Engineers Day: ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಅಭಿಯಂತರರ ದಿನಾಚರಣೆ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಎ. ಸಂಸ್ಥೆಯ ವಚನ ಪಿತಾಮಹ ಡಾ. ಪ. ಗು. ಹಳಕಟ್ಟಿ ಅಭಿಯಾಂತ್ರಿಕ  ಹಾಗೂ ತಾಂತ್ರಿಕ ಮಹಾವಿದ್ಯಾಲದಲ್ಲಿ ಎಂಜಿನಿಯರ್ಸ್ ಡೆ ಆಚರಿಸಲಾಯಿತು. 

ಬಾರತರತ್ನ ಡಾ. ಸರ್ ಎಂ. ವಿಶ್ವೇಶ್ವರಯ್ಯ ಅವರ 162ನೇ ಜನ್ಮ ದಿನಚರಣೆ ಅಂಗವಾಗಿ ಸಿವಿಲ್ ವಿಭಾಗದಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೆಬಿಜೆಎನ್ಎಲ್ ಆಲಮಟ್ಟಿ ಡಿವಿಜನ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ. ಎಸ್. ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವೇಶ್ವರಯ್ಯ ಭವ್ಯ ಭಾರತದ ಕನಸನ್ನು  ಕಂಡಿದ್ದರು.  ದೇಶದ ಸಮೃದ್ಧವಾಗಿ, ಆರ್ಥಿಕವಾಗಿ, ಆಡಳಿತಾತ್ಮಕವಾಗಿ, ಕೈಗಾರಿಕೆ, ನೀರಾವರಿ ಹೀಗೆ ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವರು ಮಾಡಿರುವ ಕೆಲಸ ಕಾರ್ಯಗಳು ಕರ್ನಾಟಕ ಇತಿಹಾಸದಲ್ಲಿ ಜನಮನ್ನಣೆ ಗಳಿಸಿವೆ ಎಂದು ಹೇಳಿದರು.

ಎಜಿನಿಯರ್ಸ್ ದಿನಾಚರಣೆಯಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ. ಎಸ್. ಪಾಟೀಲ ಮಾತನಾಡಿದರು

ಉತ್ತರ ಕರ್ನಾಟಕದಲ್ಲಿ ಅದರಲ್ಲಿಯೂ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ಭೂತ್ನಾಳ ಕೆರೆ ನಿರ್ಮಾಣಕ್ಕಾಗಿ ಅವರು ಮಾಡಿದ ಕೆಲಸಗಳು ಶಾಶ್ವತವಾಗಿವೆ.  ಬರಪಿಡಿತ ಪ್ರದೇಶ ಎಂದೇ ಖ್ಯಾತಿ ಪಡೆದ ಉತ್ತರ ಕರ್ನಾಟಕ ಇಂದು ನೀರಾವರಿ ಕ್ಷೇತ್ರವಾಗಿ ಮಾರ್ಪಡುವ ಕನಸು ಈಡೇರಿದೆ ಎಂದು ಹೇಳಿದರು.

ಕನ್ಸಲ್ಟಿಂಗ್ ಎಂಜಿನಿಯರ್ ಅರುಣ ಮಠ ಮಾತನಾಡಿ, ಎಂಜಿನಿಯರ್ಸ್‍ಗಳ ಜವಬ್ದಾರಿ ಕುರಿತು ವಿವರಿಸಿದರು.  ಮಹಾವಿದ್ಯಾಲಯದಿಂದ ಗುಣಮಟ್ಟದ ಶಿಕ್ಷಣ ಪಡೆದು ಎಂಜಿನಿಯರ್ಸಗಳಾಗಿ ದೇಶ ಸೇವೆ, ಸಾರ್ವಜನಿಕ ಸೇವೆಯಲ್ಲಿ  ಉತ್ತಮ ಎಂಜಿನಿಯರ್ಸಗಳಾಗಿ ಹೆಸರು ಗಳಿಸಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜಿನಲ್ಲಿ 2015ರಿಂದ ಪದವಿ ಪಡೆದು ಸರಕಾರಿ ಸೇವೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಅಧ್ಯಕ್ಷತೆ ವಹಿಸಿದ್ದರು.  ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ನವೀನ ದೆಸಾಯಿ ಸ್ವಾಗತಿಸಿದರು.  ಪ್ರೊ. ಎನ್. ಎಸ್. ಇನಾಮದಾರ ವಂದಿಸಿದರು.  ತೌಕೀರಅಹ್ಮದ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌