ್. ಇಂಡಿ ಅವರು ಉತ್ತರ ನೀಡಿದರು.

ಈ ಸಭೆಯ ಆರಂಭದಲ್ಲಿ ಈ ಹಿಂದೆ ನಿಧನರಾದ ಹಿರಿಯರು ನಾನಾ ಗಣ್ಯರು ಮತ್ತು ಬ್ಯಾಂಕಿನ ಸದಸ್ಯರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಲ್ಲದೇ, ನಾನಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಹಾಗೂ ಶಿಕ್ಷಣದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಬೋರಮ್ಮ ಬಿ. ಗೊಬ್ಬೂರ, ನಿರ್ದೇಶಕರಾದ ಶ್ರೀಹರ್ಷ ಎಸ್. ಪಾಟೀಲ, ಗುರು ಎಸ್. ಗಚ್ಚಿನಮಠ, ವಿಜಯಕುಮಾರ ಆರ್. ಅವರಂಗಬಾದ, ವಿಶ್ವನಾಥ ಪಾಟೀಲ(ಮಸಬಿನಾಳ), ಸುರೇಶ ಜಿ. ಗಚ್ಚಿನಕಟ್ಟಿ, ಈರಣ್ಣ ಪಟ್ಟಣಶೆಟ್ಟಿ, ರಾಜೇಂದ್ರ ಪಾಟೀಲ(ಉಪ್ಪಲದಿನ್ನಿ), ರಮೇಶ ಬಿದನೂರ, ರವೀಂದ್ರ ಎಸ್. ಬಿಜ್ಜರಗಿ, ವಿಜಯಕುಮಾರ ಇಜೇರಿ, ವೈಜನಾಥ್ ಡಿ. ಕರ್ಪೂರಮಠ, ಶಾಂತಪ್ಪ ಎಸ್. ಜತ್ತಿ. ಸೌಭಾಗ್ಯ ಎಸ್. ಭೋಗಶೆಟ್ಟಿ, ಗುರುರಾಜ ಎಸ್. ಗಂಗನಹಳ್ಳಿ, ಸಾಯಬಣ್ಣಾ ಎಸ್. ಭೋವಿ, ಅಮೋಘಸಿದ್ಧ ಎಂ. ನಾಯ್ಕೋಡಿ, ಸಂಗನಗೌಡ ಎಸ್. ಪಾಟೀಲ, ಮಂಜುನಾಥ ಗುಂದಗಿ ಹಾಗೂ ಬ್ಯಾಂಕಿನ ಸದಸ್ಯರು, ಸಿಬ್ಬಂದಿ, ಸಾಹಿತಿಗಳು ನಾನಾ ಸಂಘ ಸಂಸ್ಥೆಗಳ  ಪದಾಧಿಕಾರಿಗಳು ಮತ್ತು  ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌