ವಿಜಯಪುರ: ಜಿಲ್ಲೆ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷ 16 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ(ಶಿರಬೂರ) ತಿಳಿಸಿದ್ದಾರೆ.
ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ನಡೆದ ನಂದಿ ಸಹಕಾರಿ ಸಕ್ಕರೆ ಕಾರಖಾನೆಯ 2021-22ನೇ ಆರ್ಥಿಕ ವರ್ಷದ ಸರ್ವ ಸಾಧಾರಣಾ ಸಭೆಯಲ್ಲಿ ಅವರು ಮಾತನಾಡಿದರು.
2021-22 ನೇ ಆರ್ಥಿಕ ವರ್ಷದ ವರದಿ ವಾಚನ ಮಾಡಿದ ಅವರು, ಕಾರ್ಖಾನೆಯ ಅಭಿವೃದ್ಧಿ ಮತ್ತು ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಭವಿಷ್ಯದಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಯೋಜನೆಗಳ ಕುರಿತು ಕಾರ್ಖಾನೆಯ ಸುತ್ತಲಿನ ಗ್ರಾಮಗಳ ಶೇರುದಾರರು, ಕಬ್ಬು ಬೆಳೆಗಾರರು ಹಾಗೂ ಹಿರಿಯರ ಸಲಹೆ ಮತ್ತು ಮಾರ್ಗದರ್ಶನ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಕಾರ್ಖಾನೆಯು ತನ್ನ 30 ನೇ ವರ್ಷಕ್ಕೆ ಕಾಲಿಟ್ಟಿದ್ದು, 2021-22ರಲ್ಲಿ ಒಟ್ಟು 9,19,322 ಮೆಟ್ರಿಕ್ ಟನ್ ಕಬ್ಬು ನುರಿಸಿ 9,07,530 ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. 11.40ರಷ್ಟು ಸಕ್ಕರೆ ಇಳುವರಿ ಬಂದಿದೆ. ಕೇಂದ್ರ ಸರಕಾರದ ನೂತನ ನೀತಿ ಅನ್ವಯ 35664 ಮೆಟ್ರಿಕ್ ಟನ್ ಬಿ ಹೆವ್ಹಿ ಕಾಕಂಬಿ ಬಳಸಿಕೊಂಡು 1,16,77,423 ಲೀಟರ ಇಥೆನಾಲ್ ಉತ್ಪಾದಿಸಿ ತೈಲ ಸರಬರಾಜು ಕಂಪನಿಗಳಿಗೆ ಮಾರಾಟ ಮಾಡಲಾಗಿದೆ. 2022-23 ನೇ ಕಬ್ಬು ನುರಿಸುವ ಹಂಗಾಮಿನಲ್ಲಿ ಸುಮಾರು 16 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 2 ಕೋಟಿ ಲೀಟರ್ ಇಥೆನಾಲನ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಶಶಿಕಾಂತಗೌಡ ಪಾಟೀಲ(ಶಿರಬೂರ) ತಿಳಿಸಿದು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಎಚ್. ವೈ. ಗದ್ದನಕೇರಿ ಮಾತನಾಡಿ, 2021-22ನೇ ಆರ್ಥಿಕ ವರ್ಷದ ವಾರ್ಷಿಕ ಸವಾಸಾಧಾರಣಾ ಸಭೆಯ ನೋಟೀಸ್ ವಿಷಯ ಪಟ್ಟಿಯನ್ವು ಸಭೆಯಲ್ಲಿ ಮಂಡಿಸಿದರು.
ಬಿ. ಆರ್. ಚೌಕಿಮಠ ಮಾತನಾಡಿ, ಕೇಂದ್ರ ಸರ್ಕಾರದ ಸಚಿವ ನಿತೀನ್ ಗಡ್ಕರಿ ಅವರು ಕಾರ್ಖಾನೆಗಳ ಅಭಿವೃದ್ದಿಯ ಸಲುವಾಗಿ ಮತ್ತು ರೈತರ ಒಳಿತಗಾಗಿ ಉಪಉತ್ಪನ್ನಗಳನ್ನು ಹೆಚ್ಚಿಸಬೇಕು. ಅದರಲ್ಲಿ ಇಥೆನಾಲ್ ತಯಾರಿಕೆ ಹೆಚ್ಚಿಸುವ ಮಹದಾಸೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು, ರೈತರು ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಹಾಜರಿದ್ದ ಶೇರುದಾರರು ಕೇಳಿದ ನಾನಾ ಪ್ರಶ್ನೆಗಳಿಗೆ ಉಪಸ್ಥಿತರಿದ್ದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕರು, ಕಾರ್ಖಾನೆಯ ವಿಭಾಗದ ಮುಖ್ಯಸ್ಥರು ಸಮಾಧಾನದಿಂದ ಉತ್ತರಿಸಿದರು.
ಈ ಸಭೆಯ ವೇದಿಕೆಯ ಮೇಲೆ ಕಾರ್ಖಾನೆಯ ನಿರ್ದೇಶಕರಾದ ಜಿ. ಕೆ. ಕೋನಪ್ಪನವರ, ಕುಮಾರ ದೇಸಾಯಿ, ರಮೇಶ ಜಕರಡ್ಡಿ, ರಮೇಶ ಶೇಬಾಣಿ, ಸಿದ್ದಣ್ಣ ದೇಸಾಯಿ, ತಿಮ್ಮಣ್ಣ ಅಮಲಝರಿ, ವಿ. ಎಚ್. ಬಿದರಿ, ರಾಮಪ್ಪ ಹರಿಜನ, ಹಣಮಂತ ಕೊಣ್ಣೂರ, ಹಣಮಂತ ಕಡಪಟ್ಟಿ, ಸುರೇಖಾ ಆರ್. ನಿಡೋಣಿ, ಲತಾ ವಿ. ಬಿರಾದಾರ ಪಾಟೀಲ ಪಿ. ಬಿ. ಸರನಾಯಿಕ, ಆನಂದ ಜಿ. ಮಂಗಳವೇಡೆ, ಶೇಖರ ಎಸ್. ಕೊಪ್ಪದ, ಆರ್. ಪಿ. ಕೊಡಬಾಗಿ, ಎಸ್. ಟಿ. ಪಾಟೀಲ, ಜಗದೀಶ ಶಿರಾಳಶೆಟ್ಟಿ, ಸಿ. ಎಚ್. ಜಮಖಂಡಿ ಮುಂತಾದವರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಮುಖಂಡರಾದ ಮುತ್ತು ದೇಸಾಯಿ (ಯಡಹಳ್ಳಿ), ಶಶಿಕುಮಾರ ದೇಸಾಯಿ, ಬಸವರಾಜ ದೇಸಾಯಿ, ಚಂದಪ್ಪ ಕೋರಡ್ಡಿ, ಶಂಕರಗೌಡ ಪಾಟೀಲ, ಶಿವನಗೌಡ ಪಾಟೀಲ, ಎಚ್. ಎಸ್. ಕೋರಡ್ಡಿ, ಸುಭಾಷ ಸಾವುಕಾರ, ರಮೇಶ ಬಿದನೂರ, ಬಸವನಗೌಡ ಪಾಟೀಲ, ಬಿ.ಆರ್. ಚೌಕಿಮಠ, ರಾಚಪ್ಪ ಕಾಳಪ್ಪನವರ, ಟಿ.ಆರ್. ಪಚ್ಚನ್ನವರ, ಮೋಹನ ದೇಸಾಯಿ, ಕೆ,ಅರ್. ಬಿರಾದಾರ, ಎಚ್.ಪಿ.ಸೊನ್ನದ, ವೆಂಕಣ್ಣಾ ಪಾಟೀಲ, ಸಂಗನಗೌಡ ಪಾಟೀಲ, ಲಕ್ಷ್ಮಣ ದೊಡಮನಿ, ಸತೀಶ ಪಂಚಗಾವಿ, ಭೀಮಶಿ ಜೀರಗಾಳ, ಪಾಂಡು ಚಿಗದಾನಿ, ಗುರುನಾಥ ಬಗಲಿ, ಭೀಮಶಿ ಕೋಕರೆ, ಪ್ರಭುಸ್ವಾಮಿ ಹಿರೇಮಠ, ಮೋಹನ ಜಾಧವ, ಇವರಲ್ಲದೇ ಸುತ್ತ-ಮುತ್ತಲಿನ ರೈತಬಾಂಧವರು, ಶೇರು ಸದಸ್ಯರು, ಗಣ್ಯ ಮಹನೀಯರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿ ವರ್ಗ ವ ಸಿಬ್ಬಂದಿ-ಕಾರ್ಮಿಕರು ಪಾಲ್ಗೋಂಡಿದ್ದರು.