Khadi Utsav: ಖಾದಿಯು ಭಾರತದ ಸಂಸ್ಕೃತಿಯ ಅಸ್ಮಿತೆಯ ಸಂಕೇತ- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಪ್ರತಿಯೊಬ್ಬರ ಅಚ್ಚುಮೆಚ್ಚಿನ ಬಟ್ಟೆಯಾದ ಖಾದಿಯು ನಮ್ಮ ಭಾರತದ ಸಂಸ್ಕೃತಿಯ ಅಸ್ಮಿತೆಯ ಸಂಕೇತವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ನಡೆದ ಖಾದಿ ಉತ್ಸವ-2022 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸಿನ ಹಿಂದೆ ಖಾದಿ ಅಸ್ತಿತ್ವದ ಆಸೆಯು ಅಡಗಿದೆ. 1905ರಲ್ಲಿ ಬೆಂಗಾಲ ವಿಭಜನೆ ಸಂದರ್ಭದಲ್ಲಿ ಆರಂಭಗೊಂಡ ಸ್ವದೇಶಿ ಚಳುವಳಿ ವೇಳೆಯಲ್ಲಿ ಸ್ವದೇಶಿ ವಸ್ತು ಬಳಕೆಯ ಸಂದೇಶ ಮುನ್ನೆಲೆಗೆ ಬಂದಿತು. ಪ್ರತಿಯೊಬ್ಬರು ಸಹ ಖಾದಿ ಬಳಸುವುದು ಮುಂದೆ ಚಳುವಳಿ ರೂಪ ಪಡೆದು ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಜರುಗಿದ್ದು ಇತಿಹಾಸವಾಗಿದೆ ಎಂದು ಅವರು ಹೇಳಿದರು.
ಖಾದಿ ಉತ್ಸವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರು ಮಾತನಾಡಿದರು
ಸ್ಥಳೀಯ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಕಾರ್ಖಾನೆಗಳಿಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ನಾವೇ ಸ್ವತಃ ತಯಾರಿಸುವಂತಾಗಬೇಕು. ಈ ಮೂಲಕ ಉದ್ಯೋಗ ಸೃಷ್ಟಿಯಾಗಬೇಕು ಎನ್ನುವ ಆಶಯದೊಂದಿಗೆ ಖಾದಿ ಬಳಕೆಗೆ ಗಾಂಧೀಜಿಯವರು ಸೇರಿದಂತೆ ಅನೇಕರು ಪ್ರೋತ್ಸಾಹ ನೀಡಿದರು.  ನಮ್ಮ ಹಿರಿಕರಿಗೆ ಪರಿಸರದ ಬಗ್ಗೆ ಅಪಾರ ಕಾಳಜಿ ಇತ್ತು. ಈ ಕಾರಣಕ್ಕಾಗಿಯೇ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಕರವಲ್ಲದ ಮತ್ತು ಮುಖ್ಯವಾಗಿ ಜನರ ಶಕ್ತಿ ಸಾಮರ್ಥ್ಯ ಮತ್ತು ಕೌಶಲ ಬಳಕೆಗೆ ಪೂರಕವಾದ ಖಾದಿ ಬಳಕೆಗೆ ಅವರು ಸಾಕಷ್ಟು ಪ್ರಚಾರ ನೀಡಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಖಾದಿಯು ನಮ್ಮ ಸ್ವಾವಲಂಬನೆಯ ಸಂಕೇತವಾಗಿದೆ. ನಮ್ಮ ಸಂಸ್ಕೃತಿ ಹಾಗೂ ಗುರುತಾಗಿ ಮಾರ್ಪಟ್ಟಿದೆ. ಹೀಗಾಗಿ ಖಾದಿ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆ ಮತ್ತು ಖಾದಿ ಆಯೋಗ ರಚನೆಗೊಂಡು ಕಾರ್ಯ ಮಾಡುತ್ತಿವೆ.  ಆರೋಗ್ಯಕ್ಕೆ ಸಾಕಷ್ಟು ಅನುಕೂಲಕರವಾಗಿರುವ ಖಾದಿ ಬಟ್ಟೆ ಮತ್ತು ಖಾದಿ ವಸ್ತುಗಳ ಬಳಕೆಗೆ ಸಾರ್ವಜನಿಕರು ಹೆಚ್ಚಿನ ಒತ್ತು ಕೊಡಬೇಕು. ನಗರದ ಜಿಲ್ಲಾ ರಂಗಮAದಿರದಲ್ಲಿ 15 ದಿನಗಳ ಕಾಲ ನಡೆಯುವ ಖಾದಿ ಉತ್ಸವದಲ್ಲಿ ಜಿಲ್ಲೆಯ ಜನರು ಭಾಗಿಯಾಗಬೇಕು ಎಂದು ಸಭೆಯ ಮೂಲಕ ಜಿಲ್ಲೆಯ ಜನರಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮನವಿ ಮಾಡಿದರು.
ಈ ಸಮಾರಂಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು, ಸಿಇಓ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌