Nadadevi Procession: ಬಸವ ನಾಡಿನಲ್ಲಿ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ವತಿಯಿಂದ ನಾಡದೇವಿ ಬೆಳ್ಳಿ ಮೂರ್ತಿ ಮೆರವಣಿಗೆ

ವಿಜಯಪುರ: ಬಸವ ನಾಡು ವಿಜಯಪುರ ನಗರದಲ್ಲಿ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ವತಿಯಿಂದ 101 ಕೆಜಿ ಬೆಳ್ಳಿ ನಾಡದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. 

ಶ್ರೀ ಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ವತಿಯಿಂದ ನಾಡದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು

ನಾಗಠಾಣದ ಶ್ರೀ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಡದೇವಿ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದರು.  ನಗರದ ರಾಮಮಂದಿ ರಸ್ತೆಯಲ್ಲಿರುವ ನಾಡದೇವಿ ಮೂರ್ತಿ ಪ್ರತಿಷ್ಠಾಪನೆ ಸ್ಥಳದಿಂದ ಆರಂಭವಾದ ಈ ಮೆರವಣಿಗೆಯ ನೇತೃತ್ವವನ್ನು ಮಂಡಳಿಯ ಅಧ್ಯಕ್ಷ ಗುರು ಗಚ್ಚಿನಮಠ ವರಿಸಿದ್ದರು.

ನಾನಾ ವಾದ್ಯಮೇಳದೊಂದಿಗೆ ಆರಂಭವಾದ ಮೆರವಣಿಗೆ ಶ್ರೀ ಸಿದ್ಧೇಶ್ವರ ಗುಡಿ, ಗಣಪತಿ ಚೌಕ, ಶಾಸ್ತ್ರಿ ಮಾರ್ಕೆಟ್, ಗಾಂಧಿ ಚೌಕ, ಸರಾಫ ಬಜಾರ್,ಮೂಲಕ ಸಂಚರಿಸಿ ಶ್ರೀ ರಾಮಂದಿರ ಹತ್ತಿರ ನಿರ್ಮಿಸಿರುವ ಭವ್ಯ ಮಂಟಪಕ್ಕೆ ಆಗಮಿಸಿತು.

ಈ ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಸೋಲಾಪುರ ಲೆಜಿಂ, ಕರಾಡ ಡೋಲ್, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನಾನಾ ವಾದ್ಯಗಳು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬ್ಯಾಂಡ್, ಒಂಟೆಗಳು, ಸಿಡಿಮದ್ದುಗಳ ಪ್ರದರ್ಶನ ಗಮನ ಸೆಳೆದವು.  ವಿಜಯಪುರ ನಗರದ ಗಣ್ಯ ವ್ಯಾಪಾರಸ್ಥರು, ಸಾಹಿತಿಗಳು, ನಾನಾ ಸಂಘ, ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌