Private Oppose: ವಿಜಯಪುರದಿಂದ ಬೆಳಗಾವಿ, ಹುಬ್ಬಳ್ಳಿ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಸಾರಿಗೆ ಇಲಾಖೆ ನೌಕರರ ವಿರೋಧ

ವಿಜಯಪುರ: ಸರಕಾರ ವಿಜಯಪುರ- ಹುಬ್ಬಳ್ಳಿ ಮತ್ತು ವಿಜಯಪುರ- ಅಥಣಿ-ಬೆಳಗಾವಿ ಮತ್ತು ಹುಬ್ಬಳ್ಳಿ- ಗದಗ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ನೀಡಲು ನಿರ್ಧರಿಸಿರುವುದನ್ನು ಕೆ ಎಸ್ ಆರ್ ಟಿ ಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ತೀವ್ರ ವಿರೋಧಿ ವ್ಯಕ್ತಪಡಿಸಿದೆ.

ಈ ಕುರಿತು ಜಂಟಿ ಮಾಧ್ಯಮ ಪ್ರಕಟಣೆ ನೀಡಿರುವ ಯೂನಿಯನ್ ವಿಜಯಪುರ ವಿಭಾಗದ ಮುಖಂಡರು, ವಿಜಯಪುರ- ಹುಬ್ಬಳ್ಳಿ ಮಾರ್ಗದಲ್ಲಿ 15, ವಿಜಯಪುರ- ಅಥಣಿ-ಬೆಳಗಾವಿ ಮಾರ್ಗದಲ್ಲಿ 15 ಮತ್ತು ಹುಬ್ಬಳ್ಳಿ- ಗದಗ ಮಾರ್ಗದಲ್ಲಿ 11 ಸೇರಿ ಒಟ್ಟು 41 ಮಾರ್ಗಗಳಿಗೆ ಪರವಾನಿಗೆ ನೀಡಿದೆ. ಇದರಿಂದ ಪ್ರತಿನಿತ್ಯ ಸಾರಿಗೆ ಸಂಸ್ಥೆಗೆ ಆದಾಯ ನಷ್ಡವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
24.08.2022ರಂದು ಸರಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 20.07.2021ರಂದು ಹೊರಡಿಸಿದ ಅಧಿಸೂಚನೆಯನ್ನು ಪರಿಷ್ಕರಿಸಿ, ಬೆಳಗಾವಿ-
ಅಥಣಿ-ವಿಜಯಪುರ ಮಾರ್ಗದಲ್ಲಿ 41 ರಹದಾರಿಗಳನ್ನು ಬೇಂದ್ರೆ ಸಾರಿಗೆಯವರಿಗೆ ಕಾರ್ಯಾಚರಣೆ ಮಾಡಲು
ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಈ ಆದೇಶಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ಎಲ್ಲ ಕಾರ್ಮಿಕ ಸಂಘಟನೆಗಳ ಮುಖಂಡರು, ಸದಸ್ಯರು ಹಾಗೂ ಕಾರ್ಮಿಕರಿಂದ ವಿರೋಧ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ‌ ಸಂಘಟನೆ ಮುಖಂಡರು

 

ಕಾರ್ಯಾಚರಣೆಯಲ್ಲಿರುವ ವಿಜಯಪುರ-ಬೆಳಗಾವಿ ಮಾರ್ಗದ ಸಾರಿಗೆಗಳ ಆದಾಯಕ್ಕೆ ಕತ್ತರಿ ಬೀಳುತ್ತದೆ. ಈಗಾಗಲೇ
ಸಾರಿಗೆ ಸಂಸ್ಥೆಯು ಕೋವಿಡ್-19 ಸಂಕಷ್ಟದಿಂದಾಗಿ ಬಸ್ಸುಗಳ ಒಡಾಟವಿಲ್ಲದೇ ವಿನಾಶದ ಅಂಚಿನಲ್ಲಿದೆ. ಸಂಸ್ಥೆಯ
ಕಾರ್ಮಿಕರಿಗೆ ಸರಿಯಾಗಿ ವೇತನವೂ ಸಿಗುತ್ತಿಲ್ಲ. ಅಲ್ಲದೇ, ಇತ್ತೀಚಿಗೆ ಡಿಸೈಲ್ ಬೆಲೆ ಹೆಚ್ಚಳ ಮತ್ತು
ಬಿಡಿಭಾಗಗಳ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. 2020ರಲ್ಲಿ
ಆಗಬೇಕಾಗಿದ್ದು ಕಾರ್ಮಿಕರ ವೇತನ ಪರಿಷ್ಕರಣೆ ಮಾಡಲು ಸರಕಾರಕ್ಕೆ ಇದೂವರೆಗೂ ಸಾಧ್ಯವಾಗಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಂಸ್ಥೆಯನ್ನು ಉಳಿಸಬೇಕು, ಬೆಳೆಸಬೇಕು, ಸಾರ್ವಜನಿಕ ಪ್ರಯಾಣಿಕರಿಗೆ
ಉತ್ತಮವಾದ ಸಾರಿಗೆ ಸೇವೆಯನ್ನು ಒದಗಿಸಬೇಕು ಎಂಬ ಬಲವಾದ ದೈಯ್ಯದಿಂದ ನಿಗಮದ ಎಲ್ಲ ಕಾರ್ಮಿಕರು ಸೇರಿಕೊಂಡು ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇಂಥ ಸಂದರ್ಭದಲ್ಲಿ ಸರಕಾರ ಬೆಳಗಾವಿ-ಅಥಣಿ-
ಬೆಳಗಾವಿ ಮಾರ್ಗವನ್ನು ಖಾಸಗಿಯವರಿಗೆ ಮಾರಿಕೊಂಡಿದ್ದು, ಸಂಸ್ಥೆಗೆ ಹಾಗೂ ಸಂಸ್ಥೆಯ ಕಾರ್ಮಿಕರಿಗೆ
ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳಗಾವಿ-ಅಥಣಿ-ವಿಜಯಪುರ ಮಾರ್ಗವು ಸಂಸ್ಥೆಗೆ ಆದಾಯ ಬರುವ
ಮಾರ್ಗವಾಗಿದ್ದು, ಈ ಮಾರ್ಗಗಳಲ್ಲಿ 41 ರಹದಾರಿಗಳನ್ನು ಖಾಸಗೀಯವರಿಗೆ ಮಂಜೂರು ಮಾಡಿದರೆ
ಸಂಸ್ಥೆಗೆ ಪ್ರತಿದಿನ ಅಂದಾಜು ರೂ.10 ರಿಂದ ರೂ.12 ಲಕ್ಷ ಆರ್ಥಿಕ ನಷ್ಟ ಉಂಟಾಗಿ ಮತ್ತಷ್ಟು ಕಾರ್ಮಿಕರಿಗೆ
ವೇತನ ಪಡೆಯಲು ತೊಂದರೆ ಉಂಟಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸರಕಾರದ ನಡವಳಿ ಪ್ರತಿ

ವಿಜಯಪುರ ಜಿಲ್ಲೆಯು ಸಂಪೂರ್ಣ ರಾಷ್ಟ್ರೀಕೃತ ವಲಯವಾಗಿದ್ದು, ಈ ವಲಯದಲ್ಲಿ ಖಾಸಗಿ ಕಾರ್ಯಾಚರಣೆಗೆ
ಅವಕಾಶವಿರುವುದಿಲ್ಲ. ಆದರೂ 24.08.2022ರಂದು ನಡೆದ ಎಸ್. ಟಿ. ಎ ಸಭೆಯ ನಡಾವಳಿಯಲ್ಲಿ ಸರಕಾರ ಬೇಂದ್ರೆ ಸಾರಿಗೆ ಎಂಬ ಖಾಸಗಿ ಪ್ರವರ್ತಕರಿಗೆ ಬೆಳಗಾವಿ-ಅಥಣಿ-ವಿಜಯಪುರ ಮಾರ್ಗದಲ್ಲಿ
41 ರಹದಾರಿಗಳಿಗೆ ಒಪ್ಪಿಗೆ ಸೂಚಿಸಿ, ಆದೇಶ ಹೊರಡಿಸಿದೆ. ಈಗಾಗಲೇ ಸಂಸ್ಥೆಯು ಈ ಮಾರ್ಗದಲ್ಲಿ ಪ್ರತಿ
15 ನಿಮಿಷಕ್ಕೊಂದರಂತೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ವಿಷಯ ಸರಕಾರದ ಗಮನದಲ್ಲಿದ್ದರೂ ಖಾಸಗಿ ವಾಹನಗಳಿಗೆ ಪರವಾನಿಗೆ ನೀಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಈ ಸಂಸ್ಥೆಯಲ್ಲಿ
ಸುಮಾರು 1.35ಲಕ್ಷ ಕಾರ್ಮಿಕರು ಹಾಗೂ ಅವರ 10 ಲಕ್ಷ ಜನ ಕುಟುಂಬದ ಸದಸ್ಯರು ಸಂಸ್ಥೆಯನ್ನೇ
ಅವಲಂಬಿಸಿದ್ದಾರೆ. ಸರಕಾರದ ನಿರ್ಧಾರದಿಂದ ನಿಗಮದ ಎಲ್ಲ ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗ ಬೀದಿಗೆ ಬರುವ ಆತಂಕವಿದೆ. ಆದ್ದರಿಂದ ಈ ನಿರ್ಧಾರಕ್ಕೆ ಎಲ್ಲ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧವಿದೆ. ಈ ಹಿನ್ನೆಲೆಯಲ್ಲಿ ಸರಕಾರ ಈಗ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಸಂಸ್ಥೆಯ ಎಲ್ಲಾ
ಕಾರ್ಮಿಕ ಸಂಘಟನೆಯ ಮುಖಂಡರು, ಸದಸ್ಯರು ಹಾಗೂ ಕಾರ್ಮಿಕರು ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಯೂನಿಯನ್ ಪ್ರಧಾನ ಕಾರ್ಯದರ್ಶಿ
ಆಯ್. ಆಯ್. ಮುಶ್ರೀಫ, ಅಧ್ಯಕ್ಷ ಅರುಣಕುಮಾರ ಹಿರೇಮಠ, ರಾಜ್ಯ ಸಂಘಟನಾ ಕಾರ್ಯದರ್ಸಿ
ಆರ್‌. ಆರ್‌. ನದಾಫ, ಎಂ. ಎಸ್. ಹುಂಡೇಕಾರ, ಬಿ. ಎಂ. ತೇರದಾಳ, ಎಂ. ವಿ.‌ಬಿರಾದಾರ, ವಸೀಮ ಪಟೇಲ, ಮುನ್ನಾ ಬಿಜಾಪುರ, ನೂರ ಅಹ್ಮದ ಸೌದಾಗರ, ಇರ್ಷಾದ ಸಲಗರ, ಶ್ರೀಕಾಂತ ಕೊಪ್ಪಳ, ಮಲ್ಲು ಲಮಾಣಿ, ಎಸ್. ಬಿ. ಮೆಟಗಾರ, ಎಂ. ಎಲ್. ಚೌಧರಿ, ನಿಂಗಪ್ಪ ಕವಲಗಿ, ಎಸ್. ಡಿ. ಪಟ್ಟಣಶೆಟ್ಟಿ, ಭೀಮು ಗುಳೇದ, ಜಿ. ಜಿ. ಬಿರಾದಾರ, ಯಮನಪ್ಪ ಚಲವಾದಿ, ಮುಂತಾದವರು ಜಂಟಿ ಪ್ರಕಟಣೆಯಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌