Sainik School: ರಾಜ್ಯದ ಮೊದಲ ಸೈನಿಕ ಶಾಲೆಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ

ವಿಜಯಪುರ: ರಾಜ್ಯದ ಮೊದಲ ಸೈನಿಕ ಶಾಲೆ ಖ್ಯಾತಿಯ ವಿಜಯಪುರದ ಸೈನಿಕ ಶಾಲೆಯಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. 

ಸೈನಿಕ ಶಾಲೆಯ ಮುಖ್ಯ ಕಟ್ಟಡದ ಮುಂಭಾಗದಲ್ಲಿರುವ ಗಾಂಧಿಜಿಯವರ ಪ್ರತಿಮೆಗೆ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ್ ಪುಷ್ಪ ನಮನ ಸಲ್ಲಿಸಿದರು.  ಬಳಿಕ ದೇಶದ ಮಾಜಿ ಪ್ರಧಾನಿ ದಿ. ಲಾಲ ಬಹದ್ದೂರ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಗಾಂಧೀಜಿಯವರ ತತ್ವಗಳನ್ನು ಹಾಗೂ ಶಾಸ್ತ್ರಿಜಿಯವರ ಸರಳ ಜೀವನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.

ಸ್ವಚ್ಛ ಭಾರತ್ ಮಿಷನ್ ಅಂಗವಾಗಿ ಶಾಲೆಯ ಕೆಡೆಟ್ ಗಳು ಮತ್ತು ಸಿಬ್ಬಂದಿ ಶ್ರಮದಾನ ಮಾಡಿದರು.  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ಕಮಾಂಡರ್ ಸುರುಚಿ ಗೌರ, ಹಿರಿಯ ಶಿಕ್ಷಕ ಡಾ. ಸಿ. ರಾಮರಾವ, ಶಾಲೆಯ ಶಿಕ್ಷಕರು ಮತ್ತು ಶಿಕ್ಷಕೇತರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌