Vishwakarna Jayanti: ವಿಜಯಪುರ ಜಿಲ್ಲಾಡಳಿತದಿಂದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ

ವಿಜಯಪುರ: ಜಿಲ್ಲಾಡಳಿತ, ಜಿ. ಪಂ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಜಯಪುರ ನಗರದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ಬೆಳಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಚಾಲನೆ ನೀಡಿದರು.

ವಿಶ್ವಕರ್ಮ ಜಯಂತಿ ಅಂಗವಾಗಿ ಮೆರವಣಿಗೆ ನಡೆಯಿತು

ನಂತರ ಮೆರವಣಿಗೆಯು ಜಾನಪದ ಕಲಾ ತಂಡಗಳೊಂದಿಗೆ ಗಾಂಧಿ ಚೌಕ್, ಶ್ರೀ ಬಸವೇಶ್ವರ ವೃತ್ತ, ಡಾ. ಬಿ. ಆರ್. ಅಂಬೇಡ್ಕರ್ ವೃತ್ತ, ಶ್ರಿ ಕನಕದಾಸ ವೃತ್ತದ ಮೂಲಕ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣಕ್ಕೆ ಬಂದು ಸೇರಿತು. ಈ ಸಂದರ್ಭದಲ್ಲಿ ನಾನಾ ಸಮುದಾಯಗಳ ಮುಖಂಡರು, ಮಹಿಳೆಯರು ಮತ್ತು ಮಕ್ಕಳ ಪಾಲ್ಗೊಂಡಿದ್ದರು. ಮಕ್ಕಳು ಒಂಟೆಗಳ ಮೇಲೆ ಏರಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.


ಬಳಿಕ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಮಾತನಾಡಿ, ವಿಜ್ಞಾನವಿಲ್ಲದೇ ಸಮಾಜ ನಡೆಯಲಾರದು. ವೈಜ್ಞಾನಿಕ ಕ್ರಮದಲ್ಲಿ ಶಿಲ್ಪಕಲೆಯನ್ನು ಮನೆಮಾತಾಗಿಸಿದ ಕೀರ್ತಿ ವಿಶ್ವಕರ್ಮ ಅವರಿಗೆ ಸಲ್ಲುತ್ತದೆ. ಜಗಜ್ಯೋತಿ ಶ್ರೀ ಬಸವೇಶ್ವರರ ಹಾಗೆ ವಿಶ್ವಕರ್ಮ ಅವರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಇಂಥ ಮಹಾತ್ಮರ ಆದರ್ಶಗಳನ್ನು ಯುವ ಸಮುದಾಯ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಶ್ವಕರ್ಮ ಜಯಂತಿ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆ ಕಾರ್ಯಕ್ರಮ ಮತ್ತು ವೇದಿಕೆಯ ಕಾರ್ಯಕ್ರಮಕ್ಕೆ ಆಗಮಿಸಿರುವುದಕ್ಕೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಕವಟಗಿ ಅವರು ಮಾತನಾಡಿದರು.

ಶಿಕ್ಷಕಿ ಮತ್ತು ಸಾಹಿತಿಗಳಾದ ಕೆ. ಸುನಂದಾ ಅವರು ವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಮಾರಂಭದಲ್ಲಿ ಶ್ರೀ ಮಹೇಂದ್ರ ಸ್ವಾಮೀಜಿ, ಶ್ರೀ ನಾಗೇಂದ್ರ ಸ್ವಾಮೀಜಿ, ಪ್ರಭಾಕರ ಆಚಾರ್ಯ, ಪ್ರಕಾಶ ಮಹಾರಾಜರು, ಅಧಿಕಾರಿಗಳಾದ ಎ. ಬಿ. ಅಲ್ಲಾಪೂರ, ಬಿ. ನಾಗರಾಜ., ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಬಾಳು ಗಿರಗಾಂವಕರ, ವಿಶ್ವಕರ್ಮ ಮಹಾಸಭಾದ ಉಪಾಧ್ಯಕ್ಷ ಪ್ರಮೋದ ಬಡಿಗೇರ, ಸಂತೋಷ ವಿಶ್ವಕರ್ಮ, ಶ್ರೀಕಾಂತ ಕುಂದನಗಾರ, ವಿನಾಯಕ ವಿಜಯಪುರಕರ, ಅಶೋಕ ಬೇಂಡಿಗೇರಿ, ಈರಣ್ಣ ಕಣಮಡಿ, ಪ್ರಕಾಶ ಕನ್ನೂರ, ವೀಣಾ ಕುಂದಣಗಾರ, ಭಾರತಿ ಟಂಕಸಾಲಿ ಉಪಸ್ಥಿತರಿದ್ದರು.

ಭಾರತಿ ಎನ್. ಕುಂದನಗಾರ ಅವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

ಹೊಸ ಪೋಸ್ಟ್‌