ವಿಜಯಪುರ: ರಕ್ತದಾನ ಮಾಡುವ ಮೂಲಕ ಶೇ. 88 ರಷ್ಟು ಹೃದಯಾಘಾತ ಸಂಭವಿಸುವುದನ್ನು ತಡೆಯಬಹುದು ಎಂದು ಬಿ ಎಲ್ ಡಿ ಈ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಫ್ರಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಡಾ. ಎಚ್. ಶಿವಕುಮಾರ ಹೇಳಿದ್ದಾರೆ.
ಇಂದು ಕಾಲೇಜಿನಲ್ಲಿ ನಡೆದ ಮಹಾರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತದಾನದಿಂದ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ರಕ್ತದಾನ ಮಹಾದಾನ. ಇದರಿಂದ ರಕ್ತದಾನಿಗಳಿಗೆ ಮತ್ತು ರಕ್ತದ ಅಗತ್ಯವಿರುವ ರೋಗಿಗಳಿಗೆ ಇಬ್ಬರಿಗೂ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ಬಿ. ಎಲ್. ಡಿ. ಈ. ಆಸ್ಪತ್ರೆಯ ರಕ್ತ ಕೇಂದ್ರ ಮತ್ತು ವಿಜಯಪುರ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಡೆದ ಈ ಮಹಾರಕ್ತದಾನ ಶಿಬಿರವನ್ನು ಕಾಲೇಜಿನ ಪ್ರಾಚಾರ್ಯ ಡಾ. ಆರ್. ಬಿ. ಕೊಟ್ನಾಳ ಉದ್ಘಾಟಿಸಿದರು.
ಈ ಶಿಬಿರದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 90ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಬಿ. ಎಲ್. ಡಿ. ಈ. ರಕ್ತ ಕೇಂದ್ರದ ಡಾ. ಪ್ರಕಾಶ ಎಂ. ಪಾಟೀಲ ಮತ್ತು ಸಿಬ್ಬಂದಿ, ಲಯನ್ಸ್ ಕ್ಲಬ್ ನ ಸಂತೋಷ್ ಸೋರಗಾವಿ ಮತ್ತು ಸಿಬ್ಬಂದಿ, ಕಾರ್ಯಕ್ರಮದ ಸಂಯೋಜಕ ಡಾ. ಸೋಮಶೇಖರ ಎಂ. ಮೇತ್ರಿ, ಎನ್. ಎಸ್. ಎಸ್ ಘಟಕದ ಮುಖ್ಯಸ್ಥ ಪ್ರಶಾಂತ ಎನ್. ಜೋರಾಪುರ, ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.