ವಿಜಯಪುರ: ವಿಜಯಪುರ ನಗರದ ಅಡಕಿ ಗಲ್ಲಿಯಲ್ಲಿ ಸಾರ್ವಜನಿಕವಾಗಿ ಆಚರಿಸಲಾಗುವ ನಾಡದೇವಿ ಉತ್ಸವ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ನಾಡದೇವಿ ಮಂಟಪಕ್ಕೆ ಆಗಮಿಸಿದ ಮುಸ್ಲಿಂ ಸಮುದಾಯದ ಯುವಕರು ದೇವಿಯ ಮೂರ್ತಿಗೆ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದರು.
ಹಿಂದೂ ಮತ್ತು ಮುಸ್ಲಿಂ ಬಾಂಧವರು ಇಲ್ಲಿ ಒಟ್ಟಾಗ ಪೂಜೆ ಮಾಡಿದರು. ಹಲವಾರು ವರ್ಷಗಳಿಂದ ಇಲ್ಲಿ ಪ್ರತಿಷ್ಠಾಪಿಸಲಾಗುವ ನಾಡದೇವಿ ಭಾವೈಕ್ಯತೆಯಿಂದ ಕೂಡಿರುವುದು ವಿಶೇಷವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಮುಸ್ಲಿಂ ಬಾಂಶವರು ಇಲ್ಲಿಯ ನಾಡದೇವಿ ಮೂರ್ತಿಗೆ ಬೆಳ್ಳಿಯ ಕಿರೀಟವನ್ನು ಸಮರ್ಪಿಸಿ ನ ಸೆಳೆಸಿದ್ದಾರೆ.