Siddhu Kateel: ಸಿದ್ಧರಾಮಯ್ಯ ನರಹಂತಕ ಸಿಎಂ- ಮುಂದಿನ ಚುನಾವಣೆಯಲ್ಲಿ ಸನ್ಯಾಸತ್ವ ತೆಗೆದುಕೊಳ್ಳುತ್ತಾರೆ- ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ

ವಿಜಯಪುರ: ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ನರಹಂತಕ ಸಿಎಂ ಆಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಆರೋಪಿಸಿದ್ದಾರೆ.

ವಿಜಯಪುರ ನಗರದಲ್ಲಿ ನಡೆದ ನಾಗಠಾಣ ಮತಕ್ಷೇತ್ರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೀವು ನರಹಂತಕ ಹುಲಿ ಕಥೆ ಕೇಳಿದ್ದೀರೆ.  ನರಹಂತಕ ಸಿಂಹದ ಕಥೆಯನ್ನೂ ಕೇಳಿದ್ದೀರಿ.  ನರಹಂತಕ ವೀರಪ್ಪನ ಕಥೆಯನ್ನೂ ಕೇಳಿದ್ದೀರೆ.  ಈ ರಾಜ್ಯದಲ್ಲಿ ನರಹಂತಕ ಸಿಎಂ ಇದ್ದರೆ ಅದು ಸಿದ್ಧರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ನಾಗಠಾಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ನಳೀನಕುಮಾರ ಕಟೀಲ ಪಾಲ್ಗೋಂಡರು

ಸಿದ್ಧರಾಮಯ್ಯ ಸಿಎಂ ಆಗಿದ್ದಾಗ 3000 ರೈತರ ಆತ್ಮಹತ್ಯೆಯಾಯಿತು.  ಆಗ ಸಿದ್ಧರಾಮಯ್ಯ ಅವರಿಗೆ ಕಣ್ಣೀರು ಬಂದಿಲ್ಲ.  ಬೆಳಗಾವಿ ಅಧಿವೇಶನ ನಡೆಯುತ್ತಿದ್ದಾಗ ವಿಠ್ಠಲ ಅರಭಾವಿ ಎಂಬ ರೈತ ವಿಧಾನ ಸೌಧದ ಎದುರು ಆತ್ಮಹತ್ಯೆ ಮಾಡಿಕೊಂಡಿದ್ದರು.  ಆ ರೈತನ ಮನೆಗೆ ಹೋಗಿ ಪರಿಹಾರವನ್ನೂ ಕೊಡಲಿಲ್ಲ.  24 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು.  ಒಬ್ಬರೆ ಒಬ್ಬರ ಮನೆಗೆ ಹೋಗಿ ಕಣ್ಮೀರು ಒರೆಸಲಿಲ್ಲ ಎೞದು ಅವರು ಆರೋಪಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಗೋಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಿದ್ದರು.  ಆದರೆ, ಸಿದ್ಧರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆ ಕಾಯಿದೆಯನ್ನು ಹಿಂದಕ್ಕೆ ಪಡೆದು ಗೋ ಹಂತಕರಿಗೆ ಪರವಾಗಿ ನಿಂತರು.  ಈ ಹಿನ್ನೆಲೆಯಲ್ಲಿಯೇ ಈಗ ಎಸ್ ಡಿ ಪಿ ಐ ಪಿ ಎಫ್ ಐ ಚಟುವಟಿಕೆಗಳು ಪ್ರಾರಂಭವಾಗಿವೆ.  ಹತ್ಯೆಗಳನ್ನು ಮಾಡುವ ಕೆಲಸಗಳು ಆರಂಭವಾಗಿವೆ ಎಂದು ನಳೀನಕುಮಾರ ಕಟೀಲ ಆರೋಪಿಸಿದರು.

ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಜೈಲಿನಲ್ಲಿದ್ದ 2000 ಜನ ಎಸ್ ಡಿ ಪಿ ಐ ಮತ್ತು ಕೆ ಎಫ್ ಡಿ ಕಾರ್ಯಕರ್ತರನ್ನು ಬಿ ರಿಪೋರ್ಟ್ ಹಾಕಿ ಹೊರಗೆ ಬಿಡುಗಡೆ ಮಾಡಿದರು.  ಕೇವಲ ಮತದ ಆಸೆಗಾಗಿ ಅವರ ರಕ್ಷಣೆಗೆ ನಿಂತರು.  ಇವರದೇ ಓರ್ವ ಶಾಸಕನಿಗೆ ಮೈಸೂರಿನಲ್ಲಿ ಚೂರಿ ಹಾಕಿದಾಗ ಆರೋಪಿಗಳ:್ನು ಬಂಧಿಸಲಿಲ್ಲ.  ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.  ಏಕೆಂದರೆ ಅವರು ಎನ್ ಐ ಎ ಮೂಲಕ ಎಸ್ ಡಿ ಪಿ ಐ ಮತ್ತು ಕೆ ಎಫ್ ಡಿ ಯನ್ನು ಬಂದ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.  ಭಯೋತ್ಪಾದಕರಿಗೆ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ.  ಇವರಿಗೆ ಬೊಮ್ಮಾಯಿ ಸರಕಾರ ಬೆಂಗಾವಲಾಗಿ ನಿಂತಿದೆಯ.  ಯಾರಾರು ರಾಷ್ಟ್ರವಿರೋಧಿ ಕೃತ್ಯ ಮಾಡುತ್ತಾರೆ ಅವರನ್ನು ಜೈಲಿಗಟ್ಟುವ ಸಂಕಲ್ಪವನ್ನು ಬಿಜೆಪಿ ಮಾಡಲಿದೆ ಎಂದು ನಳೀನಕುಮಾರ ಕೀಲ ಹೇಳಿದರು.

 

ಸಿದ್ಧರಾಮಯ್ಯ ಸನ್ಯಾಸತ್ವ ತೆಗೆದುಕೊಳ್ಳಲಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ದೇಶ ಮತ್ತು ರಾಜ್ಯ ಕಾಂಗ್ರೆಸ್ ಮುಕ್ತವಾಗಲಿವೆ.  ಸಿದ್ಧರಾಮಯ್ಯ ರಾಜಕೀಯ ಸನ್ಯಾಸತ್ವ ಸೇರಲಿದ್ದಾರೆ.  ಬಿಜೆಪಿ 150 ಸ್ಥಾನ ಪಡೆದು ಮತ್ತೋಮ್ಮೆ ಅಧಿಕಾರಕ್ಕೆ ಬರಲಿದೆ.  ವಿಜಯಪುರ ಜಿಲ್ಲೆಯಲ್ಲಿಯೂ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಅರಳಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಿಂದ ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಸೃಷ್ಠಿ

75 ವರ್ಷಗಳಲ್ಲಿ ಕಾಂಗ್ರೆಸ್ 60 ವರ್ಷ ಅಧಿಕಾರ ಮಾಡಿದೆ.  ಕಾಂಗ್ರೆಸ್ ದೇಶದಲ್ಲಿ ಭ್ರಷ್ಟಾಚಾರ ಭಯೋತ್ಪಾದನೆಯನ್ನು ಸ್ಥಾಪನೆ ಮಾಡಿದೆ.  ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ.  ಕಾಂಗ್ರೆಸ್ ಸ್ವಾತಂತ್ರ್ಯ ನಂತರವೂ ಸ್ವಾರ್ತಪೂರಕವಾದ ಮತದಾನದ ರಾಜಕಾರಣಕ್ಕಾಗಿ ಅಧಿಕಾರದ ಲಾಲಸೆಯಿಂದ ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಸೃಷ್ಠಿಯಾಗಿದೆ ಎಂದು ಆರೋಪಿಸಿದ ಅವರು, ಈ ಹಿನ್ನೆಲೆಯಲ್ಲಿಯೇ ಜನ ಕಾಂಗ್ರೆಸ್ಸನ್ನು ತಿರಸ್ಕಾರ ಮಾಡಿದ್ದಾರೆ.  ಲೋಕಸಭೆಯಲ್ಲಿ ಪ್ರತಿಪಕ್ಷವಾಗಲೂ ಕಾಂಗ್ರೆಸ್ ನಾಲಾಯಕ್ ಅಗಿದೆ.  ಈಗ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ ನಳೀನಕುಮಾರ ಕಟೀಲ ಆರೋಪಿಸಿದರು.

ಬಡವರ ಉದ್ಧಾರ ಎಂದು ಗಾಂಧಿ ಕುಟುಂಬ ಬದುಕಿದೆ.  ಬಡವರ ಉದ್ಧಾರದ ಹೆಸರಿನಲ್ಲಿ ಸಿದ್ದರಾಮಯ್ಯ ಕುಟುಂಬ ಬದುಕಿದೆ.  ಬಡವರ ಕಲ್ಯಾಣ ಹೆಸ್ರಲ್ಲಿ ಖರ್ಗೆ ಕುಟುಂಬ ಬದುಕಿದೆ.  ಬಡವರ ಕಲ್ಯಾಣದ ಹೇಸರಿನಲ್ಲಿ ಎಂ. ಬಿ. ಪಾಟೀಲ ಕುಟುಂಬ ಬದುಕಿದೆ.  ಬಡವರ ಅಕೌಂಟ್ ಗೆ ಹಣ ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ.  ಜನಧನ್ ಅಕೌಂಟ್ ಮೂಲಕ ಮೋದಿ ಸರಕಾರ ಬಡವರಿಗೆ ಹಣ ಹಾಕಿದೆ.  ಆಯುಷ್ಮಾನ್ ಭಾರತ ಮೂಲಕ ಆರೋಗ್ಯ ವಿಮೆ, ರೈತರ ಅಕೌಂಟ್ ಗೆ ಹಣ ನೀಡಿದೆ.  ವಿಜಯಪುರ ಜಿಲ್ಲೆಗೆ ರೂ. 127 ಕೋ. ರೈತರ ಅಕೌಂಟ್ ಗೆ ನೀಡಿದೆ.  ನೀವು ಯಾರ ಅಕೌಂಟ್‌ಗೆ ಹಣ ಹಾಕಿದ್ದೀರಿ ಎಂದು ಕಾಂಗ್ರೆಸ್ಸನ್ನು ಬಿಜೆಪಿ ರಾಜ್ಯಾಧ್ಯಕ್ಷ ಪ್ರಶ್ನಿಸಿದರು.

ಕಾಂಗ್ರೆಸ್ ಕಳ್ಳರ ಪಾರ್ಟಿ, ಕಾಂಗ್ರೆಸ್ ಭ್ರಷ್ಟರ ಪಾರ್ಟಿ.  ಭ್ರಷ್ಟಾಚಾರದ ಬಗ್ಗೆ ಉಲ್ಲೇಖ ಮಾಡುವ ಕಾಂಗ್ರೆಸ್, ಪೆಮೆಂಟ್ ಮಾಡಿ ಸಿಎಂ ಆದವರು ಸಿದ್ಧರಾಮಯ್ಯ.  ಅವರದು ಲೂಟಿ ಸರಕಾರವಾಗಿತ್ತು.  ಐದು ವರ್ಷ ಮೇಡಂ ಗೆ ಹಣ ನೀಡಿ ಸಿಎಂ ಕುರ್ಚಿ ಉಳಿಸಿಕೊಂಡರು.  ಅವರ ಕಾಲಘಟ್ಟದಲ್ಲಿ ಡ್ರಗ್ ಮಾಫಿಯಾ ಮತ್ತು ಸ್ಯಾಂಡ್ ಮಾಫಿಯಾ ಹಣದಲ್ಲಿ ಆ ಸರಕಾರ ಬದುಕಿತ್ತು.  ಆದರೆ, ನಂತರ ಸಿಎಂ ಆದ ಬಿ. ಎಸ್. ಯಡಿಯೂರಪ್ಪ ಯಾರನ್ನೂ ಬಿಡದೆ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡರು ಎಂದು ನಳೀನಕುಮಾರಕಟೀಲ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ವಿಜಯಪುರ ಬಿಜೆಪಿ ಸಂಸದ ರಮೇಶಕುಮಾರ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಬಿಜೆಪಿ ಮುಖಂಡರಾದ ಶಿವರುದ್ರ ಬಾಗಲಕೋಟ, ಚಂದ್ರಶೇಕರ ಕವಟಗಿ, ಮಹೇಶ ಟೆಂಗಿನಕಾಯಿ ಉಮೇಶ ಕಾರಜೋಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌