ವಿಜಯಪುರ: ಪ್ರಾಚೀನ ಕಾಲದ ಗುರು-ಶಿಷ್ಯ ಸಂಬಂಧಗಳ ಸಂಸ್ಕೃತಿ ಈಗ ನಶಿಸುತ್ತಿವೆ. ಅವುಗಳನ್ನು ಅವುಗಳನ್ನು ಕಾಳಜಿಪೂರಕವಾಗಿ ಉಳಿಸಿ ಬೆಳೆಸಬೇಕಿದೆ ಎಂದು ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿ ಪಂ. ಮಧ್ವಾಚಾರ್ಯ ಮೊಕಾಶಿ ಹೇಳಿದರು.
ವಿಜಯಪುರ ನಗರದ ಪಿಡಿಜೆ ಎ ಹೈಸ್ಕೂಲಿನಲ್ಲಿ 1999 ನೇ ಬ್ಯಾಚಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನ ದಾರಿಯನ್ನು ತೋರಿಸುವವನೇ ಗುರು. ವಿದ್ಯಾರ್ಥಿಗಳಲ್ಲಿನ ಅಜ್ಞಾನವನ್ನು ತೊಲಗಿಸಿ ಸುಜ್ಞಾನವೆನ್ನುವ ಬೆಳಕನ್ನು ನೀಡುತ್ತಾನೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಪ್ರಾಚೀನ ಕಾಲದಲ್ಲಿ, ಶಿಷ್ಯರು ಗುರುವಿನ ಆಶ್ರಮದಲ್ಲಿ ಉಚಿತ ಪಡೆಯುತ್ತಿದ್ದರು. ಸನಾತನ ಸಂಸ್ಕೃತಿಯಲ್ಲಿ ಗುರುವನ್ನು ದೇವರ ಸಮಾನವೆಂದು ಪರಿಗಣಿಸಲಾಗುತ್ತಿತ್ತು. ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ. ಅಲ್ಲದೇ, ತಂದೆ-ತಾಯಿಯನ್ನು ಗೌರವಿಸಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಪಂ. ಮಧ್ವಾಚಾರ್ಯ ಮೊಕಾಶಿ ತಿಳಿಸಿದರು.
ನಿವೃತ್ತ ದೈಹಿಕ ಶಿಕ್ಷಕ ಆರ್. ಆರ್. ಕುಲಕರ್ಣಿ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು. ಧ್ಯಾನ ಯೋಗ ಮಾಡುವ ಮೂಲಕ ಶರೀರವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಬಿ. ಬಿ. ಕುಲಕರ್ಣಿ, ಎಸ್. ಆರ್. ಜೋಶಿ, ಅಂಬಾದಾಸ ಜೋಶಿ, ಜಿ. ಎಸ್. ಡಂಬಳ, ಪಿ. ಎಸ್. ಕುಂದನಗಾರ, ಶೋಭಾ ಜೋಶಿ, ಎ. ಎಸ್. ಜೋಶಿ, ಎ. ಎಸ್. ಕುಲಕರ್ಣಿ, ದೇವಿಕಾ ಕುಲಕರ್ಣಿ, ಮೊಕಾಶಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ 1999ನೇ ವಿದ್ಯಾರ್ಥಿಗಳಾದ ಫಾರೂಕ ಇಮಾರತವಾಲೆ, ಸೋಯೆಲ್ ಜಮಾದಾರ, ಸರೋಜಿನಿ ಪರಗುಂಡೆ, ರಮೇಶ ರಾಠೋಡ, ರವಿ ಗಚ್ಚಿನಕಟ್ಟಿ, ಮಿಥುನ ಕುಲಕರ್ಣಿ, ಗೋವಿಂದ ಜೋಶಿ, ಮಹೇಶ ದೇವಣಗಾಂವ, ಬದ್ರಿ ನಾರಾಯಣ ಜೋಶಿ, ಡಾ. ಸಂಧಿಪ ನಾಯಕ, ಡಾ. ಕೃಷ್ಣಾ ಅಗರಖೇಡ, ಡಾ. ಸುನೀಲ ಕುಸುಗಲ, ಡಾ. ಗಂಗಾಧರ ತಿಮ್ಮಾಪೂರ, ರಾಜಕುಮಾರ ಬಿರಾದಾರ, ಶ್ರಿಧರ ಗೌರ, ರಂಜೀತ ಜಾಧವ, ಸುಭಾಸ ಮಮದಾಪುರ ಮುಂತಾದವರು ಪಾಲ್ಗೋಂಡಿದ್ದರು.