ವಿಜಯಪುರ: ಪ್ರವಾಸೋದ್ಯಮ ಪುನರಾವಲೋಕನ ಸಂದೇಶದಡಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ- ಅಂಗವಾಗಿ ವಿಜಯಪುರ ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಸ್ವಚ್ಛತಾ ಸಪ್ತಾಹ ಆಚರಿಸಲಾಯಿತು.
ಜಿಲ್ಲಾಡಳಿತ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹೊಟೆಲ್ ಅಸೋಶಿಯೇಶನ್, ಆರ್‌ಕೆಎಂ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರವಾಸೋದ್ಯಮದ ಪಾತ್ರ ಅತ್ಯಂತ ಪ್ರಮುಖವಾದುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಐತಿಹಾಸಿಕ ತಾಣಗಳ ರಕ್ಷಣೆಯಾಗಬೇಕಿದೆ. ನಮ್ಮ ನೆಲದ ಭವ್ಯ ಇತಿಹಾಸದ ಕಥೆಗಳನ್ನು ಹೇಳುವ ನಾಡಿನ ಅನೇಕ ಕೋಟೆ ಕೊತ್ತಲುಮ ಬೆಟ್ಟ-ಗುಡ್ಡ ಕೆರೆ-ನದಿ ಮತ್ತು ಇನ್ನೀತರ ಪ್ರವಾಸಿ ಹಿನ್ನೆಲೆಯ ಸಂಪತ್ತಿನ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯ ನಾನಾ ಯೋಜನೆಗಳನ್ನು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಐತಿಹಾಸಿಕ ನಗರಿ ವಿಜಯಪುರದಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಗ್ನೋ ಸೆಂಟರನ ಪ್ರಾದೇಶಿಕ ನಿರ್ದೇಶಕ ಡಾ. ಎ. ವರದರಾಜನ್, ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ರಾಕೇಶ, ಆರ್ ಕೆ ಎಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಹಿರೇಮಠ, ಹೊಟೆಲ್ ಅಸೋಶಿಯೇಶನ್ ಪ್ರಾಂಶುಪಾಲ ಎನ್. ಆರ್. ರುದ್ರಗೌಡರ, ಹೇರಿಟೇಜ್ ಸಿಟಿಯ ಪೀಟರ್ ಅಕೆಕ್ಸಾಂಡರ್, ಮಹಾನಗರ ಪಾಲಿಕೆಯ ಅಮಿನ್ ಹುಲ್ಲೂರ, ಹೊಟೆಲ್ ಮಯೂರ ಆದಿಲ್‌ಶಾಹಿಯ ವ್ಯವಸ್ಥಾಪಕ ಸುನೀಲಕುಮಾರ, ಪ್ರವಾಸಿ ಅಧಿಕಾರಿ ಅಂಬಾದಾಸ ಜೋಶಿ, ತುಕಾರಾಮ ಪವಾರ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಅನಿಲಕುಮಾರ ಬಣಜಿಗೇರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.