NEET Rank: ಸಂಚಾರಿ ಠಾಣೆ ಮುಖ್ಯ ಪೇದೆ ಮಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ- ಡಿವೈಎಸ್ಪಿ ಬಸವರಾಜ ಯಲಿಗಾರ ಅವರಿಂದ ಸನ್ಮಾನ

ಚಿಕ್ಕೋಡಿ: ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿರುವ ಲಗ್ಮಣ್ಣ ಭೀಮಪ್ಪ ನಾಯಕ್ ಅವರ ಪುತ್ರಿ ಸ್ನೇಹಾ ಲಗಮಣ್ಣ ನಾಯಕ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತು ಸಿಬ್ಬಂದಿ ಸನ್ಮಾನಿಸಿ ಪ್ರೋತ್ಸಾಹಿಸಿದರು.

ಮಾಜಿ ಸೈನಿಕರೂ ಆಗಿರುವ ಚಿಕ್ಕೋಡಿಯ ಲಗ್ಮಣ್ಣ ನಾಯಕ್ ಅವರ ಪುತ್ರಿ ಸ್ನೇಹಾ ನೀಟ್ ಪರೀಕ್ಷೆಯಲ್ಲಿ 720ರ ಪೈಕಿ 691 ಅಂಕಗಳನ್ನು ಗಳಿಸಿ 234ನೇ ಸ್ಥಾನ ಪಡೆದಿದ್ದಾಳೆ.  ಅಷ್ಟೇ ಅಲ್ಲ, ಹಿಂದುಳಿದ ಸಮುದಾಯಕ್ಕೆ ಸೇರಿರುವ ಈ ವಿದ್ಯಾರ್ಥಿನಿ ಓಬಿಸಿಯಲ್ಲಿ ದೇಶಕ್ಕೆ 45ನೇ ಸ್ಥಾನ ಪಡೆದು ಪೋಷಕರ ಗೌರವವನ್ನು ಹೆಚ್ಚಿಸಿದ್ದಾರೆ.

ಬೆಳಗಾವಿಯ ಕೇಂದ್ರೀಯ ವಿದ್ಯಾಲಯ ನಂಬರ್ ಎರಡನೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸ್ನೇಹಾ ಲಗ್ಮಣ್ಣ ನಾಯಕ ಅವರನ್ನು ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತು ಸಿಬ್ಬಂದಿ ಸನ್ಮಾನಿಸಿ ಗೌರವಿಸಿ ಮುಂದಿನ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಕೋರಿದರು.

Leave a Reply

ಹೊಸ ಪೋಸ್ಟ್‌