National Seminar: ಬಿ ಎಲ್ ಡಿ ಇ ಎವಿಎಸ್ ಆಯುರ್ವೇದ ಕಾಲೇಜಿನಲ್ಲಿ‌ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ವಿಜಯಪುರ: ಬಿ ಎಲ್ ಡಿ ಇ ಸಂಸ್ಥೆಯ ಎ. ವಿ. ಆಯುರ್ವೇದ ಮಹಾವಿದ್ಯಾಲಯದಲ್ಲಿ ಒಂದು ದಿನ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಯಿತು.

ದೇಶದ ನಾನಾ ರಾಜ್ಯಗಳಿಂದ ಆಯುರ್ವೇದ ಮತ್ತು ಯುನಾನಿ ಕ್ಷೇತ್ರದ ಹೆಸರಾಂತ ವೈದ್ಯರು, ಪದವೀಧರರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಪಾಲ್ಗೋಂಡಿದ್ದರು.

ಈ ಕಾರ್ಯಕ್ರಮವನ್ನು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸರಕಾರಿ ಆಯುರ್ವೇದ ಮಹಾವಿದ್ಯಾಲಯದ ಬಿಎಸ್ಓ(ಪಿಜಿ) ವಿಭಾಗದ ಮುಖ್ಯಸ್ಥೆ ಡಾ. ಅಹಲ್ಯಾ ಶರ್ಮಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಆಯುರ್ವೇದ ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಂಡು ಸಂಶೋದನೆಗಳನ್ನು ಹೇಗೆ ರೂಪಿಸಬಹುದು ಎಂಬುದನ್ನು ಆಯುರ್ವೇಧ ಗ್ರಂಥಗಳಲ್ಲಿನ ವಿಷಯಗಳನ್ನು ಪ್ರಸ್ತಾಪಿಸಿ ಉದಾಹರಣೆ ಸಹಿತ ವಿವರಿಸಿದರು.

ಪುರಾತನ ವೈಜ್ಞಾನಿಕ ಪದ್ದತಿಯನ್ನು ಮಹತ್ವ, ಅವುಗಳನ್ನು ಇಂದಿನ ಆಧುನಿಕತೆಗೆ ತಕ್ಕಂತೆ ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಡಾ. ಅಹಿಲ್ಯಾ ಶರ್ಮಾ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಮಾತನಾಡಿ, ಯುವ ವೈದ್ಯರಿಗೆ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೋಂಡು ಸಾಧನೆ ಮಾಡಬೇಕು ಎಂದು ಹೇಳಿದರು.

ಸಂಹಿತಾ ಸಿದ್ಧಾಂತದ ವಿಭಾಗ ಪ್ರಾಧ್ಯಾಪಕಿ ಡಾ. ರೇಣುಕಾ ತೆನಹಳ್ಳಿ ಸ್ವಾಗತಿಸಿದರು. ಡಾ. ಸತೀಶ ಪಾಟೀಲ ವಂದಿಸಿದರು.

ಈ ವಿಚಾರ ಸಂಕಿರಣದಲ್ಲಿ 400ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌