ವಿಜಯಪುರ: ಪಂ.ದೀನದಯಾಳ ಉಪಾಧ್ಯಾಯ ಅವರ ಜಯಂತೋತ್ಸವವನ್ನು ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಆಚರಿಸಲಾಯಿತು.
ವಿಜಯಪುರ ನಗರದ ಆಲಕುಂಟೆ ನಗರದಲ್ಲಿ ಸಸಿಗಳನ್ನು ನೆಡುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೇ, ಪಂ.ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾಂಜಲಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಪಂ. ದೀನದಯಾಳ ಉಪಾಧ್ಯಾಯ ಅವರು ಜನಕಲ್ಯಾಣ ಹಾಗೂ ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಬೇಕು ಎಂಬ ಸದುದ್ದೇಶ ಹೊಂದಿದ್ದ ಮಹಾನ್ ನಾಯಕರಾಗಿದ್ದರು. ಅವರನ್ನು ಪ್ರೇರಣೆಯಾಗಿಟ್ಟುಕೊಂಡು ನಾವೆಲ್ಲರೂ ಮುನ್ನಡೆಯಬೇಕಾಗಿದೆ. ಏಕಾತ್ಮ ಮಾನವ ದರ್ಶನ ಲೇಖನ ಅವರ ವ್ಯಕ್ತಿತ್ವದ ಪ್ರತಿಬಿಂಬವಾಗಿದೆ. ಈ ಅದ್ಯಾಯನವನ್ನು ನಾವು ಓದಿ ಅರ್ಥೈಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಕಾಂಗ್ರೆಸ್‍ನಿಂದ ಜನಹಿತ ಅಸಾಧ್ಯ ಎಂದು ಮನಗಂಡು ಪಂ. ದೀನದಯಾಳ ಉಪಾಧ್ಯಾಯ ಅವರು ಜನಸಂಘವನ್ನು ಸ್ಥಾಪಿಸಿದರು. ಈ ಜನಸಂಘವೇ ಇಂದು ಬಿಜೆಪಿಯಾಗಿ ವಿಶ್ವದಲ್ಲಿಯೇ ಬೃಹತ್ ಪಕ್ಷವಾಗಿ ಮುನ್ನಡೆಯುತ್ತಿದೆ ಎಂದು ಆರ್. ಎಸ್. ಪಾಟೀಲ ಕೂಚಬಾಳ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡರಾದ ಸುನೀಲ ಜೈನಾಪೂರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಜಿಲ್ಲಾ ವಕ್ತಾರ ಡಾ. ಸುರೇಶ ಬಿರಾದಾರ, ವಿಜಯಪುರ ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸತೀಶ ಪಾಟೀಲ, ಬಸವರಾಜ ಬೈಚಬಾಳ, ಕೃಷ್ಣಾ ಗುನ್ನಾಳಕರ, ರಾಜೇಶ ತಾವಸೆ, ಸಂದೀಪ ಪಾಟೀಲ, ವಿನಾಯಕ ದಹಿಂಡೆ, ರವಿ ಚವಾಣ, ಅನೀಲ ಉಪ್ಪಾರ, ಪ್ರವೀಣ ಕೂಡಿಗೆ, ನಿಖಿಲ, ಸಂತೋಷ ನಿಂಬರಗಿ, ಸುನೀಲ ಕೃಷ್ಣಮಾಚಾರಿ, ಶ್ರೀಧರ ಬಿಜ್ಜರಗಿ, ದಶರಥ, ರಾಜಶೇಖರ ತಾಳಿಕೋಟೆ, ಹರೀಶ ಮುಂತಾದವರು ಉಪಸ್ಥಿತರಿದ್ದರು.