ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಜಯಪುರದಲ್ಲಿ ಆಯೋಜನೆ ಮಾಡಿದ್ದ ಜನಪರ ಉತ್ಸವವು ದೇಶಿ ಕಲೆಗಳನ್ನು ಅನಾವರಣಕ್ಕೆ ಮತ್ತೊಮ್ಮೆ ವೇದಿಕೆಯನ್ನು ಒದಗಿಸಿತು.
ನಗರದ ಆನಂದ ಮಹಲ್‌ನ ಆವರಣದಲ್ಲಿ ಆಯೋಜನೆ ಮಾಡಿದ್ದ ಜನಪದ ಉತ್ಸವಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ದಂಪತಿ ಸಮೇತ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಇನ್ನೀತರ ಅಧಿಕಾರಿಗಳು, ಶ್ವೇತಾ ದಾನಮ್ಮನವರ ಹಾಗೂ ಇನ್ನೀತರರು ಜನಪರ ಉತ್ಸವದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ ಅವರು ಪ್ರಾಸ್ತಾವಿಕ ಮಾತನಾಡಿದರು.
ವಾದ್ಯ ಭಾರಿಸುವ ಮೂಲಕ ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಲೆ, ಸಂಸ್ಕೃತಿಯು ನಮ್ಮ ದೇಶದ ಆಸ್ತಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪರ ಉತ್ಸವದಂತಹ ನಾನಾ ಕಾರ್ಯಕ್ರಮಗಳನ್ನು ರೂಪಿಸುತ್ತ ನಮ್ಮ ದೇಶಿ ಕಲೆಗಳ ಸವಿಯನ್ನು ಆನಂದಿಸಲು ಅವಕಾಶ ಕಲ್ಪಿಸುತ್ತಿದೆ ಎಂದು ತಿಳಿಸಿದರು.
ಭಾರತ ದೇಶವು ಅನೇಕತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವಾಗಿದೆ. ನಮ್ಮ ಬದುಕಿನಲ್ಲಿ ಕಲೆ ಹಾಸು ಹೊಕ್ಕಾಗಿದೆ. ನಮ್ಮ ದೇಶದ ಜಾನಪದ ಕಲಾ ಪರಂಪರೆಯು ವಿಶಿಷ್ಟವಾಗಿದ್ದು ಈ ಕಲೆಯನ್ನು ಉಳಿಸಿ ಬೆಳೆಸವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ರಾಜ್ಯ ಲಲಿತಾ ಕಲಾ ಅಕಾಡೆಮಿಯ ಸದಸ್ಯ ರಮೇಶ ಚವ್ಹಾಣ ಅವರು ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಜನಪರ ಉತ್ಸವದಲ್ಲಿ ಗಿರಿಮಲ್ಲಮ್ಮ ಭಜಂತ್ರಿ ಅವರಿಂದ ಶಹನಾಯಿ ವಾದನ, ರಂಗನಾಥ ಬತ್ತಾಸಿ ಮತ್ತು ಸಂಗಡಿಗರಿAದ ಸಮೂಹ ನೃತ್ಯ, ಚಿಗುರು ಕಲಾ ತಂಡದಿAದ ಜಾನಪದ ಗೀತೆಗಳು, ಮಹಾದೇವಿ ವಾಲಿಕಾರ ಅವರಿಂದ ಚೌಡಕಿ ಪದಗಳು, ಶಂಕ್ರಪ್ಪ ಬಾದಿಗಿ ಅವರಿಂದ ಮೋಚಿಂಗ್ ವಾದನ, ಸುರೇಶ ಹಂಗರಗಿ ಅವರಿಂದ ಗೀಗಿ ಪದಗಳು, ಪವನಕುಮಾರ ಮತ್ತು ಸಂಗಡಿಗರಿಂದ ಜಾನಪದ ನೃತ್ಯ, ಅನುಸೂಯಾ ವಡ್ಡರ ಮತ್ತು ಸಂಗಡಿಗರಿದ ಕೃಷ್ಣಾ ರುಕ್ಮಿಣಿ ಶ್ರೀಕೃಷ್ಣ ಪಾರಿಜಾತ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಗಮನ ಸೆಳೆದ ಮೆರವಣಿಗೆ
ಜನಪರ ಉತ್ಸವದ ಮೆರವಣಿಗೆಯು ನಗರದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಿಂದ ಆರಂಭಗೊಂಡಿತು. ಧರ್ಮು ರಾಠೋಡ ಮತ್ತು ಸಂಗಡಿಗರ ಲಂಬಾನಿ ನೃತ್ಯ, ಮಲ್ಲಿಕಾಜುರ್ನ ಮತ್ತು ಸಂಗಡಿಗರ ತಾಷಾರಾಂ ಡೋಲ್, ಶಂಕ್ರಮ ಮತ್ತು ಸಂಗಡಿಗರಿಂದ ಜಗ್ಗಲಗಿ, ದುಂಡಪ್ಪ ಕಾಂಬಳೆ, ಲಕ್ಷ್ಮಣಸಿಂಗ್ ಗುನ್ನಾಪುರ, ಸದಾಶಿವ ಚಲವಾದಿ ಅವರಿಂದ ಕಹಳೆ ವಾದನ, ವಿ ಮಾರೇಶ ಮತ್ತು ಸಂಗಡಿಗರಿಂದ ಹಗಲುವೇಷ, ಏಸೋಪ್ ಮತ್ತು ಸಂಗಡಿಗರಿಂದ ಮರಗಾಲ ಕುಣಿತ, ಹನುಮಂತ ಭಜಂತ್ರಿ ಮತ್ತು ಸಂಗಡಿಗರಿಂದ ಹಲಗೆಮೇಳ, ಹುಚ್ಚಪ್ಪ ಮಾದರ ಮತ್ತು ಸಂಗಡಿಗರಿಂದ ಗೊಂಬೆ ಕುಣಿತ ಮತ್ತು ಆರ್ ಲಕ್ಷ್ಮಿ ಮತ್ತು ಸಂಗಡಿಗರಿಂದ ಮಹಿಳಾ ಉರುಮೆವಾದ್ಯ ನಾನಾ ವೈವಿದ್ಯಮ ಕಲಾ ಪ್ರದರ್ಶನಗಳು ಜನಮನ ಸೂರೆಗೊಂಡವು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.