Award Falicitatiohn: ಚಟುವಟಿಕೆಯಿಂದ ಸೇವೆ ಮಾಡಿದಾಗ ಮಾತ್ರ ವೃತ್ತಿಯಲ್ಲಿ ಶ್ರೇಷ್ಠತೆ ಸಾಧ್ಯ- ಪಿಯುಸಿ ಡಿಡಿ ಎಸ್. ಎಸ್. ಬಗಲಿ

ವಿಜಯಪುರ: ಮನುಷ್ಯ ಸೋಮಾರಿಯಾಗದೆ ಚಟುವಟಿಕೆಗಳನ್ನು ಮಾಡುತ್ತಿದ್ದರೆ ಹೊಸ ಆವಿಷ್ಕಾರಗಳನ್ನು ಮಾಡಬಲ್ಲ ಹಾಗೂ ತನ್ನ ವೃತ್ತಿಯಲ್ಲಿ ಶ್ರೇಷ್ಠತೆಯನ್ನು ಸಾಧಿಸಬಹುದು ಎಂದು ವಿಜಯಪುರ ಪಿಯು ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಎನ್. ಬಗಲಿ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾರದಾ ಸಭಾಭವನದಲ್ಲಿ ನಡೆದ 2022-23 ನೇ ಶೈಕ್ಷಣಿಕ ವರ್ಷದ ಅತ್ಯುತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ ಪಡೆದ ಪ್ರೊ. ಎಂ. ಬಿ. ರಜಪೂತ ಅವರ ಸನ್ಮಾನ ಸಮಾರಂಭದಲ್ಲಿಅವರು ಮಾತನಾಡಿದರು.

ಪ್ರೊ. ಎಂ. ಬಿ. ರಜಪೂತ ಅವರನ್ನು ಸನ್ಮಾನಿಸಲಾಯಿತು

ಪ್ರಶಸ್ತಿಗಾಗಿ ಕಾರ್ಯ ನಿರ್ವಹಿಸದೆ ತನ್ನ ವೃತ್ತಿಯಲ್ಲಿ ಶ್ರೇಷ್ಠತೆಯನ್ನು ಮೆರೆದು ಬದ್ದತೆಯಿಂದ ಕಾರ್ಯ ನಿರ್ವಹಿಸಿದರೆ ಪ್ರಶಸ್ತಿಗಳು ತಾನಾಗಿಯೇ ಅರಸಿಕೊಂಡು ಬರುತ್ತವೆ.  ಅದಕ್ಕೆ ಪ್ರೊ. ಎಂ. ಬಿ. ರಜಪೂತ ಅವರೇ ಸಾಕ್ಷಿ ಎಂದು ಎಸ್. ಎಸ್. ಬಗಲಿ ಹೇಳಿದರು.

ಪಿಯು ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಮಾತನಾಡಿ, ಸರಕಾರಿ ಕಾಲೇಜುಗಳಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ.  ಏಕೆಂದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಹುದ್ದೆಗಳಿಗೆ ಪ್ರತಿಭಾನ್ವಿತರೆ ಆಯ್ಕೆಯಾಗುತ್ತಿದ್ದಾರೆ.  ಅವರು ನಿಷ್ಠೆಯಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ಪ್ರತಿ ವರ್ಷ ಪ್ರಶಸ್ತಿ ನಮ್ಮ ಜಿಲ್ಲೆಗೆ ಪ್ರಶಸ್ತಿ ಬಂದೇ ಬರುತ್ತದೆ ಎಂದು ಹೇಳಿದರು.

ಪ್ರೊ. ಎಂ. ಬಿ. ರಜಪೂತ ಮಾತನಾಡಿ, 27 ವರ್ಷಗಳ ಸತತ ಸೇವೆಯಲ್ಲಿ ಬೇಸರ ಅಥವಾ ಸೋಮಾರಿತನ ಪಟ್ಟುಕೊಳ್ಳದೆ ಹೊಸದನ್ನು ಕಲಿಯುತ್ತ ಬೋಧನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಕೊಳ್ಳುತ್ತ ಹೋದಾಗ ಮೇಲಾಧಿಕಾರಿಗಳ ಪ್ರೋತ್ಸಾಹ ಫಲದಿಂದ ಪ್ರಶಸ್ತಿ ಲಭಿಸಿದೆ.  ಈ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.

ಈ ಕಾರ್ಯಕರ್ಮದಲ್ಲಿ ಕಗ್ಗೋಡ ಸರಕಾರಿ ಪಿಯು ಪೂರ್ವ ಕಾಲೇಜಿನ ಕೆ. ಎ. ಉಪ್ಪಾರm ಕಾಲೇಜಿನ ಎಲ್ಲ ಉಪನ್ಯಾಸಕರು,ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪಾಚಾರ್ಯ ಸಿ. ಬಿ. ನಾಟೀಕಾರ ಅಧ್ಯಕ್ಷತೆ ವಹಿಸಿದ್ದರು.  ಸಿಬ್ಬಂದಿ ಕಾರ್ಯದರ್ಶಿ ಪ್ರೊ. ಎಸ್. ಬಿ. ಸಾವಳಸಂಗ ಸ್ವಾಗತಿಸಿದರು.   ಪ್ರೊ. ಮಲ್ಲಮ್ಮ ಮಾಲಿಪಾಟೀಲ ವಂದಿಸಿದರು.  ಪ್ರೊ. ಆರ್. ಸಿ. ಹಿರೇಮಠ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌