BLDE Convocation: ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಜ್ಞಾನವೃದ್ಧಿ ಅಗತ್ಯ- ಬಿ ಎಲ್ ಡಿ ಇ ಘಟಿಕೋತ್ಸವದಲ್ಲಿ ಡಾ. ಪಿ. ವಿ. ವಿಜಯರಾಘವನ್ ಭಾಷಣ

ವಿಜಯಪುರ: ಶಿಕ್ಷಣದ ಎಲ್ಲ ಕ್ಷೇತ್ರಗಳಲ್ಲೂ ಈಗ ತ್ವರಿತವಾಗಿ ಬದಲಾವಣೆಯಾಗುತ್ತಿದ್ದು ಜೀವನದಲ್ಲಿ ನಿರಂತರವಾಗಿರುವ ಕಲಿಕೆಗೆ ಜ್ಞಾನವೃದ್ಧಿ ಅಗತ್ಯವಾಗಿದೆ ಎಂದು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ವಿ. ವಿಜಯರಾಘವನ್ ಹೇಳಿದ್ದಾರೆ.

ವಿಜಯಪುರದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ವೃತ್ತಿ ಜೀವನದಲ್ಲಿ ಯಶಸ್ವಿಗೆ ಕೌಶಲ್ಯ ಮಹತ್ವದ್ದಾಗಿದೆ. ಬದುಕಿನಲ್ಲಿ ಹೊಸತನ, ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಕಲಿಯಲು ಕೊನೆ ಎಂಬುದಿಲ್ಲ. ಯಾವುದೇ ವೃತ್ತಿಯಲ್ಲಿ ಕೌಶಲ್ಯದ ಜೊತೆ ಉತ್ತಮ ಸಂವಹನವೂ ಮುಖ್ಯ. ದೇವರಲ್ಲಿ ನಂಬಿಕೆ ಇಟ್ಟು ನಿಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿದರೆ ಅದಕ್ಕೆ ತಕ್ಕ ಗೌರವ ತಾನಾಗಿಯೇ ಬರುತ್ತದೆ ಎಂದು ಅವರು ವೈದ್ಯಕೀಯ ಪದವೀಧರರಿಗೆ ಕಿವಿಮಾತು ಹೇಳಿದರು.

ಘಟಿಕೋತ್ಸವ ಭಾಷಣ ಮಾಡಿದ ಉಪಕುಲಪತಿ ಡಾ. ಪಿ. ವಿ. ವಿಜಯರಾಘವನ್

ಅಂತರಾಳದಿಂದ ಬರುವ ಆತ್ಮಸಂತೋಷ ಕುಟುಂಬ ಮತ್ತು ಸಮಾಜಕ್ಕೆ ಉತ್ತಮ ಸೇವೆಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ ಅವರು, ಕ್ರಿಕೆಟ್ ಆಟಗಾರರಂತೆ ನಮಗೆ ನಮ್ಮ ಸಾಮಥ್ರ್ಯದಲ್ಲಿ ನಂಬಿಕೆ ಮತ್ತು ವಿಶ್ವಾಸ ಇರಬೇಕು. ಧನಾತ್ಮಕ ಮನೋಭಾವದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅನಗತ್ಯ ಒತ್ತಡಕ್ಕೆ ಒಳಗಾಗದೇ ನಿರ್ಭೀತಿಯಿಂದ ಮುನ್ನಡೆಯಬೇಕು. ಮುಂದಿನ 25-26 ವರ್ಷಗಳು ನಿಮ್ಮ ಜೀವನವನ್ನು ರೂಪಿಸುವುದರ ಜೊತೆಗೆ ದೇಶದ ಭವಿಷ್ಯವನ್ನೂ ನಿರ್ಧರಿಸಲಿವೆ. ನಿಮಗೆ ವಹಿಸಲಾಗುವ ಜವಾಬ್ದಾರಿಗಳನ್ನು ಶ್ರಮವಹಿಸಿ, ಪ್ರಾಮಾಣಿಕವಾಗಿ ಮಾಡಿ. ಯಶಸ್ಸು ಕೇವಲ ಒಂದು ದಿನದಲ್ಲಿ ಸಿಗುವುದಿಲ್ಲ. ಸತತ ಪ್ರಯತ್ನ ಮತ್ತು ಶಿಸ್ತಿನಿಂದ ಅದು ಲಭಿಸುತ್ತದೆ. ತಾವೆಲ್ಲರೂ ನವೀನ ಮತ್ತು ಸೃಜನಶೀಲರಾಗಿ ಕೆಲಸ ಮಾಡಿ. ಈ ಸಮಾಜವನ್ನು ಉತ್ತಮವಾಗಿ ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ಗಮನವಿರಲಿ. ನಿಮ್ಮ ಸ್ವಂತಿಕೆಗಾಗಿ ಸಣ್ಣ ಪ್ರಮಾಣದಲ್ಲಿ ಏನನ್ನಾದರೂ ಮಾಡಿ ಬದಲಾವಣೆ ತಂದುಕೊಳ್ಳಿ. ತಂಡವಾಗಿ ಸ್ಪೂರ್ತಿಯಿಂದ ಕೆಲಸ ಮಾಡುವ ಮನಸ್ಥಿತಿ ರೂಪಿಸಿಕೊಳ್ಳಿ. ಕರ್ತವ್ಯದ ಜೊತೆಗೆ ಕುಟಂಬಕ್ಕೂ ಸಮಯ ಮೀಸಲಿಡುವುದನ್ನು ಮರೆಯಬೇಡಿ ಎಂದು ಅವರು ಹೇಳಿದರು.

ಈಗ ತಾವೆಲ್ಲರೂ ವೈದ್ಯ ವೃತ್ತಿಪರ ವೈದ್ಯರಾಗಿ ಸೇವೆ ಮಾಡಲು ಸಿದ್ಧರಾಗಿದ್ದೀರಿ. ವಿದ್ಯಾರ್ಥಿಗಳಾಗಿ ನೀವು ಕಲಿತ ತತ್ವಾದರ್ಶಗಳಡಿ ಜೀವನ ಸಾಗಿಸಿ. ಇದು ಜಾಗತೀಕರಣ ಯುಗವಾಗಿದೆ. ಬಿ ಎಲ್ ಡಿ ಇ ವಿವಿಯಿಂದ ಪದವೀಧರರಾಗಿ ಒಳ್ಳೆಯ ಸ್ಥಾನಕ್ಕೇರಿ ಜಗತ್ತಿಗೆ ನಿಮ್ಮದೇ ಆದ ಕೊಡುಗೆ ನೀಡಿ. ಮುಂದಿನ ಪೀಳಿಗೆಗಾಗಿ ದೇಶ ಮತ್ತು ವಿಶ್ವಕ್ಕಾಗಿ ಮಾದರಿ ಕೆಲಸ ಮಾಡಿ. ಇಲ್ಲಿನ ಶಿಕ್ಷಕರು ತಮೆಗೆಲ್ಲರಿಗೂ ಉತ್ತಮ ಶಿಕ್ಷಣ ನೀಡಿದ್ದಾರೆ ಎಂದು ಅವರು ಹೇಳಿದರು.

ಎಂಬಿಬಿಎಸ್ ಪದವಿ ಪಡೆದ ಯುವ ವೈದ್ಯೆ ಶ್ರಿನಿಧಿ ಕುಲಕರ್ಣಿ

ದೇಶದಲ್ಲಿ 2020ರಲ್ಲಿ ನೂತನ ಶಿಕ್ಷಣ ನೀತಿ ಘೋಷಣೆ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಹೊಸ ಶಿಕ್ಷಣ ನೀತಿ ಜಾರಿಗೆ ಶ್ರಮಿಸುತ್ತಿವೆ. ಎಲ್ಲ ಆರೋಗ್ಯ ಶಿಕ್ಷಣ ಸಂಸ್ಥೆಗಳು ಇದರ ಮಹತ್ವ ಅರಿತು ಫೌಂಡೇಶನ್ ಕೂರ್ಸುಗಳು, ಸೇರಿದಂತೆ ಕೌಶಲ್ಯಾಧಾರಿತ ಕೋರ್ಸುಗಳಿಗೆ ಆದ್ಯತೆ ನೀಡುವ ಮೂಲಕ ನೀಟ್ ಮತ್ತು ನೆಕ್ಸ್ಟ್ ಪರೀಕ್ಷೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಎನ್‍ಎಂಸಿ ಕೂಡ ಸ್ಪರ್ಧಾತ್ಮಕ ಸ್ನಾತಕೋತ್ತರ ಮತ್ತು ಸೂಪರ್ ಸ್ಪೇಶಾಲಿಟಿ ಕೋರ್ಸುಗಳಿಗೆ ಪಠ್ಟಕ್ರಮ ರೂಪಿಸಿದೆ ಎಂದು ಅವರು ಹೇಳಿದರು.

ಶಿಕ್ಷಣ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಪ್ರಮುಖ ಮತ್ತು ಏಕೈಕ ಸಾಧನವಾಗಿದೆ. ರೋಮಾಂಚನ ನೀಡುವ ಕ್ಯಾಂಪಸ್ ಜೀವನ ಉತ್ತಮ ಗುಣಮಟ್ಟದ ಕಲಿಕಾ ಪ್ರಕ್ರಿಯೆಗೆ ಅಗತ್ಯವಾಗಿದೆ. ಇದರಿಂದ ಸಾಮಥ್ರ್ಯ ಆಧಾರಿತ ಉತ್ತಮ ಫಲಿತಾಂಶಕ್ಕೂ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಎಂಬಿಬಿಎಸ್ ಪದವಿ ಪಡೆದ ಯುವ ವೈದ್ಯೆ ಡಾ. ಮೆಹವಿಕ್ ಖಾದ್ರಿ

ಕೋವಿಡ್ 19 ಪರಿಸ್ಥಿತಿ ಆರೋಗ್ಯ ರಕ್ಷಣೆಯಲ್ಲಿ ಸಮಗ್ರ ವಿಧಾನದ ಅಗತ್ಯವನ್ನು ನಮಗೆ ತೋರಿಸಿದೆ. ವೈದ್ಯರು, ದಾದಿಯರು, ಔಷಧಿಕಾರರು, ದಂತವೈದ್ಯರು ಅಥವಾ ಸಂಬಂಧಿತ ಆರೋಗ್ಯ ವೃತ್ತಿಪರರು ನಿರ್ವಹಿಸುವ ಕರ್ತವ್ಯಗಳಿಗೆ ಅನುಗುಣವಾಗಿ ಅಗತ್ಯವಿರುವ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳ ಅವಧಿ, ರಚನೆ ಮತ್ತು ವಿನ್ಯಾಸದ ಕುರಿತು ಶಿಕ್ಷಣದ ಮರುಕಲ್ಪನೆ ಮಾಡಲಾಗುತ್ತಿದೆ. ವೈದ್ಯಕೀಯ ಜ್ಞಾನ, ರೋಗ ನಿರ್ಣಯ ಕೌಶಲ್ಯಗಳು, ಸೂಕ್ತವಾದ ಕಾರ್ಯವಿಧಾನದ ಕೌಶಲ್ಯಗಳು, ಸಂವಹನ ಕೌಶಲ್ಯಗಳು, ಪ್ರಮಾಣೀಕರಿಸಬಹುದಾದ ಕೌಶಲ್ಯಗಳ ಮೇಲೆ ತುರ್ತು ಕೌಶಲ್ಯ ಮತ್ತು ತರಬೇತಿಗಳನ್ನು ನೀಡಲಾಗುತ್ತಿದೆ. ನಮ್ಮ ಜನರು ಆರೋಗ್ಯ ರಕ್ಷಣೆಯಲ್ಲಿ ಬಹು ಆಯ್ಕೆಯನ್ನು ಇಷ್ಟಪಡುವುದರಿಂದ ಬೇಡಿಕೆಗೆ ತಕ್ಕಂತೆ ಸೇವೆ ನೀಡಬೇಕಿದೆ. ಅಲೋಪಥಿ ವೈದ್ಯಕೀಯ ಶಿಕ್ಷಣದ ಎಲ್ಲಾ ವಿದ್ಯಾರ್ಥಿಗಳು ಮೂಲಭೂತ ಶಿಕ್ಷಣವನ್ನು ಹೊಂದಿರುತ್ತಾರೆ. ಆಯುರ್ವೇದ, ಯುನಾನಿ, ಸಿದ್ಧ ಮುಂತಾದ ಭಾರತೀಯ ಪರ್ಯಾಯ ವೈದ್ಯಕೀಯ ಪದ್ಧತಿಗಳ ತಿಳುವಳಿಕೆ, ಹೋಮಿಯೋಪಥಿ(ಆಯುμï) ಮತ್ತು ಪ್ರಕೃತಿ ಚಿಕಿತ್ಸೆಯ ರೂಪಗಳು ಸವಾಲಾಗಿವೆ ಎಂದು ಅವರು ಹೇಳಿದರು.

ಎಂಬಿಬಿಎಸ್ ಪದವಿ ಪಡೆದ ಅನುಪಮಾ ಈರಣ್ಣ ಗುಚೆಟ್ಟಿ

ಬಿ ಎಲ್ ಡಿ ಇ ಸಂಸ್ಥೆಯ ಕಾರ್ಯವೈಖರಿಗೆ ಶ್ಲಾಘನೆ

ಇದೇ ವೇಳೆ, ಬಿ ಎಲ್ ಡಿ ಇ ಸಂಸ್ಥೆಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಹಿಂದುಳಿದಿರುವ ಉತ್ತರ ಕರ್ನಾಟಕ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣದ ವರೆಗೆ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ 1910ರಲ್ಲಿ ಬಿ ಎಲ್ ಡಿ ಇ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆ ಸ್ಥಾಪಿಸಲು ಕಾರಣರಾದ ದೂರದೃಷ್ಠಿ ಹೊಂದಿದ ಮಹನೀಯರಾದ ಮತ್ತು ವಚನಪಿತಾಮಹ ಎಂದೇ ಖ್ಯಾತರಾಗಿದ್ದ ಡಾ. ಫ. ಗು. ಹಳಕಟ್ಟಿ, ಬಂಥನಾಳದ ಶ್ರೀ ಸಂಗನಬಸವೇಶ್ವರ ಶಿವಯೋಗಿಗಳು, ಸಮರ್ಥ ಆಡಳಿತಗಾರ ಮತ್ತು ಪರೋಪಕಾರಿ ಗುಣ ಹೊಂದಿದ್ದ ಡಾ. ಬಿ. ಎಂ. ಪಾಟೀಲ ಅವರು ಈ ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ. ಹಾಲಿ ಕುಲಪತಿಗಳಾಗಿರುವ ಎಂ. ಬಿ. ಪಾಟೀಲ ಅವರು ಜಾಗತಿಕ ಬೇಡಿಕೆಗೆ ತಕ್ಕಂತೆ ತಕ್ಕಂತೆ ಉದಾರವಾದಿ ಮತ್ತು ಆಧುನಿಕ ಕಲ್ಪನೆಗಳೊಂದಿಗೆ ಸುಸ್ಥಿರ ಶಿಕ್ಷಣ ನೀಡುವ ಮತ್ತು ನವೀನ ಪೂರಕ ಕೋರ್ಸುಗಳನ್ನು ಆರಂಭಿಸುವ ಅವರ ಗುರಿ ಶ್ಲಾಘನೀಯವಾಗಿದೆ ಎಂದು ಅವರು ಪೆÇ್ರ. ಪಿ. ವಿ. ವಿಜಯರಾಘವನ್ ಹೇಳಿದರು.

ಗಣ್ಯರೊಂದಿಗೆ ಗ್ರುಪ್ ಫೋಟೋ ತೆಗೆಸಿಕೊಂಡ ಯುವ ವೈದ್ಯರು

ಸ್ವಾಗತ ಭಾಷಣ ಮಾಡಿದ ವಿವಿ ಉಪಕುಲಪತಿ ಡಾ. ಆರ್.ಎಸ್.ಮುಧೋಳ, ವಿಶ್ವವಿದ್ಯಾಲಯದ ಸಾಧನೆಗಳು, ಸಿಕ್ಕಿರುವ ಮಾನ್ಯತೆಗಳು, ಲಭಿಸಿರುವ ಗೌರವ ಮತ್ತು ಪ್ರಶಸ್ತಿಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ವಿವಿ ಆರಂಭಿಸಿರುವ ಹೊಸ ಕೋರ್ಸಗಳ ಬಗ್ಗೆಯೂ ವಿವರಿಸಿದರು.

ಎನ್.ಆಯ್.ಆರ್.ಎಫ್. ರ್ಯಾಂಕಿಂಗ್‍ನಲ್ಲಿ ಕೇಂದ್ರ ಶಿಕ್ಷಣ ಇಲಾಖೆ 101-150ನೇ ಶ್ರೇಣಿ ನೀಡಿದೆ. ನ್ಯಾಕ ಎ ಗ್ರೇಡ್ ಮಾನ್ಯತೆ ನೀಡಿದೆ. ಆಸ್ಪತ್ರೆಗೆ ಎನ್.ಎ.ಬಿ.ಎಚ್ ಮಾನ್ಯತೆ ನೀಡಿದ್ದು, ಪ್ರಯೋಗಾಲಯಗಳಿಗೆ ಎನ್.ಎ.ಬಿ.ಎಲ್. ಗೌರವ ಸಿಕ್ಕಿದೆ. ಅಲ್ಲದೆ ಇಂಡಿಯಾ ಟು ಡೇ ನಿಯತಕಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿವಿ ಗೆ 11ನೇ ರ್ಯಾಂಕ ಮತ್ತು ಕಾಲೇಜಿಗೆ 43ನೇ ರ್ಯಾಂಕ ನೀಡಿದೆ. ಟೈಮ ಸೈಬರ್ ಮಿಡಿಯಾ ವಿವಿ ಗೆ ಅಂತಾರಾಷ್ಟ್ರೀಯ ಶಿಕ್ಷಣ ಪ್ರಶಸ್ತಿ ನೀಡಿದೆ. ಅರ್‍ಡೋರ ಕಮಿನಿಕೇಷನ್ ಮೀಡಿಯಾ ಔಟ್ ಸ್ಟ್ಯಾಂಡಿಂಗ್ ಯುನಿವರಸಿಟಿ ಇನ್ ಇನೋವ್ಹೆಟಿವ್ ಟೀಚಿಂಗ್ ಆಂಡ್ ಲರ್ನಿಂಗ್ ಪ್ರಾಕ್ಟಿಸ್ಸಿಸ ಪ್ರಶಸ್ತಿ ನೀಡಿದೆ. ಎಜುಕೇಶನ್ ವಲ್ರ್ಡ ಮ್ಯಾಂಗಜೀನ ಖಾಸಗಿ ವಿವಿ ವಿಭಾಗದಲ್ಲಿ ಮೆಡಿಕಲ್ ಆಂಡ್ ಲೈಫ್ ಸೈನ್ಸಸ್ ವಿಭಾಗದಲ್ಲಿ 7ನೇ ಸ್ಥಾನ ನೀಡಿದೆ. ನ್ಯೂಸ್ 18 ಕನ್ನಡ ಹೆಲ್ತ ಕೇರ್ ಅರ್ವಾಡ್ಸ – 2022ರಲ್ಲಿ ಬಿ.ಎಲ್.ಡಿ.ಇ. ಆಸ್ಪತ್ರೆಗೆ ಕೋವಿಡ್ ಸಮಯದಲ್ಲಿ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ. ಎನ್.ಎಂ.ಸಿ. ಎಂ.ಬಿ.ಬಿ.ಎಸ್. ಸೀಟುಗಳ ಸಂಖ್ಯೆಯನ್ನು 150 ರಿಂದ 200ಕ್ಕೆ ಹೆಚ್ಚಿಸಲು ಮತ್ತು ಎಮರ್ಜೆನ್ಸಿ ಮೆಡಿಷಿನ್ ಮತ್ತು ಜಿರಿಯಾಟ್ರಿಕ್ ಮೆಡಿಷಿನ್ ವಿಭಾಗದಲ್ಲಿ ಸ್ನಾತಕೋತ್ತರ ಮತ್ತು ಸುಪರ್ ಸ್ಪೇಷಾಲಿಟಿ ವಿಭಾಗದಲ್ಲಿ ಡಿ.ಎಂ. ಕಾರ್ಡಿಯಾಲಜಿ ಕೋರ್ಸ್‍ಗಳನ್ನು ಆರಂಭಿಸಲು ಅನುಮತಿ ನೀಡಿದೆ. ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಒಟ್ಟು 287 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 4 ಜನರಿಗೆ ಪಿ ಎಚ್ ಡಿ, 62 ವೈದ್ಯಕೀಯ ಸ್ನಾತಕೋತ್ತರ ಪದವಿ, 2 ಎಮ್. ಎಚ್. ಎ 2 ಎಮ್. ಪಿ. ಎಚ್, 202 ಎಂಬಿಬಿಎಸ್ ಹಾಗೂ 15 ವಿದ್ಯಾರ್ಥಿಗಳಿಗೆ ಬಿ. ಎಸ್ಸಿ. (ಎಂ. ಐ. ಟಿ) ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನ ಮಾಡಲಾಯಿತು.

 

ಈ ಪದವಿ ಪ್ರಧಾನ ಸಮಾರಂಭದಲ್ಲಿ 17 ಚಿನ್ನದ ಪದಕಗಳು ಹಾಗೂ 3 ನಗದು ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಸ್ನಾತಕೋತ್ತರ ವಿಭಾಗದಲ್ಲಿ ಡಾ. ನಮ್ರತಾ ಬಿ . ಎಂ- 2 ಚಿನ್ನದ ಪದಕಗಳನ್ನು, ಎಂಬಿಬಿಎಸ್ ಪದವಿ ವಿಭಾಗದಲ್ಲಿ ಡಾ. ಗೌರವ ಅರೊರಾ 6 ಚಿನ್ನದ ಪದಕ, ಡಾ. ರುಚಿ ಸಿಂಗ್ 3 ಚಿನ್ನದ ಪದಕ ಮತ್ತು 2 ನಗದು ಬಹುಮಾಗಳು ಹಾಗೂ ಡಾ. ಯಾಶಿಕಾ ಸಿ ಅವರಿಗೆ 2 ಚಿನ್ನದ ಪದಕಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ. ಡೀಮ್ಡ ವಿವಿ ಕುಲಪತಿ ಎಂ.ಬಿ.ಪಾಟೀಲ, ಉಪಕುಲಪತಿ ಡಾ. ಆರ್.ಎಸ್.ಮುಧೋಳ, ಡಾ. ನಿಲಿಮಾ ಡೊಂಗ್ರೆ, ಡಾ. ಕುಶಾಲ ದಾಸ್, ಡಾ. ವೈ. ಎಂ. ಜಯರಾಜ, ಡಾ. ಚಂದ್ರಕಾಂತ ಕೊಕಟೆ, ಡಾ. ಅರಣ ಚ. ಇನಾಮದಾರ, ಡಾ. ನಿರಂಜನ ಕುಮಾರ, ಡಾ. ಅರವಿಂದ ಪಾಟೀಲ, ಡಾ. ಆರ್. ವಿ. ಕುಲಕರ್ಣಿ, ಡಾ. ಎಸ್. ಎಸ್. ದೇವರಮನಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌