ವಿಜಯಪುರ: ನಗರದ ಪ್ರತಿಷ್ಠಿತ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ 21ನೇ ಸಂಸ್ಥಾಪನೆ ದಿನವನ್ನು ಆಶ್ರಮ ರಸ್ತೆಯಲ್ಲಿರುವ ಶಾಲೆಯ ಆವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ 21 ವರ್ಷಗಳಲ್ಲಿ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಜಿಲ್ಲೆಯಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಈ ಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತವಾದ ಸ್ಥಾನಮಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇದಕ್ಕೆ ಈ ಶಾಲೆಯಲ್ಲಿ ಕಲಿಸಿದ ಗುರುಗಳು, ಓದಿದ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಇತರ ಸಿಬ್ಬಂದಿ ಕಾರಣ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ವಿಧೇಯರಾಗಿರಬೇಕು. ಭಯ ಮತ್ತು ಹೆದರಿಕೆಯ ಗುಣಗಳು ವಿದ್ಯಾರ್ಥಿಗಳಲ್ಲಿ ಇರಬಾರದು. ಆಗ ಮಾತ್ರ ಏನನ್ನಾದರು ಸಾಧಿಸಲು ಸಾದ್ಯ. ವಿದ್ಯಾರ್ಥಿಗಳು ಪಾಲಕರಿಗೆ ಆಸ್ತಿಯಾಗಬೇಕು ಎಂದು ಶೀಲಾ ಬಿರಾದಾರ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ದಿವ್ಯಾ ಬಿರಾದಾರ ಮಾತನಾಡಿದರು.
ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರರು ಮತ್ತು ಶಿಕ್ಷಕರ ಹೊರತಾದ ಸಿಬ್ಬಂಧಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ವಿದ್ಯಾರ್ಥಿನಿ ಶ್ರೇಯಾಂಸ ಮೆಹ್ತಾ ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕಿ ಶ್ರೀದೇವಿ ಜೋಳದ ಹಾಗೂ ಎ. ಎಚ್. ಸಗರ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ಸಂಯೋಜಕಿಯಾದ ಪೂಜಾ ಖನಗೆ, ಶಿಕ್ಷಕರಾದ ಅನೀಲ ಬಾಗೇವಾಡಿ, ಅಶ್ವೀನ ವಗದರಗಿ, ಲಕ್ಷ್ಮಣ ಪಾಟೀಲ, ಬಸವರಾಜ ರೆಬಿನಾಳ, ಶಶಿಧರ ಲೋನಾರಮಠ, ಈಶ್ವರ, ಜುಬೇರ, ಸುರೇಖಾ ಪಾಟೀಲ, ಸವಿತಾ ಪಾಟೀಲ, ಶ್ವೇತಾ ಪಾಟೀಲ, ಹೀನಾಕೌಸರ, ತಬಸುಮ, ಗೀತಾಂಜಲಿ, ಜಾನಕಿ, ಮದುಮತಿ, ಕವಿತಾ, ದೀಪಾ, ಅಪ್ಸರಾ, ಪ್ರೀತಿ, ಶಿಲ್ಪಾ, ಶ್ವೇತಾ ಜಿಂಗಾಡೆ, ಅಶ್ವೀನಿ, ಯುನುಸ, ರೇಣುಕಾ ಕಡೇಮನಿ ಮುಂತಾದವರು ಉಪಸ್ಥಿತರಿದ್ದರು.
ಶಾಲೆಯ ಪ್ರಾಚಾರ್ಯ ಶ್ರೀಧರ ಕುರಬೆಟ ಸ್ವಾಗತಿಸಿದರು. ಶಿಕ್ಷಕಿ ಸೀಮಾ ಸದಲಗ ನಿರೂಪಿಸಿದರು, ಶಿಕ್ಷಕ ಪ್ರವೀಣ ಗೆಣ್ಣೂರ ವಂದಿಸಿದರು.