Hospital Award: ವಿಜಯಪುರ ಜಿಲ್ಲಾಸ್ಪತ್ರೆಗೆ ಮತ್ತೋಂದು ಗರಿ- ಕೇಂದ್ರ ಸರಕಾರದಿಂದ ಉತ್ಕೃಷ್ಟ ಸೇವೆ ಪ್ರಶಸ್ತಿ
ಮಹೇಶ ವಿ. ಶಟಗಾರ ವಿಜಯಪುರ: ಸತತವಾಗಿ ಎರಡು ವರ್ಷ ಕಾಯಕಲ್ಪ ಪ್ರಶಸ್ತಿ ಮತ್ತು ಸೆ. 5 ರಂದು ಕೇಂದ್ರ ಆರೋಗ್ಯ ಮತ್ತು ರಾಜ್ಯದ ಜಿಲ್ಲಾಸ್ಪತ್ರೆ ವಿಭಾಗದಲ್ಲಿ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ(NQAS) ಪ್ರಶಸ್ತಿ ಪಡೆದಿದ್ದ ಬಸವ ನಾಡಿನ ವಿಜಯಪುರ ಜಿಲ್ಲಾಸ್ಪತ್ರೆಗೆ ಈಗ ಮತ್ತೋಂದು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಆಯುಷ್ಮಾನ ಭಾರತ ಡಿಜಿಟಲ್ ಮಿಷನ್(ಎಬಿಡಿಎಂ) ಅಡಿಯಲ್ಲಿ ಕರ್ನಾಟಕ ಅತೀ ಹೆಚ್ಚು ವ್ಯಕ್ತಿಗಳ ಆರೋಗ್ಯ ದಾಖಲೆಗಳನ್ನು ಅಭಾ(ಆಯುಷ್ಮಾನ ಭಾರತ ಹೆಲ್ತ್ ಅಕೌಂಟ್)ಗೆ ನೋಂದಣಿ ಮಾಡಿಸಿದೆ. ಕರ್ನಾಟಕದಲ್ಲಿ ಸರಕಾರಿ ಆಸ್ಪತ್ರೆಗಳ ವಿಭಾಗದಲ್ಲಿ […]
JEE Rank: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರಾಕೇಶಕುಮಾರ ಹೊನ್ನಳ್ಳಿ ವಿಜಯಪುರ ಜಿಲ್ಲೆಗೆ ಪ್ರಥಮ- ರವೀಂದ್ರನಾಥ ಠ್ಯಾಗೋರ ಶಾಲೆಯಲ್ಲಿ ಸಂಭ್ರಮ
ವಿಜಯಪುರ: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬಸವ ನಾಡಿನ ವಿದ್ಯಾರ್ಥಿ ರಾಕೇಶಕುಮಾರ ಹೊನ್ನಳ್ಳಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಐಐಟಿ ಸೇರುವುದು ದೊಡ್ಡ ಕನಸಾಗಿರುತ್ತದೆ. ಭಾರತದ ಪ್ರತಿಷ್ಠಿತ ಐಐಟಿಯಲ್ಲಿ ಓದಲು ನಡೆಸಲಾಗುವ ಪ್ರವೇಶ ಪರೀಕ್ಷೆಯೂ ಅಷ್ಟೇ ಕಠಿಣವಾಗಿರುತ್ತದೆ. ಈ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಪಾಸು ಮಾಡಿದ್ದಷ್ಟೇ ಅಲ್ಲ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ವಿದ್ಯಾರ್ಥಿ ಬಸವ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ […]
BJP Deenadayal Upadhyal: ಬಿಜೆಪಿ ಯುವ ಮೋರ್ಚಾ ವತಿಯಿಂದ ಪಂ. ದೀನದಯಾಳ ಉಪಾಧ್ಯಾಯ ಜಯಂತಿ ಆಚರಣೆ
ವಿಜಯಪುರ: ಪಂ.ದೀನದಯಾಳ ಉಪಾಧ್ಯಾಯ ಅವರ ಜಯಂತೋತ್ಸವವನ್ನು ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಆಚರಿಸಲಾಯಿತು. ವಿಜಯಪುರ ನಗರದ ಆಲಕುಂಟೆ ನಗರದಲ್ಲಿ ಸಸಿಗಳನ್ನು ನೆಡುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೇ, ಪಂ.ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾಂಜಲಿ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪಂ. ದೀನದಯಾಳ ಉಪಾಧ್ಯಾಯ ಅವರು ಜನಕಲ್ಯಾಣ ಹಾಗೂ ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಬೇಕು ಎಂಬ ಸದುದ್ದೇಶ ಹೊಂದಿದ್ದ ಮಹಾನ್ […]
Nandi Sugar Factory: ಈ ವರ್ಷ 16 ಲಕ್ಷ ಮೆ. ಟನ್ ಕಬ್ಬು ನುರಿಸುವ ಗುರಿಯಿದೆ- ಶಶಿಕಾಂತಗೌಡ ಬಿ. ಪಾಟೀಲ
ವಿಜಯಪುರ: ಜಿಲ್ಲೆ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷ 16 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ(ಶಿರಬೂರ) ತಿಳಿಸಿದ್ದಾರೆ. ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ನಡೆದ ನಂದಿ ಸಹಕಾರಿ ಸಕ್ಕರೆ ಕಾರಖಾನೆಯ 2021-22ನೇ ಆರ್ಥಿಕ ವರ್ಷದ ಸರ್ವ ಸಾಧಾರಣಾ ಸಭೆಯಲ್ಲಿ ಅವರು ಮಾತನಾಡಿದರು. 2021-22 ನೇ ಆರ್ಥಿಕ ವರ್ಷದ ವರದಿ ವಾಚನ ಮಾಡಿದ ಅವರು, ಕಾರ್ಖಾನೆಯ ಅಭಿವೃದ್ಧಿ ಮತ್ತು ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ […]
Cleanliness CEO: ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಸ್ವತ ಕಸಗೂಡಿಸಿ ಚಾಲನೆ ನೀಡಿದ ಜಿ. ಪಂ. ಸಿಇಓ ರಾಹುಲ ಶಿಂಧೆ
ವಿಜಯಪುರ: ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಜಿ. ಪಂ. ಸಿಇಓ ರಾಹುಲ ಶಿಂಧೆ ಸ್ವತಃ ಕಸಬರಿಗೆ ಹಿಡಿದು ಚಾಲನೆ ನೀಡಿದರು. ಇದರಿಂದ ಪ್ರೇರೇಪಣೆಗೊಂಡ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸ್ವಚ್ಛತಾಗಾರರು ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರತಿ ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ವಚ್ಛತಾ ಹಿ ಸೇವಾ ಆಂದೋಲನ ಕಾರ್ಯಕ್ರಮ […]
PU Collage: ಐದು ವರ್ಷಗಳ ಹೋರಾಟ- 2019ರಲ್ಲಿ ರಕ್ತದಲ್ಲಿ ಪತ್ರ ಬರೆದ ಯುವಕ- ಕೊನೆಗೂ ನಾಲತವಾಡಕ್ಕೆ ಪಿಯು ಕಾಲೇಜು ಮಂಜೂರು
ವಿಜಯಪುರ: ಈ ಯುವಕ 2017ರಲ್ಲಿ ಅಂದರೆ ಕಳೆದ ಐದು ವರ್ಷಗಳಿಂದ ತನ್ನೂರಿಗೆ ಪಿಯು ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದ. ಶಿಕ್ಷಣ ಪ್ರೇಮಿಯಾಗಿರುವ ಯುವಕ ತನ್ನ ಊರಿನ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಬೇರೆ ಊರಿಗೆ ಅಲೆದಾಡುವುದನ್ನು ಕಂಡು ಏನಾದರೂ ಮಾಡಿ ಕಾಲೇಜು ಇಲ್ಲ ಎಂಬ ತಾಪತ್ರಯವನ್ನು ಬಗೆಹರಿಸಲು ಕಂಕಣಬದ್ಧವಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದ. ಈಗ ಈ ಯುವಕನ ಹೋರಾಟಕ್ಕೆ ಫಲ ಸಿಕ್ಕಿದೆ. ಈ ಯುವಕನ ಹೆಸರು ವಿಜಯರಂಜನ ಜೋಶಿ. ಬಸವ ನಾಡು ವಿಜಯಪುರ ಜಿಲ್ಲೆಯ […]