ವಿಜಯಪುರ: ಬಂಜಾರಾ ಸಮುದಾಯ ವಿಶಿಷ್ಠ ಭಾಷೆ ಮತ್ತು ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ ಎಂದು ಬಂಜಾರಾ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.
ವಿಜಯಪುರ ತಾಲೂಕಿನ ಮಖಣಾಪುರ ಗ್ರಾಮದ ಎಲ್. ಟಿ.-2 ರಲ್ಲಿ ಬಂಜಾರಾ ಗಬ್ರು ಸೇವಾ ಸಂಘದ ಲಾಂಛನ ಬಿಡುಗಡೆ ಮತ್ತು ಕಚೇರಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬಂಜಾರಾ ಸಮುದಾಯದ ಸಂತ ಸೇವಾಲಾಲ ಮಹಾರಾಜರು ಸಮಾಜ ಸುಧಾರಕರಾಗಿ ಜನಾಂಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಸೇವಾಲಾಲ್ ಮಹಾರಾಜರು ಸಮಾಜದಲ್ಲಿನ ಮೌಡ್ಯತೆ ತೊಡೆದು ಹಾಕಿದ ಸಂತರು ಅವರಂತೆ ಬಂಜಾರಾ ಗಬ್ರು ಸಂಘದ ಸದಸ್ಯರೆಲ್ಲರು ಕೂಡಾ ಸಮಾಜದಲ್ಲಿ ಮೌಡ್ಯತೆ ಮತ್ತು ಮತಾಂತರ ತಡೆಯುವವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಬಂಜಾರಾ ಸಮುದಾಯದ ಜನ ವಿದ್ಯಾವಂತರಾಗಿ ಸಮಾಜದ ಮುಖ್ಯ ವಾಹಿನಿಗೆ ತರಲು ನಿವೆಲ್ಲರು ಶ್ರಮಿಸಬೇಕು ಎಂದು ಉಮೇಶ ಕಾರಜೋಳ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀಕಾಂತ ರಾಠೋಡ, ಗ್ರಾಂ. ಪಂ. ಸದಸ್ಯ ಪ್ರಕಾಶ ಚವ್ಹಾಣ, ತಾಂಡಾದ ಕಾರಭಾರಿ ನೀಲು ರಾಠೋಡ, ಪಿಂಟು ಜಾಧವ, ರಾಜು ಪವಾರ, ದಯಾನಂದ ರಾಠೋಡ, ಸಂಜು ರಾಠೋಡ, ರವಿ ಚವ್ಹಾಣ, ತಾಂಡಾದ ಹಿರಿಯರು, ಯುವಕರು ಉಪಸ್ಥಿತರಿದ್ದರು.