Youth Blood Donation: ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಜೀವ ಉಳಿಸಲು ನೆರವಾಗಬೇಕು- ರವಿಕುಮಾರ ಚವ್ಹಾಣ

ವಿಜಯಪುರ: ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವ ರೋಗಿಗಳ ಜೀವ ಉಳಿಸಲು ನೆರವಾಗಬೇಕು ಎಂದು ಜಗದಂಬಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರವಿಕುಮಾರ ಚವ್ಹಾಣ ಹೇಳಿದರು.

ಅವರು, ಸಿಂದಗಿ ತಾಲೂಕಿನ ತಾಂಬಾ ಗ್ರಾಮದಲ್ಲಿ ನಾಡದೇವಿಯ 51ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ ವಿಜಯಪುರದ ಶಿವಗಿರಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತಧಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ವರಿಣಾಮ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ.  ಇದನ್ನು ತೊಲಗಿಸಲು ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು.  ಯುವಕರು ರಕ್ತಧಾನ ಕುರಿತು ಇರುವ ಮೌಢ್ಯದಿಂದ ಹೊರ ಬರಬೇಕು.  ರಕ್ತಧಾನದಿಂದ ರಕ್ತದ ಅವಶ್ಯಕತೆ ಇರುವರೆಗೆ ಮಾತ್ರ ಲಾಭವಾಗುವುದಿಲ್ಲ. ರಕ್ತಧಾನಿಗಳು ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು.  ಇದರಿಂದ ರಕ್ತಧಾನ ಮಾಡಿದವರಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ.  ಜೊತೆಗೆ ಹೃದಯಘಾತದ ಸಂಭವ ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಎಂದು ರವಿಕುಮಾರ ಚವ್ಹಾಣ ಹೇಳಿದರು.

ಈ ಸಂದರ್ಭದಲ್ಲಿ ರಾಹುಲ ರಾಠೋಡ, ಸುನಿಲ ಚವ್ಹಾಣ, ಪವನ ಬಿರಾದಾರ, ಲಕ್ಷ್ಮಿಕಾಂತ ನಾಟಿಕಾರ, ಅನುಷ್ಕಾ ಪವಾರ, ಸಾವಿತ್ರಿ ಪೂಜಾರಿ, ದಿಲೀಪ ಜಾಧವ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌