Corporation Mushriff: ಪಾಲಿಕೆ ಮೀಸಲಾತಿ ವಿರುದ್ಧ ಹಮೀದ ಮುಶ್ರಿಫ್ ಆಕ್ರೋಶ- ಸಿಎಂ ಯತ್ನಾಳ ಕೈಗೊಂಬೆಯಾಗಿದ್ದಾರೆ ಎಂದು ಆರೋಪ

ವಿಯಪುರ: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡುಗಳ ಮೀಸಲಾತಿಯನ್ನು ಕಾಂಗ್ರೆಸ್ ಮುಖಂಡ ಹಮೀದ ಮುಶ್ರಿಫ್ ಖಂಡಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಸ್ವಾರ್ಥ ರಾಜಕಾರಣಕ್ಕಾಗಿ ಮೀಸಲಾತಿ ಪ್ರಕಟ ಮಾಡಿದೆ. ನಗರಾಭಿವೃದ್ಧಿ ಇಲಾಖೆಗೆ ಬಿಜೆಪಿ ಅಭಿವೃದ್ಧಿ ಕಚೇರಿ ಎಂದು ಹೆಸರಿಡಬೇಕು. ಬಿಜೆಪಿ ಶಾಸಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟ ಮಾಡಲಾಗಿದೆ. ಬಿಜೆಪಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಏಕೆ ಮೀಸಲಾತಿ ಹಂಚಿಕೆ ಮಾಡಿಲ್ಲ? ಎಂದು ಅವರುನಪ್ರಶ್ನಿಸಿದರು.

ಮೀಸಲಾತಿ ಪ್ರಕಟಣೆಯಲ್ಲಿ‌ ಮಾರ್ಗಸೂಚಿ ಪಾಲಿಸಿಲ್ಲ. ‌ಮನಸ್ಸಿಗೆ ಬಂದಂತೆ ವಾರ್ಡುಗಳನ್ನು ಪುನರ್ವಿಂಗಡಣೆ ಮಾಡಲಾಗಿದೆ.‌‌ ವಿಜಯಪುರ ನಗರ ಬಿಜೆಪಿ ಶಾಸಕರ ಸೂಚನೆಯಂತೆ ಡಿ+ಲಿಮಿಟೇಷನ್ ನಡೆದಿದೆ. ‌ಆಕ್ಷೇಪಕ್ಕೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಲವು ಕ್ಷೇತ್ರಗಳಲ್ಲಿ ಮಹಿಳಾ ಮೀಸಲಾತಿ ನೀಡಲಾಗಿದೆ. ಎಸ್. ಸಿ, ಎಸ್. ಟಿ‌‌ ಮೀಸಲಾತಿ ಕೂಡ ಮನಸೋ ಇಚ್ಛೆ ಮಾಡಲಾಗಿದ ಎಂದು ಮುಶ್ರಿಫ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಕೆಲಸ ಮಾಡಿದೆ. ಎಲ್ಲಾ ವಾರ್ಡ್ ಗಳಲ್ಲಿರುವ ನಮ್ಮ ಪಕ್ಷದ ಆಕಾಂಕ್ಷಿಗಳ ಜೋತೆಗೆ ಚರ್ಚಿಸಿ ಮೀಸಲಾತಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗುತ್ತೇನೆ.‌ ಕೂಡಲೇ ಸರಕಾರ ಮೀಸಲಾತಿ ಘೋಷಣೆ ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಈ ಮೀಸಲಾತಿಯನ್ನು ವಿಜಯಪುರ ನಗರದ ಹಿತ ದೃಷ್ಟಿಯಿಂದ ಮಾಡಿಲ್ಲ. ಅವರ ಪಕ್ಷದ ಹಿತಕ್ಕಾಗಿ ಮಾಡಲಾಗಿದೆ ಬಿಜೆಪಿ ಗೆಲ್ಲಲು ಬೇಕಾದ ಸರ್ಕಸ್ ಮಾಡಿದ್ದಾರೆ.‌ ಕಾನೂನು ಚೌಕಟ್ಟಿನಲ್ಲಿ‌ ಪ್ರಕ್ರಿಯೆ ನಡೆದಿಲ್ಲ. ಡೈನೋಸರಸ್ ರೀತಿಯಲ್ಲಿ ವಾರ್ಡ್ ಕ್ರಿಯೇಟ್ ಮಾಡಿದ್ದಾರೆ. ಜನರ ದಾರಿ ತಪ್ಪಿಸುವ ರೀತಿಯಲ್ಲಿ ವಾರ್ಡ್ ವಿಂಗಡಣೆ ಮಾಡಿದ್ದು, ಕೆಲವು ವಾರ್ಡ್ ಗಳಲ್ಲಿ ಜನಸಂಖ್ಯೆಗಿಂತ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು.

ಈ‌ ಮೀಸಲಾತಿಗೆ ಕಾಂಗ್ರೆಸ್ ವಿರೋಧ ಇದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ‌ಕಾನೂನು ಚೌಕಟ್ಟು ಮೀರಿ ಬಿಜೆಪಿ ನಡೆಯುತ್ತಿದೆ. ಬಿಜೆಪಿ ಮುಖಂಡರ ತೀರ್ಮಾನ ಆಗಿದೆ ಎಂದರು.

ವಿಕಾಸಸೌಧದವನ್ನು ಬಿಜೆಪಿ ಕಚೇರಿಯನ್ಬಾಗಿ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆಗೆ ಬಿಜೆಪಿ ಕಚೇರಿ ಎಂದು ಬೋರ್ಡ್ ಹಾಕಲಿ ಎಂದು ಅವರು ಆಕ್ರೋಶ ವಾಗ್ದಾಳಿ ನಡೆಸಿದರು.

ಮಾರ್ಗಸೂಚಿ ಮೀರಿ ಸೋಲುವ ಭಯದಿಂದ ಸಾಮಾಜಿಕ ನ್ಯಾಯದ ವಿರುದ್ಧವಾಗಿ‌ ಮೀಸಲಾತಿ ಘೋಷಣೆ ಮಾಡಲಾಗಿದೆ. ಇದರ ಹಿಂದೆ ಮುಖ್ಯಮಂತ್ರಿಗಳ ಕೈವಾಡ ಇದೆ. ವಿಜಯಪುರ ಬಿಜೆಪಿ ಶಾಸಕರ ಕೈಗೊಂಬೆಯಾಗಿ ಸಿಎಂ ಈ‌ ನಿರ್ಧಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಹೆದರಲ್ಲ. ಬಿಜೆಪಿ ವಿರುದ್ಧ ನಮ್ಮ ನಾಯಕರಾದ ಎಂ. ಬಿ. ಪಾಟೀಲ ಸಾಹೇಬರ ನೇತೃತ್ವದಲ್ಲಿ ಹೋರಾಟ ಮಾಡಿ ಚುನಾವಣೆ ಎದುರಿಸುತ್ತೇವೆ ಮತ್ತು ಚುನಾವಣೆ ಗೆಲ್ಲುತ್ತೇವೆ ಎಂದು ಹಮೀದ್ ಮುಶ್ರಿಫ್ ಹೇಳಿದತು.

Leave a Reply

ಹೊಸ ಪೋಸ್ಟ್‌