Shantiniketan School: ಶಾಂತಿನಿಕೇತನ ಶಾಲೆಯಲ್ಲಿ ಗಾಂಧಿ, ಶಾಸ್ತ್ರಿ ಜಂಯತಿ ಸಂಭ್ರಮ

ವಿಜಯಪುರ: ನಗರದ ಪ್ರತಿಷ್ಠಿತ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿಯನ್ನು ಾಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶೀಲಾ ಸುರೇಶ ಬಿರಾದಾರ ಅವರು ಗಾಂಧಿ ಮತ್ತು ಮತ್ತು ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಗಾಂಧೀಜಿ ಮತ್ತು ಶಾಸ್ತ್ರೀಜಿ ಈ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ.  ಅಂಥವರ ಜೀವನದ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.  ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಜಯಪುರದ ಪ್ರತಿಷ್ಠಿತ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಾಂಧಿ, ಶಾಸ್ತ್ರಿ ಜಯಂತಿಯಲ್ಲಿ ಪಾಲ್ಗೋಂಡ ಶಾಲೆಯ ಶಿಕ್ಷಕರು

 

ಪ್ರಾಚಾರ್ಯ ಶ್ರೀಧರ ಕುರಬೆಟ ಸ್ವಾಗತಿಸಿ, ಶುಭ ಕೋರಿದರು.  ಶಿಕ್ಷಕರಾದ ಬಸವರಾಜ ರೆಬಿನಾಳ ಹಾಗೂ ಶ್ವೇತಾ ಜಿಂಗಾಡೆ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜೀವನಧಾರೆಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅದಿತಿ ರಾಜಮಾನ್ಯ, ಕ್ರಿಷಾ ಜೈನ್ ಅವರು ಗಾಂಧಿ ಮತ್ತು ಶಾಸ್ತ್ರಿ ಅವರ ಕುರಿತು ಭಾಷಣವನ್ನು ಮಾಡಿದರು.

ವಿದ್ಯಾರ್ಥಿಗಳು ರಘುಪತಿ ರಾಘವ ರಾಜಾ ರಾಮ ಭಜನೆಯನ್ನು ಮಾಡಿದರು.  ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ. ಎಚ್. ಸಗರ, ಶ್ರೀದೇವಿ ಜೋಳದ, ಅನಿಲ ಬಾಗೇವಾಡಿ, ಸೀಮಾ, ಸರೋಜಾ, ಮಧುಮತಿ, ದೀಪಾ ತಬಸುಮ, ಹೀನಾ, ಅಶ್ವಿನ, ಅಶ್ವಿನಿ, ಇತರರು ಉಪಸ್ಥಿತರಿದ್ದರು.

ಕವಿತಾ ನಿಂಬರಗಿ ನಿರೂಪಿಸಿದರು.  ಗೀತಾಂಜಲಿ ಅಮಿನಗಡ ವಂದಿಸಿದರು.

Leave a Reply

ಹೊಸ ಪೋಸ್ಟ್‌