ವಿಜಯಪುರ: ಜೆಡಿಎಸ್ ಹಿರಿಯ ಮುಖಂಡ ಮತ್ತು ವಿಜಯಪುರ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರಿಗೆ ಪಕ್ಷದ ವರಿಷ್ಠರು ಎರಡು ಹೊಸ ಜವಾಬ್ದಾರಿ ನೀಡಿದ್ದಾರೆ.
ಕಳೆದ ಜನವರಿಯಲ್ಲಷ್ಟೇ ವಿಜಯಪುರ ಜಿಲ್ಲಾಧ್ಯಕ್ಷ ಸ್ಥಾನದಿಂದ ಮಲ್ಲಿಕಾರ್ಜುನ ಯಂಡಿಗೇರಿ ಅವರನ್ನು ಬದಲಾಯಿಸಿ ಮಾಡಗಿ ಅವರಿಗೆ ನೂತನ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆ ಬಳಿಕ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿದ್ದರೂ ಮಲ್ಲಿಕಾರ್ಜುಮ ಯಂಡಿಗೇರಿ ಅವರು ಸಕ್ರೀಯರಾಗಿರಲಿಲ್ಲ.
ಹೊಸ ಜವಾಬ್ದಾರಿ ನೀಡಿದ ವರಿಷ್ಠರು
ಈ ಮಧ್ಯೆ, ಸಿ. ಎಂ. ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಬಳಿಕ ಹಳೆಯ ಕಾರ್ಯಕರ್ತರಿಗೆ ಮತ್ತೆ ಸಕ್ರೀಯಗೊಳಿಸಲು ಮುಂದಾದರು. ಅಷ್ಟೇ ಅಲ್ಲ, ಮಾಜಿ ಪ್ರಧಾನಿ ಎಚ್. ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಮುತುವರ್ಜಿ ವಹಿಸಿ ಈಗ ಹೊಸ ಜವಾಬ್ದಾರಿ ನೀಡಿದ್ದಾರೆ. ಸಿ. ಎಂ. ಇಬ್ರಾಹಿಂ 1995ರಲ್ಲಿ ಜನತಾ ದಳ ರಾಜ್ಯಾಧ್ಯಕ್ಷರಾಗಿದ್ದಾಗ ಇದೇ ಮಲ್ಲಿಕಾರ್ಜುನ ಯಂಡಿಗೇರಿ ಅವರು ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿದ್ದರು. ಆ ಸಂಬಂಧವೂ ಈಗ ಕೆಲಸ ಮಾಡಿದೆ.
ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಯಂಡಿಗೇರಿ ಅವರಿಗೆ ಈಗ ಒಟ್ಡಿಗೆ ಎರಡು ಜವಾಬ್ದಾರಿ ನೀಡಲಾಗಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಜೆಡಿಎಸ್ ರಾಜ್ಯ ವಕ್ತಾರ ಎರಡೂ ಹುದ್ದೆಗಳನ್ನು ಅವರಿಗೆ ವಹಿಸಲಾಗಿದೆ. ಇದರಿಂದಾಗ ವಿಜಯಪುರ ಜಿಲ್ಲೆ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರಭಾವ ಕಡಿಮೆಯಾಗಿರುವ ಜೆಡಿಎಸ್ ಬಲ ನೀಡಲು ಲಿಂಗಾಯಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ಜೆಡಿಎಸ್ ಪಕ್ಷದಲ್ಲಿ ಪ್ರಮುಖ ಹುದ್ಷೆ ನೀಡಿದಂತಾಗಿದೆ.