ವಿಜಯಪುರ: ರಾಜ್ಯದ ಪ್ರತಿಷ್ಠಿತ ವಿಜಯಪುರ ಡಿಸಿಸಿ ಬ್ಯಾಂಕಿನ 44 ನೇ ಶಾಖೆ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಕಾರ್ಯಾರಂಭ ಮಾಡಿದೆ.
ನಾಗಠಾಣ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಬಿ. ಗುಡದಿನ್ನಿ ಉದ್ಘಾಟಿಸಿದರು
ಠೇವಣಿದಾರರಿಗೆ ಠೇವಣಿ ಪತ್ರ ನೀಡುವುದರೊಂದಿಗೆ ಹೊಸ ಶಾಖೆಯ ವ್ಯವಹಾರಕ್ಕೆ ಚಾಲನೆ ನೀಡಿದ ಅವದು, ರೈತರು ಮತ್ತು ಗ್ರಾಮಸ್ಥರಿಗೆ ಬ್ಯಾಂಕಿಂಗ್ ಸೇವೆ ನೀಡುವುದರೊಂದಿಗೆ ಕೃಷಿ ಚಟುವಟಿಕೆಗಳಿಗೆ ಸ್ಥಳೀಯವಾಗಿ ಆರ್ಥಿಕ ನೆರವು ನೀಡುವಲ್ಲಿ ನಾಗಠಾಣ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಬಹುದಿನದ ಬೇಡಿಕೆಯನ್ನು ಬ್ಯಾಂಕಿನ ಅಧ್ಯಕ್ಷ ಮತ್ತು ಶಾಸಕ ಶಿವಾನಂದ ಪಾಟೀಲ ಈಗ ಈಡೇರಿಸಿದ್ದಾರೆ ಎಂದು ತಿಳಿಸಿದರು.
ಬ್ಯಾಂಕಿನ ಸಿಇಓ ಎಸ್. ಡಿ. ಬಿರಾದಾರ ಮಾತನಾಡಿ, ಬ್ಯಾಂಕು ಕೃಷಿಗೆ ಮೊದಲು ಆದ್ಯತೆ ನೀಡಿ ಉಳಿದ ಗ್ರಾಹಕರಿಗೆ ನಾನಾ ಉದ್ದೇಶಗಳಿಗಾಗಿ ಸಾಲವನ್ನು ನೀಡುತ್ತಿದೆ. ಠೇವಣಿಗಳನ್ನು ಸಂಪೂರ್ಣ ಸುರಕ್ಷತೆ ಹಾಗೂ ಆಕರ್ಷಕ ಬಡ್ಡಿ ದರದಲ್ಲಿ ಸ್ವೀಕರಿಸಲಾಗುತ್ತಿದೆ. ಅಲ್ಲದೇ, ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬಸಕು ಎಂದು ಹೇಳಿದರು.
ಈ ಸಮಾರಂಭದಲ್ಲಿ ಜಿ. ಪಂ. ಮಾಜಿ ಸದಸ್ಯ ನವೀನ ಅರಕೇರಿ, ಗ್ರಾ. ಪಂ. ಅಧ್ಯಕ್ಷೆ ಅಶ್ವಿನಿ ಪರಶುರಾಮ ಹುಣಶ್ಯಾಳ, ನಾಗಠಾಣ ಪಿಕೆಪಿಎಸ್ ಅಧ್ಯಕ್ಷ ಬಸಣ್ಣ ಶಿರಶ್ಯಾಡ, ಗ್ರಾಮದ ಹಿರಿಯರಾದ ನಿಂಗಪ್ಪಣ್ಣ ಮಸಳಿ, ಬ್ಯಾಂಕಿನ ನಿರ್ದೇಶಕರಾದ ಗುರುಶಾಂತ ನಿಡೋಣಿ, ಕಲ್ಲನಗೌಡ ಬಿ. ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಸುರೇಶಗೌಡ ಬಿರಾದಾರ, ಸೋಮನಗೌಡ ಬಿರಾದಾರ, ಬ್ಯಾಂಕಿನ ಅಧಿಕಾರಿಗಳಾದ ಆರ್. ಎಂ. ಪಾಟೀಲ, ಸುರೇಶ ಪಾಟೀಲ, ಎಸ್. ಎನ್. ಪಾಟೀಲ, ಬ್ಯಾಂಕಿನ ನಾಗಠಾಣ ಶಾಖೆಯ ವ್ಯವಸ್ಥಾಪಕಿ ರೂಪಶ್ರೀ ವಾಲಿಕಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.