Deafness Awareness Week: ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕಿವುಡುತನ ಕಾಯಿಲೆಗಳಿಗೆ ದಿನದ 24 ಗಂಟೆ ಉತ್ತಮ ಚಿಕಿತ್ಸೆ ಲಭ್ಯವಿದೆ- ಡಾ. ಆರ್. ಎಸ್. ಮುಧೋಳ

ವಿಜಯಪುರ: ಜನ್ಮದಿಂದಲೇ ಕಿವುಡುತನ ಮತ್ತು ಹಿರಿಯ ನಾಗರಿಕರಲ್ಲಿ ಉಂಟಾಗುವ ಕಿವುಡುತನ ಕಾಯಿಲೆಗಳಿಗೆ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಉತ್ತಮ ಚಿಕಿತ್ಸೆ ಲಭ್ಯವಿದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು.

ಬಿ ಎಲ್ ಡಿ ಇ ಆಸ್ಪತ್ರೆಯ ಕಿವಿ, ಮೂಗು, ಗಂಟಲು ಹಾಗೂ ಡಿ. ಡಿ. ಆರ್. ಸಿ(ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ) ವತಿಯಿಂದ ಆಯೋಜಿಸಲಾಗಿದ್ದ ಕಿವುಡುತನ ಕುರಿತ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಶಸ್ತ್ರಚಿಕಿತ್ಸೆಗೆ ಲಭ್ಯವಿರುವ ಹೊಸ ಅತ್ಯಾಧುನಿಕ ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬಿ ಎಲ್ ಡಿ ಇ ಆಸ್ಪತ್ರೆಯ ಕಿವಿ, ಮೂಗೂ, ಗಂಟಲು ವಿಭಾಗದಲ್ಲಿ 24 ಗಂಟೆ ಶ್ರವಣ ತಜ್ಞರು ಚಿಕಿತ್ಸೆಗೆ ಲಭ್ಯರಿರುತ್ತಾರೆ.  ಇಲ್ಲಿ ಅತ್ಯಾಧುನಿಕ ಉಪಕರಣಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.  ಕಿವಿಯ ಸೊಂಕು, ಹುಟ್ಟಿನಿಂದ ಕಿವುಡುತನ ಮತ್ತು ಹಿರಿಯ ನಾಗರಿಕರಲ್ಲಿ ಕಾಣಿಸಿಕೊಳ್ಳುವ ಕಿವುಡುತನ ಮುಂತಾದ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ.  ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಿವುಡುತನ ಅರಿವು ಸಪ್ತಾಹ ಕಾರ್ಯಕ್ರಮಕ್ಕೆ ಬಿ ಎಲ್ ಡಿ ಇ ಡೀಮ್ಡ್ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಚಾಲನೆ ನೀಡಿದರು

ವಿಭಾಗದ ಮುಖ್ಯಸ್ಥೆ ಡಾ. ಲತಾದೇವಿ ಮಾತನಾಡಿ, ಸಾರ್ವಜನಿಕರು ಅದರಲ್ಲೂ ಮಕ್ಕಳು ಶಬ್ಧ ಮಾಲಿನ್ಯದಿಂದಾಗಿ ಹೆಚ್ಚು ಶ್ರವಣ ದೋಷಕ್ಕೆ ತುತ್ತಾಗುತ್ತಿದ್ದಾರೆ.  ಮೂರು ವರ್ಷದಳಗಿನ ಯಾವುದೇ ಮಗು ಎಲ್ಲರಂತೆ ಮಾತನಾಡಲು ಪ್ರಯತ್ನಿಸುತ್ತಿಲ್ಲವಾದರೆ ತಕ್ಷಣವೆ ಪಾಲಕರು ಅಥವಾ ಶಾಲಾ ಶಿಕ್ಷಕರು ಅಥವಾ ಅಂಗನವಾಡಿ ಕಾರ್ಯಕರ್ತೆಯರು ಪತ್ತೆ ಹಚ್ಚಿ ತಕ್ಷಣವೆ ಕಿವಿ, ಮೂಗೂ, ಗಂಟಲು ತಜ್ಞರನ್ನು ಭೇಟಿ ಮಾಡಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.  ಸುರಕ್ಷಾ ಆರೋಗ್ಯ ಟ್ರಸ್ಟ್ ಯೋಜನೆ ಅಡಿ ಇನ್ನು ಮುಂದೆ ಬಿ. ಎಲ್. ಡಿ. ಇ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ (ಕಾಕ್ಲಿಯರ್ ಇಂಪ್ಲಾಯಂಟ ಯೋಜನೆ) ಲಭ್ಯವಿದ್ದು ಜನ್ಮಜಾತ ಕಿವುಡುತನ ಇರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಸಾಮಾನ್ಯ ಮಕ್ಕಳಂತೆ ಶ್ರವಣಶಕ್ತಿ ಬರುವಂತಹ ಅವಕಾಶವಿದೆ.  ಈ ಶಸ್ತ್ರಚಿಕಿತ್ಸಯನ್ನು ವಿಮಾ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಮಉಪಕುಲಪತಿ ಡಾ. ಅರುಣ ಇನಾಮದಾರ, ಉಪಪ್ರಾಂಶುಪಾಲರಾದ ಡಾ. ಸುಮಂಗಲಾ ಪಾಟೀಲ, ಜನರಲ್ ಮಡಿಸಿನ್ ಮುಖ್ಯಸ್ಥ ಡಾ. ಬಡಿಗೇರ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಕಲ್ಯಾಣಶಟ್ಟರ, ಡಾ. ಶಶಿಕುಮಾರ, ಜಿಲ್ಲಾ ವಿಕಲಚೇತನ ಪುನರವಸತಿ ಕೇಂದ್ರದ ನೂಡಲ್ ಅಧಿಕಾರಿ ಡಾ. ಈಶ್ವರ ಬಾಗೋಜಿ ಸೇರಿದಂತೆ ನಾನಾ ವೈದ್ಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಡಾ. ನಿತಿನ ಹಾಗೂ ಡಾ. ಮನಾಲಿ ಬಟ್ಟ್ ಕಾರ್ಯಕ್ರಮ ನಿರೂಪಿಸಿದರು.  ಡಾ.ಶಶಿಕುಮಾರ್ ವಂದಿಸಿದರು.

 

Leave a Reply

ಹೊಸ ಪೋಸ್ಟ್‌