Siddhu Kateel: ಸಿದ್ಧರಾಮಯ್ಯ ನರಹಂತಕ ಸಿಎಂ- ಮುಂದಿನ ಚುನಾವಣೆಯಲ್ಲಿ ಸನ್ಯಾಸತ್ವ ತೆಗೆದುಕೊಳ್ಳುತ್ತಾರೆ- ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ

ವಿಜಯಪುರ: ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ನರಹಂತಕ ಸಿಎಂ ಆಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಆರೋಪಿಸಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ನಾಗಠಾಣ ಮತಕ್ಷೇತ್ರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೀವು ನರಹಂತಕ ಹುಲಿ ಕಥೆ ಕೇಳಿದ್ದೀರೆ.  ನರಹಂತಕ ಸಿಂಹದ ಕಥೆಯನ್ನೂ ಕೇಳಿದ್ದೀರಿ.  ನರಹಂತಕ ವೀರಪ್ಪನ ಕಥೆಯನ್ನೂ ಕೇಳಿದ್ದೀರೆ.  ಈ ರಾಜ್ಯದಲ್ಲಿ ನರಹಂತಕ ಸಿಎಂ ಇದ್ದರೆ ಅದು ಸಿದ್ಧರಾಮಯ್ಯ ಎಂದು ವಾಗ್ದಾಳಿ ನಡೆಸಿದರು. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ 3000 ರೈತರ ಆತ್ಮಹತ್ಯೆಯಾಯಿತು.  ಆಗ […]

Blood Camp: ರಕ್ತದಾನದಿಂದ ಶೇ. 88ರಷ್ಟು ಹೃದಯಾಘಾತದ ಸಾಧ್ಯತೆಯನ್ನು ತಡೆಯಬಹುದು- ಡಾ. ಎಚ್. ಶಿವಕುಮಾರ

ವಿಜಯಪುರ: ರಕ್ತದಾನ ಮಾಡುವ ಮೂಲಕ ಶೇ. 88 ರಷ್ಟು ಹೃದಯಾಘಾತ ಸಂಭವಿಸುವುದನ್ನು ತಡೆಯಬಹುದು ಎಂದು ಬಿ ಎಲ್ ಡಿ ಈ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಫ್ರಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಡಾ. ಎಚ್. ಶಿವಕುಮಾರ ಹೇಳಿದ್ದಾರೆ. ಇಂದು ಕಾಲೇಜಿನಲ್ಲಿ ನಡೆದ ಮಹಾರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತದಾನದಿಂದ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ರಕ್ತದಾನ ಮಹಾದಾನ. ಇದರಿಂದ ರಕ್ತದಾನಿಗಳಿಗೆ ಮತ್ತು ರಕ್ತದ ಅಗತ್ಯವಿರುವ ರೋಗಿಗಳಿಗೆ ಇಬ್ಬರಿಗೂ ಪ್ರಯೋಜನವಾಗುತ್ತದೆ ಎಂದು […]

Kateel Siddharamaiah: ಮೇಡಂ ಗೆ ಹಣ ನೀಡಿ ಸಿದ್ಧರಾಮಯ್ಯ ಸಿಎಂ ಆಗಿದ್ದಾರೆ- ಕೆ ಎಫ್ ಡಿ, ಎಸ್ ಡಿ ಪಿ ಐ, ಪಿ ಎಫ್ ಐ ವಿರುದ್ಧ ಕಠಿಣ ಕ್ರಮ- ನಳೀನ ಕುಮಾರ ಕಟೀಲ

ವಿಜಯಪುರ: ಸಿದ್ಧರಾಮಯ್ಯ ಹಣ ನೀಡಿ ಸಿಎಂ ಆಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪಿಸಿದ್ದಾರೆ. ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಜಯಪುರದಲ್ಲಿ ಮಾತನಾಡಿದರು. ಭ್ರಷ್ಟಾಚಾರದ ಆರೋಪದಡಿ ತಾವು ಜೈಲಿಗೆ ಹೋಗಬಾರದು ಎಂದು ಸಿದ್ಧರಾಮಯ್ಯ ಲೋಕಾಯುಕ್ತವನ್ನು ಮುಚ್ಚಿ ಹಾಕಿದ್ದರು.  ಈಗ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ.  ಲೋಕಾಯುಕ್ತ ಮತ್ತೆ ಬರುತ್ತೆ.  ಹಗರಣಗಳ ಬಗ್ಗೆ ಮತ್ತು ಪರ್ಸೆಂಟೇಜ್ ಬಗ್ಗೆ ಅವರು ಮಾತನಾಡುತ್ತಾರೆ.  ಅವರಿಗೆ ಆ ಬಗ್ಗೆ ಮಾತನಾಡಲು ನೈತಿಕಕತೆಯಿಲ್ಲ.  ಯೋಗ್ಯತೆಯಿಲ್ಲ […]

Tamba Dasara: ತಾಂಬಾದಲ್ಲಿ ಗಮನ ಸೆಳೆದ ದಸರಾ ಆಚರಣೆ ಇಲ್ಲಿಯ ವಿಶೇಷತೆ ಏನು ಗೊತ್ತಾ

ವಿಜಯಪುರ: ದಸರಾ ಎಂದಾಕ್ಷಣ ನಾಡಿನ ಬಹುತೇಕ ಜನರಿಗೆ ನೆನಪಿಗೆ ಬರುವುದು ವಿಶ್ವವಿಖ್ಯಾತ ಮೈಸೂರು ದಸರಾ ಮಾತ್ರ.  ಆದರೆ, ಮೈಸೂರಿನಲ್ಲಿ ನಡೆಯುವಷ್ಟು ಅದ್ಧೂರಿಯಲ್ಲದಿದ್ದರೂ ಅದರಂತೆಯೆ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಬಸವ ನಾಡಿನ ದಸರಾ ಗಮನ ಸೆಳೆಯುತ್ತಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಂಬಾದಲ್ಲಿ ದಸರಾ ಅಂಗವಾಗಿ ನಡೆಯುವ ತರಹೇವಾರಿ ಕಾರ್ಯಕ್ರಮಗಳು ಜನಮನ ಸೂರೆಗೊಳ್ಳುತ್ತಿವೆ.  ನಾಡಹಬ್ಬ ದಸರಾ ಅಂಗವಾಗಿ ತಾಂಬಾದಲ್ಲಿ ನಡೆಯುವ ಉತ್ಸವಕ್ಕೆ ಗ್ರಾಮೀಣ ದಸರಾ, ಜಾನಪದ ದಸರಾ, ಉತ್ತರ ಕರ್ನಾಟಕದ ದಸರಾ ಎಂದೇ ಹೆಸರಾಗಿರುವ ಈ ಕಾರ್ಯಕ್ರಮ ಅದ್ಧೂರಿಯಾಗಿ […]

Tourism Day: ಪ್ರವಾಸೋದ್ಯಮ ಇಲಾಖೆಯಿಂದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಸ್ವಚ್ಛತಾ ಸಪ್ತಾಹ ಆಚರಣೆ

ವಿಜಯಪುರ: ಪ್ರವಾಸೋದ್ಯಮ ಪುನರಾವಲೋಕನ ಸಂದೇಶದಡಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ- ಅಂಗವಾಗಿ ವಿಜಯಪುರ ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಸ್ವಚ್ಛತಾ ಸಪ್ತಾಹ ಆಚರಿಸಲಾಯಿತು.  ಜಿಲ್ಲಾಡಳಿತ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹೊಟೆಲ್ ಅಸೋಶಿಯೇಶನ್, ಆರ್‌ಕೆಎಂ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರವಾಸೋದ್ಯಮದ ಪಾತ್ರ ಅತ್ಯಂತ ಪ್ರಮುಖವಾದುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಐತಿಹಾಸಿಕ ತಾಣಗಳ ರಕ್ಷಣೆಯಾಗಬೇಕಿದೆ. ನಮ್ಮ ನೆಲದ […]