Alamatti CM: ಸುಪ್ರೀಂ‌ ಕೋರ್ಟಿ ತೀರ್ಪಿನ ಬಳಿಕ ಆಲಮಟ್ಟಿ ಜಲಾಷಯ ಎತ್ತರ ಹೆಚ್ಚಳಕ್ಕೆ ಕ್ರಮ- ಸಿಎಂ‌ ಬಸವರಾಜ ಬೊಮ್ಮಾಯಿ

ವಿಜಯಪುರ: ಆಲಮಟ್ಟಿ ಜಲಾಷಯ ಎತ್ತರ ಕುರಿತು ಸುಪ್ರೀಂ‌ ಕೋರ್ಟಿನಲ್ಲಿ ತೀರ್ಪು ಬಾಕಿಯಿದ್ದು, ಅಂತಿಮ ಅಧಿಸೂಚನೆ ಬಂದ ನಂತರ ಎತ್ತರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ರಾಜ್ಯಸ ಪಾಲಿನ ನೀರನ್ನು ಸಂಗ್ರಹಿಸಿ ಉಪಯೋಗಿಸಲು ನಾನಾ ನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಇನ್ನು ಹಲವಾರು ಯೋಜನೆಗಳು ಪ್ರಗತಿಯಲ್ಲಿವೆ.

ಜಲಾಶಯ ಎತ್ತರದ ಬಳಿಕ ಸಂತ್ರಸ್ತರಿಗಾಗಿ ಪುನರ್ ವಸತಿ ಕಲ್ಪಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಆಲಮಟ್ಟಿ ಜಲಾಷಯದ ಕುರಿತು ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ಮುಗಿದಿದ್ದು ತೀರ್ಪು ಇನ್ನಷ್ಟೇ ಬರಬೇಕಿದೆ. ಈ ಪ್ರಕರಣದ ವಿಚಾರಣೆ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರದ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದರಿಂದ ತೀರ್ಪು ವಿಲಂಬವಾಗಿದೆ. ಈ ಪ್ರಕರಣದ ವಿಚಾರಣೆಗೆ ಹೊಸ ನ್ಯಾಯಮೂರ್ತಿಗಳ ನೇಮಕ ಮಾಡುವಂತೆ ಕರ್ನಾಟಕದ ಪರವಾಗಿ ವಕೀಲರು ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ನೋಟಿಫಿಕೇಶನ್ ಆದ ತಕ್ಷಣ ಪುನರ್ನಿರ್ಮಾಣ ಮತ್ತು ಮತ್ತು ಪುನರ್ವಸತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ‌ ತಿಳಿಸಿದತು.

ರಾಜ್ಯದ ಜನರಿಗೆ ಮೊದಲು ನೀರು ಕೊಡುವುದು ನಮ್ಮ ಆದ್ಯತೆಯಾಗಿದೆ. ನಂತರ ಈ ಯೋಜನೆಯನ್ನು ರಾಷ್ಟ್ರೀಕರಣ ಗೊಳಿಸುವ ಕುರಿತು ಯೋಚನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪಿ ಎಫ್ ಐ ವಿಚಾರ

ಪಿ ಎಫ್ ಐ ಐ ಬ್ಯಾನ್ ಕುರಿತು ಕಾಂಗ್ರೆಸ್ಸಿಗರು ಈ ಹಿಂದೆ ವಿಧಾನ ಸಭೆ ಒಳಗೆ ಮತ್ತು ಹೊರಗೆ ಆಗ್ರಹಿಸಿದ್ದಾರೆ. ಈಗ ಉಲ್ಟಾ ಮಾತನಾಡುತ್ತಿದ್ದಾರೆ. ಪಿ ಎಫ್ ಐ ಕಾರ್ಯಕರ್ತರು ಎಲ್ಲೆಲ್ಲಿ ತರಬೇತಿ ಪಡೆದಿದ್ದಾರೆ? ಯಾವ ದುಷ್ಕೃತ್ಯಗಳನ್ನು ಮತ್ತು ದೇಶದಿಂದ ಏನೇನು ದೇಶ ವಿರೋಧ ಚಟುವಟಿಕೆ ನಡೆಸಿದ್ದಾರೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕೇಂದ್ರ ಸರಕಾರ ನಿಷೇಧ ಕ್ರಮ‌ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಸಿ. ಸಿ. ಪಾಟೀಲ, ಗೋವಿಂದ ಕಾರಜೋಶ, ಶಾಸಕ‌ ಎ. ಎಸ್. ಪಾಟೀಲ ನಡಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌