BLDE Award: ಬಿ ಎಲ್ ಡಿ ಇ ಡೀಮ್ಡ್ ವಿವಿ ಅಂತಾರಾಷ್ಟ್ರೀಯ ಹಸಿರು ವಿವಿ-2022 ಪ್ರಶಸ್ತಿ ಆಯ್ಕೆ- ಡಾ. ಆರ್. ಎಸ್. ಮುಧೋಳ

ವಿಜಯಪುರ: ದೇಶದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಅಂತಾರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ-2022 ಪ್ರಶಸ್ತಿ ಲಭಿಸಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅಮೇರಿಕದ ನ್ಯೂಯಾರ್ಕಿನ ಸನಿ ಮಾರ್ಟಿಟೈಮ್ ಕಾಲೇಜು ಸೆ. 24 ಶನಿವಾರ ನಡೆದ ಹಸಿರು ಕ್ಯಾಂಪಸ್ ಕಾನ್ಫರೆನ್ಸ್-2022 ಕಾರ್ಯಕ್ರಮದಲ್ಲಿ ಈ ಆಯ್ಕೆ ನಡೆದಿದೆ.  ಬಸವ ನಾಡಿನ ಬಿ ಎಲ್ ಡಿ ಇ ಡೀಮ್ಡ್ ವಿವಿಗೆ ಹಸಿರು ಕ್ಯಾಂಪಸ್‍ನಲ್ಲಿ ನಾನಾ ಜಾತಿಯ ನೆರಳು ನೀಡುವ 2800 ದೊಡ್ಡ ಮರಗಳು ಮತ್ತು ವರ್ಷಕ್ಕೊಮ್ಮೆ ಹೂ ಬಿಡುವ ಒಂದು ಸಾವಿರ ಗಿಡಗಳು ಸೇರಿದಂತೆ ಒಟ್ಟು ನಾಲ್ಕು ಸಾವಿರ ಗಿಡಗಳಿವೆ.  ಈ ಗಿಡಗಳು ಸಂಸ್ಥೆಯ ಬಂಗಾರಮ್ಮ ಸಜ್ಜನ ಆವರಣದ 56 ಎಕರೆ ವಿಶಾಲವಾದ ಪ್ರದೇಶದಲ್ಲಿ ಹಸಿರು ವಾತಾವರಣ ಸೃಷ್ಠಿಸಿವೆ.  ಈ ಅಂಶವನ್ನು ಪರಿಗಣಿಸಿ ಬಿ ಎಲ್ ಡಿ ಇ ಡೀಮ್ಡ್ ವಿವಿಗೆ ಹಸಿರು ಕ್ಯಾಂಪಸ್ ಪ್ರಶಸ್ತಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿ ಎಲ್ ಡಿ ಇ ಡೀಮ್ಡ್ ವಿವಿ ಉದ್ಯಾನ ಮೇಲ್ವಿಚಾರಕರು, ಉದ್ಯಾನ ಪಾಲಕರನ್ನು ಸನ್ಮಾನಿಸಲಾಯಿತು

ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಹೆಚ್ಚೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.  ಇದಕ್ಕೆ ಕಾರಣರಾದ ಉದ್ಯಾನ ಮೇಲ್ವಿಚಾರಕ ಎಂ. ಆರ್. ರಂಗರಾಜು, ಉದ್ಯಾನಪಾಲಕ ಮಲ್ಲಯ್ಯ ತಳಸದಾರ, ಸುಭಾಸ ಬೆಂಕಿ, ಶಾಸಪ್ಪ ಆಹೇರಿ ಮತ್ತು ಅಮ್ಮಣ್ಣ ಲೆಂಕಪ್ಪಗೋಳ ಅವರನ್ನು ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ರಿಜಿಸ್ಟಾರ್ ಡಾ. ಆರ್. ವಿ. ಕುಲಕರ್ಣಿ,  ಡಾ. ಆನಂದ ಪಾಟೀಲ ಅವರು ವಿವಿಯಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಪ್ರಚಾರಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಹರ್ಷವರ್ಧನ ಇಂಚಲ್ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌