Premanand Devotion: ಶ್ರೀ ಸಿದ್ಧರಾಮೇಶ್ವರನಿಗೆ ಆರು ವರ್ಷಗಳಿಂದ ಭಕ್ತಿ ಸೇವೆ ಮಾಡುತ್ತ ಸಂತಸದಿಂದಿರುವ ಪ್ರೇಮಾನಂದ- ಗಮನ ಸೆಳೆಯುತ್ತಿದೆ ಹತ್ತಿ ಗೆಳೆಯರ ಬಳಕದ ಕಾಯಕ
ವಿಜಯಪುರ: ಭಕ್ತರು ತಮ್ಮಿಷ್ಟದ ದೇವರಿಗೆ ನಾನಾ ರೀತಿಯಲ್ಲಿ ಸೇವೆ ಸಲ್ಲಿಸುವುದು ವಾಡಿಕೆ. ಆದರೆ, ಬಸವ ನಾಡಿನ ಈ ಗೆಳೆಯರ ಬಳಗದ ಕಾಯಕ ಸತತ ಆರು ವರ್ಷಗಳಿಂದ ಪ್ರತಿ ವಾರ ತಪ್ಪದೆ ಸಾಗಿದೆ. ದೇವರು ಮತ್ತು ಸಮಾಜ ಸೇವೆಯ ಮಾಡುವ ಮೂಲಕ ಸಂತಸ ಪಡುತ್ತಿರುವ ಪ್ರೇಮಾನಂದನ ಸ್ಟೋರಿ ಇಲ್ಲಿದೆ. ಗೆಳೆಯರ ಬಳಗದ ಹೆಸರಿನಲ್ಲಿ ಯುವಪಡೆ ಮೋಜು ಮಸ್ತಿಯಲ್ಲಿ ತೊಡಗುವ ಹಲವಾರು ಉದಾಹರಣೆಗಳಿಗೆ ಅಪವಾದವಾಗಿದೆ ಬಸವ ನಾಡಿನ ಈ ಸ್ನೇಹಿತರ ಸ್ಟೋರಿ. ಸತತ 350 ವಾರ ಅಂದರೆ ಕಳೆದ ಆರು […]
BLDE Convocation: ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಜ್ಞಾನವೃದ್ಧಿ ಅಗತ್ಯ- ಬಿ ಎಲ್ ಡಿ ಇ ಘಟಿಕೋತ್ಸವದಲ್ಲಿ ಡಾ. ಪಿ. ವಿ. ವಿಜಯರಾಘವನ್ ಭಾಷಣ
ವಿಜಯಪುರ: ಶಿಕ್ಷಣದ ಎಲ್ಲ ಕ್ಷೇತ್ರಗಳಲ್ಲೂ ಈಗ ತ್ವರಿತವಾಗಿ ಬದಲಾವಣೆಯಾಗುತ್ತಿದ್ದು ಜೀವನದಲ್ಲಿ ನಿರಂತರವಾಗಿರುವ ಕಲಿಕೆಗೆ ಜ್ಞಾನವೃದ್ಧಿ ಅಗತ್ಯವಾಗಿದೆ ಎಂದು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ವಿ. ವಿಜಯರಾಘವನ್ ಹೇಳಿದ್ದಾರೆ. ವಿಜಯಪುರದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ವೃತ್ತಿ ಜೀವನದಲ್ಲಿ ಯಶಸ್ವಿಗೆ ಕೌಶಲ್ಯ ಮಹತ್ವದ್ದಾಗಿದೆ. ಬದುಕಿನಲ್ಲಿ ಹೊಸತನ, ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಕಲಿಯಲು ಕೊನೆ ಎಂಬುದಿಲ್ಲ. ಯಾವುದೇ […]
Jammu Gold: ಜಮ್ಮುವಿನ ಯುವ ವೈದ್ಯನಿಗೆ ಒಲಿದು ಬಂದ ಆರು ಚಿನ್ನದ ಪದಕಗಳು- ಬಿ ಎಲ್ ಡಿ ಇ ಡೀಮ್ಡ್ ವಿವಿ ಘಟಿಕೋತ್ಸವದ ವಿಶೇಷ
ವಿಜಯಪುರ: ಆತ ಜಮ್ಮುವಿನ ಯುವಕ. ತಂದೆ ಯೋಗೇಶ ಅರೊರಾ ಎನ್ ಜಿ ಓ ಒಂದರಲ್ಲಿ ಭದ್ರತಾ ವಿಭಾಗದ ಮುಖ್ಯ ಆಡಳಿತಾಧಿಕಾರಿ. ತಾಯಿ ರೊಮಿಕಾ ಅರೊರಾ ಪ್ರಾಥಮಿಕ ಶಾಲೆಯ ಶಿಕ್ಷಕಿ. ವೈದ್ಯನಾಗಬೇಕೆಂಬ ಈ ವಿದ್ಯಾರ್ಥಿಯ ಛಲ ಈಗ ಈಡೇರಿದ್ದಷ್ಟೇ, ಅಲ್ಲ, ಎಂಬಿಬಿಎಸ್ ಪದವಿಯೊಂದಿಗೆ ಆರು ಚಿನ್ನದ ಪದಕಗಳು ಈತನಿಗೆ ಬಯಸದೇ ಬಂದಿರುವುದು ವಿಶೇಷ. ಈ ಯುವ ವೈದ್ಯನ ಹೆಸರು ಗೌರವ ಅರೊರಾ. ಬಸವ ನಾಡು ವಿಜಯಪುರದಲ್ಲಿ ನಡೆದ ಪ್ರತಿಷ್ಠಿತ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ […]