PU Collage: ಐದು ವರ್ಷಗಳ ಹೋರಾಟ- 2019ರಲ್ಲಿ ರಕ್ತದಲ್ಲಿ ಪತ್ರ ಬರೆದ ಯುವಕ- ಕೊನೆಗೂ ನಾಲತವಾಡಕ್ಕೆ ಪಿಯು ಕಾಲೇಜು ಮಂಜೂರು

ವಿಜಯಪುರ: ಈ ಯುವಕ 2017ರಲ್ಲಿ ಅಂದರೆ ಕಳೆದ ಐದು ವರ್ಷಗಳಿಂದ ತನ್ನೂರಿಗೆ ಪಿಯು ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದ.  ಶಿಕ್ಷಣ ಪ್ರೇಮಿಯಾಗಿರುವ ಯುವಕ ತನ್ನ ಊರಿನ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಬೇರೆ ಊರಿಗೆ ಅಲೆದಾಡುವುದನ್ನು ಕಂಡು ಏನಾದರೂ ಮಾಡಿ ಕಾಲೇಜು ಇಲ್ಲ ಎಂಬ ತಾಪತ್ರಯವನ್ನು ಬಗೆಹರಿಸಲು ಕಂಕಣಬದ್ಧವಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದ.  ಈಗ ಈ ಯುವಕನ ಹೋರಾಟಕ್ಕೆ ಫಲ ಸಿಕ್ಕಿದೆ.

ಈ ಯುವಕನ ಹೆಸರು ವಿಜಯರಂಜನ ಜೋಶಿ.  ಬಸವ ನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ನಿವಾಸಿ.  ತನ್ನ ಸ್ವಂತ ಊರಿನಲ್ಲಿ ಸರಕಾರಿ ಪಿಯು ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಅಂದಿನ ಸಿಎಂ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ 2019ರಲ್ಲಿ ತನ್ನ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ್ದ.  ಅಷ್ಟೇ ಅಲ್ಲ, ವಿಜಯಪುರ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದ.

ಯುವಕ ರಕ್ತದಲ್ಲಿ ಬರೆದಿರುವ ಪತ್ರ ಪ್ರತಿ

2017ರಲ್ಲಿ ಅಂದರೆ ಐದು ವರ್ಷಗಳ ಹಿಂದೆ ಅಂದಿನ ಮುದ್ದೇಬಿಹಾಳ ಕಾಂಗ್ರೆಸ್ ಶಾಸಕ ಸಿ. ಎಸ್. ನಾಡಗೌಡ, ಜಿಲ್ಲಾಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೂ ಪತ್ರ ಬರೆದಿದ್ದ ಹೈಸ್ಕೂಲ್, ಪಿಯು, ಡಿಗ್ರಿ ಕಾಲೇಜ್‌ಗಾಗಿ ಮನವಿ ಕೊಟ್ಟಿದ್ದ.  ಇದಾದ ಆರು ತಿಂಗಳ ನಂತರ ಮತ್ತೊಂದು ಸಲ ಎಲ್ಲರಿಗೂ ಮನವಿ ಮಾಡಿದ್ದ.  ಆದರೆ, ಅದರಿಂದ ಯಾವುದೇ ಪ್ರಯೋ ಜನವಾಗಲಿಲ್ಲ.  ಬಳಿಕ 2018ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಯುವಕ ವಿಜಯರಂಜನ ಜೋಶಿ, ತನ್ನ ರಕ್ತದಿಂದ ಪತ್ರ ಬರೆದು ವಿನಂತಿ ಮಾಡಿದ್ದ.  ಆರು ತಿಂಗಳ ನಂತರ ಪ್ರಧಾನಿ ಕಚೇರಿಯಿಂದ ಕಾಲೇಜು ಆರಂಭಿಸುವ ಭರವಸೆ ಪತ್ರ ಬಂತು.  ಸಿಎಂ ಕಚೇರಿಯಿಂದ ಪರಿಶೀಲಿಸಲಾಗುವುದು ಎಂದು ಉತ್ತರವೂ ಬಂದಿತ್ತು.

ಖಾಸಗಿ ಶಾಲೆಗಳ ಡೋನೆಷನ್ ಹಾವಳಿ ತಪ್ಪಿಸಲು ಹಾಗೂ ಬಡ ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ಏನಾದರೊಂದು ಮಾಡಬೇಕು ಎಂಬ ಸದುದ್ದೇಶದಿಂದ ಈ ಯುವಕ ಪತ್ರ ವ್ಯವಹಾರ ಶುರುಮಾಡಿದ. ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳದ ಹಿನ್ನೆಲೆಯಲ್ಲಿ ರಕ್ತದಲ್ಲಿ 10 ಪುಟಗಳ ಪತ್ರ ಬರೆದು ಮನವಿ ಮಾಡಿಕೊಂಡಿದ್ದ.  ಆದರೆ, ಮುಂದೆ ಕೂರೊನಾದಿಂದಾಗಿ ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಕಾಲೇಜು ಆರಂಭಕ್ಕೆ ಹಿನ್ನೆಡೆಯಾಗಿತ್ತು.

ರಕ್ತದಲ್ಲಿ ಪತ್ರ ಬರೆದ ಯುವಕ ವಿಜಯರಂಜನ ಜೋಶಿ

ಅಂದು ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಈತ ಬರೆದಿದ್ದ ರಕ್ತದ ಪತ್ರಕ್ಕೆ ಈಗ ಯಶಸ್ಸು ಸಿಕ್ಕಿದೆ.  ಈ ಯುವಕನ ಸತತ ಹೋರಾಟದ ಫಲವಾಗಿ ಈಗ ನಾಲತವಾಡ ಪಟ್ಟಣಕ್ಕೆ ಸರಕಾರಿ ಕಾಲೇಜು ಮಂಜೂರಾಗಿದೆ.

ನಾಲತವಾಡ ಪಟ್ಟಣದಲ್ಲಿ ಸರಕಾರಿ ಪಿಯು ಕಾಲೇಜು ಆರಂಭಕ್ಕೆ ರಾಜ್ಯ ಸರಕಾರ ಈಗ ಹಸಿರು ನಿಶಾನೆ ತೋರಿಸಿದೆ.  ಇದರ ಜತೆಗೆ ರಾಜ್ಯದಲ್ಲಿ ಒಟ್ಟು 46 ಪದವಿ ಪೂರ್ವ ಕಾಲೇಜ್ ಗಳ ಆರಂಭಕ್ಕೆ ಸರಕಾರ ಆದೇಶ ನೀಡಿದೆ.

ನಾಲತವಾಡ ಸೇರಿದಂತೆ ರಾಜ್ಯದ ನಾನಾ ಕಡೆ ಪಿಯು ಕಾಲೇಜು ಆರಂಭಕ್ಕೆ ಸರಕಾರ ಹೊರಡಿಸಿರುವ ಆದೇಶದ ಪ್ರತಿ

 

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯರಂಜನ ಜೋಶಿ ಸರಕಾರದ ನಿರ್ಧಾರದಿಂದ ತಮಗೆ ಸಂತಸವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ್ಲ್ಲದೇ, ಇವರ ಸ್ನೇಹಿತರು ಕೂಡ ಕಾಲೇಜು ಆರಂಭಕ್ಕೆ ಅನುಮತಿ ನೀಡಿರುವುದಕ್ಕೆ ಯುವಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಕ್ಕಳ ಕಾಲೇಜ್ ಶಿಕ್ಷಣಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಪಾಲಕರಲ್ಲಿ ಈಗ ಹರ್ಷವನ್ನುಂಟು ಮಾಡಿದೆ, ಕೊನೆಗೂ ಪಟ್ಟಣಕ್ಕೆ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ ಎನ್ನುವ ಸಂತಸದಲ್ಲಿ ನಾಲತವಾಡ ಪಟ್ಟಣದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರೈವೆಟ್ ಕಾಲೇಜುಗಳ ಡೋನೇಷನ್ ಹಾವಳಿ ತಪ್ಪಿಸುವಲ್ಲಿ ಈ ಕಾಲೇಜು ಮದ್ಯಮ ಮತ್ತು ಬಡ ವರ್ಗದ ಜನರಲ್ಲಿ ಸಂತಸ ಮೂಡಿಸಲು ಕಾರಣವಾಗುವ ವಿಶ್ವಾಸ ಇಲ್ಲಿನ ಜನರಲ್ಲಿದೆ.

Leave a Reply

ಹೊಸ ಪೋಸ್ಟ್‌