Police Recovery: ಬಸವ ನಾಡಿನ ಸಿಇಎನ್ ಪೊಲೀಸರ ಕಾರ್ಯಾಚರಣೆ- ಆನಲೈನ್ ವಂಚನೆಗೊಳಗಾದವರಿಗೆ ಹಣ ಮರಳಿಸಿ ಸಾಧನೆ

ವಿಜಯಪುರ: ಬಸವ ನಾಡು ವಿಜಯಪುರ ಸಿಇಎನ್(ಸೈಬರ್ ಕ್ರೈಂ, ಎಕನಾಮಿಕ್ಸ್ ಅಪೆನ್ಸಸ್ ಮತ್ತು ನ್ಯಾಕ್ರೊಟಿಸ್ಕ್- ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧ) ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆನಲೈನ್ ವಂಚನೆಯಲ್ಲಿ ಸಂಕಷ್ಟಕ್ಕಿಡಾಗಿದ್ದ ದೂರುದಾರರಿಗೆ ಹಣ ಮರಳಿಸಿದ್ದಾರೆ. ಈ ಕುರಿತು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ವರ್ಷ ಒಟ್ಟು 31 ಸೈಬರ್ ಕ್ರೈಂ ಪ್ರಕರಣಗಳು ಅಂದರೆ ಆನಲೈನ್ ವಂಚನೆ ಕೇಸುಗಳು ದಾಖಲಾಗಿದ್ದವು.  ಈ ಹಿನ್ನೆಲೆಯಲ್ಲಿ ತಾವು […]

Hindi Language: ಭಾವನೆಗಳನ್ನು ವ್ಯಕ್ತಗೊಳಿಸಲು ಹಿಂದಿ ಭಾಷೆ ಸಹಕಾರಿಯಾಗಿದೆ- ಮೇ. ರಾಜೇಂದ್ರ ಸಿಂಗ್

ವಿಜಯಪುರ: ಭಾವನೆಗಳನ್ನು ವ್ಯಕ್ತಗೊಳಿಸಲು ಹಿಂದಿ ಭಾಷೆಯು ಸಹಕಾರಿಯಾಗಿದೆ.  ದೇಶಾದ್ಯಂತ ಹಿಂದಿ ಸಂವಹನ ಭಾಷೆಯಾಗಿ ಬೆಳೆದಿದೆ ಎಂದು ವಿಜಯಪುರ ಎನ್ ಸಿ ಸಿ ಚೀಫ್ ಹವಾಲ್ದಾರ ಮೇ. ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ವಿಜಯಪುರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗವು ಆಯೋಜಿಸಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 14ನೇ ಸೆಪ್ಟೆಂಬರ್ 1949 ರಂದು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಸೂಚಿಸಲು ಒಪ್ಪಿದರು.  ಆದರೆ, ದಕ್ಷಿಣ ಭಾರತೀಯರು ಒಪ್ಪದ ಕಾರಣ ಹಿಂದಿ ರಾಜ್ಯ ಭಾಷೆಯಾಗಿಯೇ ಉಳಿಯಿತು.  […]

Students Introduction: ಕೆಸಿಪಿ ಸಾಯಿನ್ಸ್ ಕಾಲೇಜಿನಲ್ಲಿ ಬಿ.‌ಎ. ಬಿ. ಎಸ್ಸಿ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ

ವಿಜಯಪುರ: ವಿದ್ಯಾರ್ಥಿಗಳು ಸತತ ಓದು, ಪರಿಶ್ರಮ, ನಿರಂತರ ಅಧ್ಯಯನ ನಡೆಸಿ ಕಾಲೇಜಿನಲ್ಲಿರುವ ಮೂಲ ಸೌಲಭ್ಯಗಳನ್ನು ಬಳಸಿಕೊಂಡು ಭವಿಷ್ಯವನ್ನು ಉಜ್ವಲ ಪಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಯು. ಎಸ್. ಪೂಜೇರಿ ಹೇಳಿದರು. ನಗರದ ಬಿ. ಎಲ್. ಡಿ. ಇ. ಸಂಸ್ಥೆಯ ಎಸ್. ಬಿ. ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಮೃತ ಮಹೋತ್ಸವ ವರ್ಷಾಚರಣೆ ಹಾಗೂ 2022-23 ನೇ ವರ್ಷದ ಬಿ.‌ ಎ ಮತ್ತು ಬಿ.ಎಸ್ಸಿ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿ. ಎಲ್. ಡಿ. […]