POCSO Workshop: ಮಾಧ್ಯಮ ಪ್ರತಿನಿಧಿಗಳಿಗೆ ಪೋಕ್ಸೊ, ಜೆಜೆ ಕಾಯಿದೆ ಕುರಿತು ಕಾರ್ಯಾಗಾರ- ನ್ಯಾ. ವೆಂಕಣ್ಣ ಹೊಸಮನಿ ಹೇಳಿದ್ದೇನು ಗೊತ್ತಾ?

ವಿಜಯಪುರ : ಪೊಕ್ಸೊ ಮತ್ತು ಜೆಜೆ ಕಾಯಿದೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗಾಗಿ ಕಾರ್ಯಾಗಾರ ನಗರದಲ್ಲಿ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಾಗಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಉದ್ಘಾಟಿಸಿದರು.

ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಪೊಕ್ಸೊ, ಜೆಹೆ ಕಾಯಿದೆ ಕುರಿತ ಕಾರ್ಯಾಗಾರ ಉದ್ಘಾಟಿಸಿದರು

ಬಳಿಕ ಮಾತನಾಡಿದ ಅವರು, ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೊ ಕಾಯಿದೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದು ಹೇಳಿದರು.

ಈ ನೆಲದ ಕಾನೂನನ್ನು ದೇಶದ ಪ್ರತಿಯೊಬ್ಬ ನಾಗರಿಕ ಗೌರವಿಸಬೇಕು. ನಾವು ಕಾನೂನು ರಕ್ಷಣೆ ಮಾಡಿದರೆ ಕಾನೂನು ನಮ್ಮನ್ನು ರಕ್ಷಣೆ ಮಾಡುತ್ತದೆ. ಕಾನೂನಿನ ಅರಿವು ಇಲ್ಲದಿದ್ದರೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತವೆ ನಡೆಯುತ್ತವೆ ಎಂದು ಅವರು ಹೇಳಿದರು.

18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪ್ರಾಪ್ತ ವಯಸ್ಸಿನವರೆಂದು ಪರಿಗಣಿಸಲಾಗುತ್ತಿದೆ. ಇವರು ಪೋಕ್ಸೊ ಕಾಯಿದೆ ವ್ಯಾಪ್ತಿಗೆ ಒಳಪಡುತ್ತಾರೆ. ಇಂಥ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅಕ್ಷಮ್ಯ ಅಪರಾಧ. ಪೋಕ್ಸೊ ಕಾಯಿದೆಯಡಿ ಯಾವುದೇ ವ್ಯಕ್ತಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾದರೆ ಅಂಥ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುಸು ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದರು.

ಯಾರನ್ನೋ ಬ್ಲ್ಯಾಕಮೇಲ್ ಮಾಡುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿ ಸುಳ್ಳು ಕೇಸ್ ದಾಖಲಿಸಿದರೆ ಅಂಥವರಿಗೆ ಪೊಕ್ಸೊ ಕಾನೂನಿನಲ್ಲಿ ಆರು ತಿಂಗಳಿಂದ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಾಗ ಮಾಧ್ಯಮದವರು ಬಹಳ ಜಾಗರೂಕತೆಯಿಂದ ವರದಿ ಮಾಡಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಹೆಸರು ಹಾಗೂ ಭಾವಚಿತ್ರ, ಅವರ ತಂದೆ-ತಾಯಿಗಳ, ಪೋಷಕರ ಹೆಸರು, ವಾಸಿಸುವ ಸ್ಥಳದ ಬಗ್ಗೆ ಮಾಹಿತಿ ಮಾಧ್ಯಮದಲ್ಲಿ ಬರದಂತೆ ಎಚ್ಚರ ವಹಿಸಬೇಕು ಎಂದು ನ್ಯಾಯಾಧೀಶ ವೆಂಕಣ್ಣ ಹೊಸಮನಿ ಕಿವಿಮಾತು ಹೇಳಿದರು.

ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗೀಮಠ ಉಪನ್ಯಾಸ ನೀಡಿ, ಪೊಕ್ಸೊ ಕಾಯಿದೆ ಬಹಳ ಸೂಕ್ಷ್ಮವಾಗಿದ್ದು, ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಹೇಗೆ ವರದಿ ಮಾಡಬೇಕೆಂಬುದನ್ನು ತಿಳಿಸಿದರು.

ವರದಿ ಮಾಡುವಾಗ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಗುವಿನ ಬಗ್ಗೆ ವೈಯಕ್ತಿಕವಾದ ಯಾವುದೇ ಮಾಹಿತಿ ಕೊಡಬಾರದು. ಒಂದು ವೇಳೆ ಇದನ್ನು ಉಲ್ಲಂಘಿಸಿ ಮಾಹಿತಿ ನೀಡಿದರೆ ಮತ್ತು ಯಾರಾದರೂ ಅವರ ವಿರುದ್ಧ ದೂರು ನೀಡಿದರೆ ಅವರಿಗೆ ಶಿಕ್ಷೆಯಾಗುತ್ತದೆ. ಇಂಥ ಪ್ರಕರಣಗಳಲ್ಲಿ ಕಾನೂನು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆಯೂ ವಿಶೇಷ ಗಮನ ವಹಿಸಬೇಕು ಹರಿಸಬೇಕು ಎಂದು ಅವರು ಹೇಳಿದರು.

ದೌರ್ಜನ್ಯಕ್ಕೊಳಗಾದ ಮಗುವಿನ ವಿಚಾರಣೆಯನ್ನು ಕೂಡ ಬಹಳ ಸೂಕ್ಷ್ಮವಾಗಿ ಮಾಡಬೇಕು. ಅನಗತ್ಯವಾಗಿ ಆ ಮಗುವನ್ನು ಠಾಣೆಗೆ ಕರೆಸುವಂತಿಲ್ಲ. ಖಾಕಿ ಸಮವಸ್ತ್ರ ಧರಿಸಿ ವಿಚಾರಣೆ ಮಾಡುವಂತಿಲ್ಲ. ಒಂದು ವೇಳೆ ಠಾಣೆಗೆ ಕರೆಸಿ ವಿಚಾರಣೆ ನಡೆಸುವ ಅನಿವಾರ್ಯತೆ ಎದುರಾದರೆ ಅದಕ್ಕೂ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಅಧ್ಯಕ್ಷತೆ ವಹಿಸಿ, ಪೊಕ್ಸೊ ಕಾಯ್ದೆ ಕುರಿತು ಆಯೋಜಿಸಲಾದ ಈ ಕಾರ್ಯಾಗಾರದಿಂದ ಪತ್ರಕರ್ತರಿಗೆ ತುಂಬಾ ಉಪಯುಕ್ತವಾದ ಮಾಹಿತಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ಉಪನ್ಯಾಸದ ಬಳಿಕ ಪೊಕ್ಸೊ ಕಾಯ್ದೆ, ದೇವದಾಸಿ ಸಮರ್ಪಣೆ ತಡೆ ಹಾಗೂ ಅವರ ಮಕ್ಕಳ ಸಮಸ್ಯೆಗಳ ಬಗ್ಗೆ ಸಂವಾದ ನಡೆಯಿತು.

ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ನ ‘ಸಿ’ ಗುಡ್ ಯೋಜನೆಯ ಜಿಲ್ಲಾ ಸಂಯೋಜಕಿ ಶಾಂತಾ ಮ. ಬೇಲಾಳ ಮಾತನಾಡಿ, ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಶೀಘ್ರದಲ್ಲಿ ಇದೇ ರೀತಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಾನಿಪ ಸಂಘದ ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಉಪಸ್ಥಿತರಿದ್ದರು.

ಕಾನಿಪ ಸಲಹಾ ಸಮಿತಿ ಸದಸ್ಯ ದೇವೇಂದ್ರ ಹೆಳವರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಾಗಾರದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಫಿರೋಜ್ ರೋಜಿನದಾರ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ, ರಾಜ್ಯ ಕಾರ್ಯಕಾರಿ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ. ಕೆ. ಕುಲಕರ್ಣಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ವಿನೋದ ಸಾರವಾಡ, ಸಮೀರ ಇನಾಮದಾರ, ವಿಶೇಷ ಆಮಂತ್ರಿತರಾದ ಕೌಶಲ್ಯ ಪನಾಳಕರ, ಸದಸ್ಯರಾದ ಸುಶಿಲೇಂದ್ರ ನಾಯಕ, ನಿವೃತ್ತ ವಾರ್ತಾಧಿಕಾರಿ ಪಿ. ಎಸ್. ಹಿರೇಮಠ, ಪತ್ರಕರ್ತರಾದ ಟಿ. ಕೆ. ಮಲಗೊಂಡ, ನಿಂಗಪ್ಪ ನಾವಿ, ಇರ್ಫಾನ್ ಶೇಖ, ರಾಹುಲ ಮಾನಕರ, ವಿನಾಯಕ ಸೊಂಡೂರ, ಶಂಕರ ಜಲ್ಲಿ, ಶರಣು ಮರನೂರ, ಹೀರಾ ನಾಯ್ಕ, ಬೀರು‌ ನಿಡಗುಂದಿ, ಗೋಪಾಲ ಕಣಿಮಣಿ, ಪುಂಡಲೀಕ ಮುರಾಳ, ರಶ್ಮಿ ಪಾಟೀಲ, ವಿಠ್ಠಲ ಲಂಗೋಟಿ, ಪವನ್ ಕುಲಕರ್ಣಿ, ಬಾಲು ಸಾರವಾಡ, ದೇವಪ್ಪ ಮೇತ್ರಿ, ಸುನೀಲ ಅಂಬಿಗೇರ ಮುಂತಾದವರು ಪಾಲ್ಹೊಂಡಿದ್ದರು.

Leave a Reply

ಹೊಸ ಪೋಸ್ಟ್‌