NEP Prerana: ಪ್ರೇರಣಾ ಶಾಲೆಯಲ್ಲಿ ಎನ್ಇಪಿ ಅಡಿ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ

ವಿಜಯಪುರ: ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ವಿಜಯಪುರ ನಗರದ ಹೊರವಲಯದಲ್ಲಿರುವ ಪ್ರೇರಣಾ ಶಾಲೆಯಲ್ಲಿ ನಡೆಯಿತು.

ಪ್ರೇರಣಾ ಶಾಲೆಯಲ್ಲಿ ಎನ್‌ಇಪಿ ಯಡಿ ಕೌಶಲ್ಯಾಭಿವೃದ್ಧಿ ಅರಿವು ಕಾರ್ಯಕ್ರಮ ನಡೆಯಿತು

ಈ ಸಂದರ್ಭದಲ್ಲಿ ಮಕ್ಕಳಲ್ಲಿ ನಾನಾ ರೀತಿಯ ಕೌಶಲ್ಯ, ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಆಯಾ ವೃತ್ತಿಯಲ್ಲಿ ನಿರತರಾದ ಕೃಷಿ ಮೂಲದ ರೈತರು, ವಿದ್ಯುತ್ , ನೀರು, ಬಡಿಗತನ ಸಂಬಂಧಿಸಿದಂತೆ ವೃತ್ತಿನಿರತರು ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಹಂಚಿಕೊಂಡರು.

ಮಕ್ಕಳಲ್ಲಿ ಭವಿಷ್ಯದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೆ ಸ್ವಯಂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾನಾ ಕೌಶಲ್ಯಗಳ ಬಗ್ಗೆ ಈ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅರವಿಂದ ವೆಂ. ಪಾಟೀಲ ಮತ್ತು ಸುಕೃತ ಅರವಿಂದ ಪಾಟೀಲ ಹಾಗೂ ಶಾಲೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌