Earthquake Again: ಬಸವ ನಾಡಿನಲ್ಲಿ ಒಂದೇ ರಾತ್ರಿ ಮೂರು ಬಾರಿ ಭೂಕಂಪನ- ಎಲ್ಲಿ ಗೊತ್ತಾ?

ವಿಜಯಪುರ: ಕಳೆದ ಕೆಲವು ದಿನಗಳಿಂದ ನೆಮ್ಮದಿಯಿಂದಿದ್ದ ಬಸವ ನಾಡಿನ‌ ಜನ ಈಗ ಭೂಕಂಪನದಿಂದಾಗಿ ಮತ್ತೆ ಬೆಚ್ಚಿ ಬಿದ್ದಿದ್ದಾರೆ.

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಿಂದ ಸುಮಾರು‌ 2.50 ಕಿ. ಮೀ. ದೂರದಲ್ಲಿ ವಾಯುವ್ಯ ಭಾಗದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.

ನಸುಕಿನ ಜಾವ 3.45ಕ್ಕೆ ರಿಕ್ಚರ್ ಮಾಪಕದಲ್ಲಿ1.9 ತೀವ್ರತೆ, ಬೆ. 3.46ಕ್ಕೆ 2 ತೀವ್ರತೆ ಮತ್ತು ಬೆ. 5.56ಕ್ಕೆ 3.2 ತೀವ್ರತೆಯ ಭೂಕಂಪನ ಉಂಟಾಗಿದೆ. ಭೂಮಿಯ ಕೆಳಗಡೆ 10 ಕಿ. ಮೀ.‌ ಆಳದಲ್ಲಿ‌ ಈ ಭೂಕಂಪನ ಉಂಟಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಮಾಹಿತಿಯಲ್ಲಿ ತಿಳಿಸಲಾಗಿದೆ.

ಉಕ್ಕಲಿ ಗ್ರಾಮಸ್ಥರ ಪ್ರಕಾರ ಒಟ್ಟು ನಾಲ್ಕು ಬಾರಿ ಭೂಕಂಪನದ ಅನುಭವವಾಗಿದ್ದು, ಬೆ. 6.32ಕ್ಕೂ ಕಂಪನದ ಅನುಭವವಾಗಿದೆ. ‌ಆದರೆ ಇದು ರಿಕ್ಚರ್ ಮಾಪಕದಲ್ಲಿ ದಾಖಲಾಗಿಲ್ಲ. ನಸುಕಿನ‌ ಜಾವ ಭೂಕಂಪನದ ಜೊತೆ ಭೂಮಿಯ ಒಳಗಿನಿಂದ ಭಾರಿ ಶಬ್ದ ಕೇಳಿ ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ‌ ಮೂಡಿಸಿದೆ.

Leave a Reply

ಹೊಸ ಪೋಸ್ಟ್‌