VDCC Bank 44th Branch: ರಾಜ್ಯದ ಪ್ರತಿಷ್ಠಿತ ಬ್ಯಾಂಕಿನ 44ನೇ ಶಾಖೆ ನಾಗಠಾಣದಲ್ಲಿ ಕಾರ್ಯಾರಂಭ
ವಿಜಯಪುರ: ರಾಜ್ಯದ ಪ್ರತಿಷ್ಠಿತ ವಿಜಯಪುರ ಡಿಸಿಸಿ ಬ್ಯಾಂಕಿನ 44 ನೇ ಶಾಖೆ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಕಾರ್ಯಾರಂಭ ಮಾಡಿದೆ. ನಾಗಠಾಣ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಬಿ. ಗುಡದಿನ್ನಿ ಉದ್ಘಾಟಿಸಿದರು ಠೇವಣಿದಾರರಿಗೆ ಠೇವಣಿ ಪತ್ರ ನೀಡುವುದರೊಂದಿಗೆ ಹೊಸ ಶಾಖೆಯ ವ್ಯವಹಾರಕ್ಕೆ ಚಾಲನೆ ನೀಡಿದ ಅವದು, ರೈತರು ಮತ್ತು ಗ್ರಾಮಸ್ಥರಿಗೆ ಬ್ಯಾಂಕಿಂಗ್ ಸೇವೆ ನೀಡುವುದರೊಂದಿಗೆ ಕೃಷಿ ಚಟುವಟಿಕೆಗಳಿಗೆ ಸ್ಥಳೀಯವಾಗಿ ಆರ್ಥಿಕ ನೆರವು ನೀಡುವಲ್ಲಿ ನಾಗಠಾಣ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಬಹುದಿನದ ಬೇಡಿಕೆಯನ್ನು ಬ್ಯಾಂಕಿನ ಅಧ್ಯಕ್ಷ […]
Private Oppose: ವಿಜಯಪುರದಿಂದ ಬೆಳಗಾವಿ, ಹುಬ್ಬಳ್ಳಿ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಸಾರಿಗೆ ಇಲಾಖೆ ನೌಕರರ ವಿರೋಧ
ವಿಜಯಪುರ: ಸರಕಾರ ವಿಜಯಪುರ- ಹುಬ್ಬಳ್ಳಿ ಮತ್ತು ವಿಜಯಪುರ- ಅಥಣಿ-ಬೆಳಗಾವಿ ಮತ್ತು ಹುಬ್ಬಳ್ಳಿ- ಗದಗ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ನೀಡಲು ನಿರ್ಧರಿಸಿರುವುದನ್ನು ಕೆ ಎಸ್ ಆರ್ ಟಿ ಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ತೀವ್ರ ವಿರೋಧಿ ವ್ಯಕ್ತಪಡಿಸಿದೆ. ಈ ಕುರಿತು ಜಂಟಿ ಮಾಧ್ಯಮ ಪ್ರಕಟಣೆ ನೀಡಿರುವ ಯೂನಿಯನ್ ವಿಜಯಪುರ ವಿಭಾಗದ ಮುಖಂಡರು, ವಿಜಯಪುರ- ಹುಬ್ಬಳ್ಳಿ ಮಾರ್ಗದಲ್ಲಿ 15, ವಿಜಯಪುರ- ಅಥಣಿ-ಬೆಳಗಾವಿ ಮಾರ್ಗದಲ್ಲಿ 15 ಮತ್ತು ಹುಬ್ಬಳ್ಳಿ- ಗದಗ ಮಾರ್ಗದಲ್ಲಿ 11 ಸೇರಿ ಒಟ್ಟು 41 […]
Hubballi President: ಹುಬ್ಬಳ್ಳಿ- ಧಾರವಾಡ ಪಾಲಿಕೆಯಿಂದ ರಾಷ್ಟ್ರಪತಿಗೆ ಪೌರ ಸನ್ಮಾನ- ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಹುಬ್ಬಳ್ಳಿ:i ಓಡಿಶಾದ ಸಾಮಾನ್ಯ ಕುಟುಂಬದ ಮಗಳನ್ನು ಸನ್ಮಾನಿಸಿ ತಾವು ಕೇವಲ ಭಾರತದ ರಾಷ್ಟ್ರಪತಿ ಮಾತ್ರವಲ್ಲ ಭಾರತದ ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಅಭಿನಂದಿಸಿದ್ದೀರಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಅವರು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಆಯೋಜಿಲಾಗಿದ್ದ ಪೌರ ಸನ್ನಾನ ಸ್ವೀಕರಿಸಿ ಮಾತನಾಡಿದರು. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಕುಟುಂಬ ಸಮೇತ ಆಗಮಿಸಿದ ರಾಷ್ಟ್ರಪತಿಗಳಿಗೆ ಹುಬ್ಬಳ್ಳಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ಹುಬ್ಬಳ್ಳಿಯ ಜಿಮಖಾನ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಹಾನಗರ […]
Dasara President: ನಾಡಹಬ್ಬ ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ- ಕನ್ನಡ ನಾಡನ್ನುಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠವಾಗಿರಬೇಕು ಎಂದ ಸಿಎಂ
ಮೈಸೂರು:: ನಾಡಹಬ್ಬ ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರು ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಚಾಲನೆ ನೀಡಿದರು. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ 2022ರ ದಸರಾ ಮಹೋತ್ಸವ ರಾಷ್ಟ್ರಪತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಎಸ್. ಟಿ. ಸೋಮಶೇಖರ್ ಹಾಗೂ ವಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು. ಕನ್ನಡ ನಾಡನ್ನು ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠವಾಗಿಸಬೇಕು ಎಂದ […]
Janapad Utsav: ಬಸವ ನಾಡಿನಲ್ಲಿ ಜನಪರ ಉತ್ಸವದಲ್ಲಿ ದೇಶಿಕಲೆಗಳ ಅನಾವರಣ
ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಜಯಪುರದಲ್ಲಿ ಆಯೋಜನೆ ಮಾಡಿದ್ದ ಜನಪರ ಉತ್ಸವವು ದೇಶಿ ಕಲೆಗಳನ್ನು ಅನಾವರಣಕ್ಕೆ ಮತ್ತೊಮ್ಮೆ ವೇದಿಕೆಯನ್ನು ಒದಗಿಸಿತು. ನಗರದ ಆನಂದ ಮಹಲ್‌ನ ಆವರಣದಲ್ಲಿ ಆಯೋಜನೆ ಮಾಡಿದ್ದ ಜನಪದ ಉತ್ಸವಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ದಂಪತಿ ಸಮೇತ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಇನ್ನೀತರ ಅಧಿಕಾರಿಗಳು, ಶ್ವೇತಾ ದಾನಮ್ಮನವರ ಹಾಗೂ ಇನ್ನೀತರರು ಜನಪರ […]