ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳಿಗ್ಗೆ ಮತ್ತೆ ಭೂಕಂಪನ ಸಂಭವಿಸಿದೆ.
ಬೆ. 9.48ರ ಸುಮಾರಿಗೆ ಭೂಕಂಪನ ಅನುಭವವಾಗಿದ್ದು, ಭೂಮಿಯ ಒಳಗಿನಿಂದ ಶಬ್ದ ಕೇಳಿ ಬಂದಿದೆ. ಅಷ್ಟೇ ಅಲ್ಲ, ಈ ಭೂಕಂಪನದ ಅನುಭವ ಅಲಿಯಾಬಾದ್ ಸೇರಿದಂತೆ ನಾನಾ ಗ್ರಾಮಸ್ಥಳಿಗೂ ಉಂಟಾಗಿದೆ.
ರಿಕ್ಚರ್ ಮಾಪಕದಲ್ಲಿ 2.5 ತೀವ್ರತೆಯ ಭೂಕಂಪ ಇದಾಗಿದ್ದು, ಅಲಿಯಾಬಾದ ನಿಂದ ಪೂರ್ವಕ್ಕೆ 3. ಕಿ. ಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿಯ ಒಳಗೆ 8 ಕಿ. ಮೀ. ಆಳದಲ್ಲಿ ಈ ಭೂಕಂಪನ ಉಂಟಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.