ವಿಜಯಪುರ: ಬಸವ ನಾಡು ವಿಜಯಪುರ ಸಿಇಎನ್(ಸೈಬರ್ ಕ್ರೈಂ, ಎಕನಾಮಿಕ್ಸ್ ಅಪೆನ್ಸಸ್ ಮತ್ತು ನ್ಯಾಕ್ರೊಟಿಸ್ಕ್- ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧ) ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆನಲೈನ್ ವಂಚನೆಯಲ್ಲಿ ಸಂಕಷ್ಟಕ್ಕಿಡಾಗಿದ್ದ ದೂರುದಾರರಿಗೆ ಹಣ ಮರಳಿಸಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ವರ್ಷ ಒಟ್ಟು 31 ಸೈಬರ್ ಕ್ರೈಂ ಪ್ರಕರಣಗಳು ಅಂದರೆ ಆನಲೈನ್ ವಂಚನೆ ಕೇಸುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ತಾವು ಹಾಗೂ ಎಎಸ್ಪಿ ಡಾ. ರಾಮ ಲಕ್ಷ್ಮಣಸಾ ಅರಸಿದ್ಧಿ ಮಾರ್ಗದರ್ಶನ ನೀಡಿ ಈ ಅಪರಾಧಗಳ ಪತ್ತೆಗೆ ತಂಡ ರಚನೆ ಮಾಡಲಾಗಿತ್ತು ಎಂದು ತಿಳಿಸಿದರು.
ಆದರಂತೆ, ಡಿ ಸಿ ಆರ್ ಬಿ ಡಿವೈಎಸ್ಪಿ ಜೆ. ಎಸ್. ನ್ಯಾಮಗೌಡರ, ಸಿಇಎನ್ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡ ಮಿಂಚಿನ ಕಾರ್ಯಾಚರಣವು ನಡೆಸಿ, ಈ ಪ್ರಕರಣಗಳಲ್ಲಿ ಒಟ್ಟು ರೂ. 39 ಲಕ್ಷ 99 ಸಾವಿರದ 854 ವಂಚೆಯಾಗಿದೆ ಎಂದು ಒಟ್ಟು 31 ಜನ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿ ಈವರೆಗೆ 24 ಲಕ್ಷ 45 ಸಾವಿರದ 729 ರೂಪಾಯಿಗಳನ್ನು ದೂರು ನೀಡಿದವರ ಬ್ಯಾಂಕ್ ಖಾತೆಗಳಿಗೆ ಮರಳಿ ಜಮಾ ಮಾಡಿಸಲಾಗಿದೆ ಎಂದು ಅವರು ತಿಳಿಸಿದರು.
ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾದ 11 ಪ್ರಕರಣಗಳಲ್ಲಿ ಒಟ್ಟು ರೂ. 2896865 ವಂಚನೆಯಾಗಿತ್ತು. ಈ ಪ್ರಕರಣಗಳನ್ನು ಭೇದಿಸಿ ಒಟ್ಟು ರೂ. 1532863 ಗಳ:್ನು ಮರಳಿ ಜಮಾ ಮಾಡಿಸಲಾಗಿದೆ. ಸೈಬರ್ ಆನ್‍ಲೈನ್ ವಂಚನೆಯಾದ ನೋಂದ ದೂರುದಾರರು ಗೋಲ್ಡ್‍ನ್ ಅವರ್ (ಒಂದು ಗಂಟೆ)ದಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ವರದಿ ಮಾಡಿದ ಹಾಗೂ MHA National Cyber Crime Portal Helpline 1930 ಗೆ ಕರೆ ಮಾಡಿ ದಾಖಲಾಗಿದ್ದ ಪ್ರಕರಣಗಳನ್ನು ತನಿಖೆ ನಡೆಸಿ ದೂರುದಾರರಿಗೆ ಹಣ ಮರಳಿ ಜಮಾ ಮಾಡಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
2022 ರಲ್ಲಿ 10 ಪ್ರಕರಣಗಳಲ್ಲಿ ರೂ. 615156 ವಂಚನೆಯಾಗಿದ್ದು, ಅದರಲ್ಲಿ ನೊಂದ ದೂರುದಾರರಿಗೆ ಒಟ್ಟು ರೂ. 450032 ಹಣವನ್ನು 10 ಜನ ದೂರುದಾರರಿಗೆ ಮರಳಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಲಾಗಿದೆ. 2022 ರಲ್ಲಿ MHA National Cyber Crime Portal Helpline 1930 ಗೆ ಕರೆ ಮಾಡಿ ದಾಖಲಾಗಿದ್ದ ಪ್ರಕರಣಗಳನ್ನು ತನಿಖೆ ನಡೆಸಿ ನೊಂದ ದೂರುದಾರರು ಫೋನ್‍ಮಾಡಿ ವರದಿ ಮಾಡಲಾದ ಒಟ್ಟು ರೂ. 487833 ವಂಚನೆಯಾಗಿದ್ದು, ಅದರಲ್ಲಿ 10 ಜನ ದೂರುದಾರರಿಗೆ ಒಟ್ಟು ರೂ. 462834 ಗಳನ್ನು ಮರಳಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಲಾಗಿದೆ ಎಂದು ವಿಜಯಪುರ ಎಸ್ಪಿ ತಿಳಿಸಿದರು.
ಈ ಎಲ್ಲ ಪ್ರಕರಣಗಳನ್ನು ಭೇದಿಸಿದ ತಂಡದಲ್ಲಿ ಸಿಇಎನ್ ಪಿಎಸ್‍ಐ ಪಿ. ವೈ. ಅಂಬಿಗೇರ, ಎ. ಎನ್. ಗುಡ್ಡೋಡಗಿ, ಸಿಬ್ಬಂದಿಯಾದ ಆರ್. ವಿ. ನಾಯಕ, ಎ. ಎಲ್. ದೊಡಮನಿ, ಎಂ. ಎಂ. ಕುರವಿನಶೆಟ್ಟಿ, ಪಿ. ಎಂ. ಪಾಟೀಲ, ಆರ್. ಎಂ. ಬೂದಿಹಾಳ, ಆರ್. ಬಿ. ಕೋಳಿ, ಎಂ. ಎಚ್. ಖಾನೆ, ಸಿದ್ದು ದಾನಪ್ಪಗೊಳ, ಎಸ್. ಐ. ಹೆಬ್ಬಾಳಟ್ಟಿ, ಕೆ. ಜೆ. ರಾಠೋಡ, ಎ. ಎಚ್. ಪಾಟೀಲ, ಎಸ್. ಆರ್. ಬಡಚಿ, ಎಸ್. ಎಸ್. ಕೆಂಪೇಗೌಡ, ಡಿ. ಆರ್. ಪಾಟೀಲ, ವಿ. ಎಸ್. ಹೂಗಾರ ಪಾಲ್ಗೋಂಡಿದ್ದರು. ಇವರೆಲ್ಲರಿಗೂ ನಗದು ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನ ನೀಡಿ ಎಸ್ಪಿ ಎಚ್. ಡಿ. ಆನಂದ ಕುಮಾರ ಈ ಸಂದರ್ಭದಲ್ಲಿ ಗೌರವಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಉಪಸ್ಥಿತರಿದ್ದರು.