DCC Bank Profit: ಡಿಸಿಸಿ ಬ್ಯಾಂಕಿಗೆ ಈ ವರ್ಷ ರೂ. 12.95 ಕೋ ನಿವ್ವಳ ಲಾಭ- ಶಿವಾನಂದ ಪಾಟೀಲ

ವಿಜಯಪುರ: ವಿಜಯಪುರ ಡಿಸಿಸಿ ಬ್ಯಾಂಕ್ ಈ ವರ್ಷ ರೂ.12.95 ಕೋ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ಶಾಸಕ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ದುಡಿಯುವ ಬಂಡವಾಳ ರೂ. 3746.24 ಕೋ. ಇತ್ತು. 2021-22ನೇ ಆರ್ಥಿಕ ವರ್ಷಾಂತ್ಯಕ್ಕೆ ಇದು ರೂ. 4157.97 ರಷ್ಟಾಗಿದೆ. ಈ ವರ್ಷ ರೂ. 411.73 ಕೋ. ಹೆಚ್ಚಾಗಿದೆ‌ ಎಂದು ತಿಳಿಸಿದರು.

ಬ್ಯಾಂಕಿಗೆ ಲಾಭ

2021-22ರಲ್ಲಿ ಬ್ಯಾಂಕು ರೂ. 18 ಕೋ. ಲಾಭ ಗಳಿಸಿದೆ. ಇದರಲ್ಲಿ ರೂ. 5.05 ಕೋ. ಆದಾಯ ತೆರಿಗೆ ಪಾವತಿಸಲಾಗಿದೆ. ಈಗ ಬ್ಯಾಂಕಿಗೆ ರೂ. 12.95 ಕೋ. ನಿವ್ವಳ ಲಾಭವಾಗಿದೆ ಎಂದು ಹೇಳಿದರು.

ವಿಜಯಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಮತ್ತು ಶಾಸಕ‌ ಶಿವಾನಂದ ಪಾಟೀಲ

ಹೊಸ ಶಾಖೆಗಳ ಆರಂಭಕ್ಕೆ ಅನುಮತಿ

ಜಿಲ್ಲೆಯಲ್ಲಿ ಬ್ಯಾಂಕಿನ 43 ಶಾಖೆಗಳು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿವೆ. ಹೊಸದಾಗಿ ಒಂಬತ್ತು ಶಾಖೆಗಳ ಆರಂಭಕ್ಕೆ ನುಮತಿ ದೊರಕಿದ್ದು, ಅತೀ ಶೀಘ್ರದಲ್ಲಿ ನೂತನ ಶಾಖೆಗಳು ಕಾರ್ಯಾರಂಭ ಮಾಡಲಿವೆ ಎಂದು ಅವರು ತಿಳಿಸಿದರು.

ಸಾಲ ವಿತರಣೆ

ಬ್ಯಾಂಕು 2021-22 ವರ್ಷದಲ್ಲಿ ಕೃಷಿಗಾಗಿ ರೂ. 1352.84 ಕೋ. ಮತ್ತು ನಾನಾ ಕೃಷಿ ಹೊರತಾದ ಉದ್ದೇಶಗಳಿಗಾಗಿ ರೂ. 1081.86 ಕೋ. ಸಾಲ ನೀಡಿದೆ ಸೇರಿದಂತೆ ಒಟ್ಟು ರೂ. 2434.70 ಕೋ. ಸಾಲ ವಿತರಿಸಿದೆ.  2021-22ರಲ್ಲಿ ಶೇ. 90.10 ಸಾಲ ವಸೂಲಾತಿ ಮಾಡಲಾಗಿದೆ. ನಿವ್ವಳ ಎನ್ ಪಿ ಎ ಶೇ. 1.40ರಷ್ಟಿದೆ.

2020-21ರಲ್ಲಿ ಬ್ಯಾಂಕು ರೂ. 5059.51 ಕೋ. ವ್ಯವಹಾರ ಮಾಡಿದೆ. 2021-22ರಲ್ಲಿ ರೂ. 5464 ಕೋ. ವ್ಯವಹಾರ ನಡೆಸಿದ್ದು, ಪ್ರಸಕ್ತ ವರ್ಷ ರೂ. 404.46 ಕೋ. ಹೆಚ್ಚಳವಾಗಿದೆ ಎಂದು ಶಿವಾನಂದ ಪಾಟೀಲ ತಿಳಿಸಿದರು.

ಸಾಲದ ಬಡ್ಡಿದರ ಇಳಿಕೆ

ಬ್ಯಾಂಕು ಸದಸ್ಯರ ಹಿತ ಕಾಪಾಡಲು ಬದ್ಧವಾಗಿದ್ದು, ಬ್ಯಾಂಕಿನ ಸದಸ್ಯರು ಮತ್ತು ಸಹಸದಸ್ಯರಿಗೆ ಕೃಷಿಯ ಹೊರತಾದ ಸಾಲದ ಮೇಲಿನ ಬಡ್ಡಿ ದರವನ್ನು ಶೇ. 13 ರಿಂದ 12ಕ್ಕೆ ಇಳಿಸಿದೆ. ಅಲ್ಲದೇ, ಬಂಗಾರದ ಆಭರಣಗಳ ಅಡವಿನ ಮೇಲೆ ಪ್ರತಿ ಗ್ರಾಂ. ಗೆ ರೂ. 3500 ರಂತೆ ಸಾಲ ನೀಡುತ್ತಿದೆ. ಈ ಸಾಲದ ಮೇಲಿನ ಬಡ್ಡಿ ದರವನ್ನು ಶೇ. 9.50ಕ್ಕೆ ಇಳಿಕೆ ಮಾಡಿದೆ ಎಂದು ಅವರು ತಿಳಿಸಿದರು.

ಭವಿಷ್ಯದ ಯೋಜನೆಗಳು

ವಿಜಯಪುರ ಡಿಸಿಸಿ ಬ್ಯಾಂಕು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಡಿ IMPS ಮತ್ತು UPI Payment ಸೇವೆ ಆರಂಭಿಸಲಾಗುವುದು. Micro ATM ಸೇವೆ ಆರಂಭಿಸಲಾಗುವುದು. 2022-23ನೇ ಆರ್ಥಿಕ ವರ್ಷದಲ್ಲಿ ಒಟ್ಟು 2.69 ಲಕ್ಷ ರೈತರಿಗೆ ರೂ‌. 1684 ಕೋ. ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ. ಈ ಪೈಕಿ 19500 ಹೊಸ ರೈತರಿಗೆ ರೂ. 113 ಕೋ. ಸಾಲ ವಿತರಿಸಲು ಉದ್ದೇಶಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ಶಾಸಕ ಶಿವಾನಂದ ಪಾಟೀಲ ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ‌ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌