Dasara Wishes: ಭಾರತೀಯ ಪರಂಪರೆಯಲ್ಲಿ ವಿಜಯದಶಮಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ- ಉಮೇಶ ಕಾರಜೋಳ
ವಿಜಯಪುರ: ಭಾರತಿಯ ಪರಂಪರೆಯಲ್ಲಿ ವಿಜಯದಶಮಿ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಈ ಹಬ್ಬ ಅನ್ಯಾಯದ ವಿರುದ್ಧ ಜಯಗಳಿಸಿದ ವಿಜಯದ ಸಂಕೇತವಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ. ವಿಜಯಪುರ ನಗರದಲ್ಲಿರುವ ಸ್ವಗೃಹದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜಯದಶಮಿ ಹಬ್ಬ ಭಾರತಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ವಿಜಯದ ಸಂಕೇತವಾಗಿಯೂ ಇದನ್ನು ಆಚರಿಸಲಾಗುತ್ತದೆ. ಅದರಲ್ಲೂ ಬನ್ನಿ ವಿನಿಮಯದಿಂದ ಪರಸ್ಪರ ಸ್ನೇಹ, ಪ್ರೀತಿ, ವಾತ್ಸಲ್ಯದಿಂದ ಬದುಕು ಸಾಗಿಸುವ ಭರವಸೆ ಮೂಡುತ್ತದೆ ಎಂದು ಅವರು ಹೇಳಿದರು. […]
Paigambar Jayanti: ಪ್ರವಾದಿ ಹಜರತ್ ಮೊಹಮ್ಮದ ಪೈಗಂಬರ ಜಯಂತಿ ಅಂಗವಾಗಿ ಗುಮ್ಮಟ ನಗರಿಯಲ್ಲಿ ನಾನಾ ಕಾರ್ಯಕ್ರಮ ಆಯೋಜನೆ- ತನ್ವೀರ್ ಪೀರಾ ಹಾಶ್ಮಿ
ವಿಜಯಪುರ: ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ್ ಅವರ ಜಯಂತೋತ್ಸವ(ಈದ್ ಮಿಲಾದುನ್ನಬಿ)ಯನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಅಹಲೆ ಸುನ್ನತ್ ಜಮಾತ್ ಅಧ್ಯಕ್ಷ ಹಾಗೂ ಧರ್ಮಗುರು ಹಜರತ್ ಸೈಯ್ಯದ್ ತನ್ವೀರ ಪೀರಾ ಹಾಶ್ಮಿ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಹಮ್ಮದ ಪೈಗಂಬರ್ ಅವರು ಶಾಂತಿ, ಸಮಾನತೆ, ಮಾನವೀಯತೆ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅವರ ಚಿಂತನೆಗಳು ಸಾರ್ವಕಾಲಿಕವಾಗಿದ್ದು, ಅವರ ಆಶಯಗಳಂತೆ ಜಯಂತ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈಗಾಗಲೇ ಅ. 5 […]
Kore Guruvandane: ಜ್ಞಾನಯೋಗಾಶ್ರಮದಲ್ಲಿ ಬಿ. ಎಂ. ಕೋರ ಪ್ರತಿಷ್ಠಾನದಿಂದ ಗುರುವಂದನೆ, ಮಣ್ಣು ಉಳಿಸಿ ಕಾರ್ಯಕ್ರಮ
ವಿಜಯಪುರ: ನಗರದ ಜ್ಞಾನಯೋಗಾಶ್ರಮದಲ್ಲಿ ಲೋಣಿ ಬಿ. ಕೆ. ಗ್ರಾಮದ ಬಿ. ಎಂ. ಕೋರೆ ಪ್ರತಿಷ್ಠಾನದ ವತಿಯಿಂದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಗುರುವಂದನೆ ಮತ್ತು ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಮಣ್ಣು ಉಳಿಸಲು ನಾಗರೀಕ ಸಮಾಜ ಕೈಜೋಡಿಸಬೇಕು ಎಂದು ಹೇಳಿದರು. ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಸವಿವರ ಮಾಹಿತಿ ನೀಡಿದ ಅವರು, ಮಣ್ಣು ಉಳಿದರೆ ಜೀವ ಸಂಕುಲ ಉಳಿಯಲು ಸಾಧ್ಯ. ರೇಲ್ವೆ ಇಲಾಖೆಯ ಮುತ್ತಣ ಬಿರಾದಾರ […]
Poshana Abhiyana: ವಿಜಯಪುರ ಕಿರಿಯ ಬಾಲಕರ ಬಾಲಮಂದಿರಲ್ಲಿ ಪೋಷಣಾ ಅಭಿಯಾನ
ವಿಜಯಪುರ: ನಗರದ ಅಫಝಲಪುರ ಟಕ್ಕೆ ಬಳಿ ಇರುವ ಸರಕಾರಿ ಕಿರಿಯ ಬಾಲಕರ ಬಾಲಮಂದಿರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ ನಡೆಯಿತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಶ್ರೀಧರ ಕುಲಕರ್ಣಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಲಮಂದಿರದ ಮಕ್ಕಳು ದೈಹಿಕವಾಗಿ ಸದೃಢವಾಗಿರಲು ಗುಣಮಟ್ಟದ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಬೇಕು. ಪೌಷ್ಟಿಕಾಂಶ ಆಹಾರದಿಂದ ಮಕ್ಕಳು ಉತ್ತಮ ಆರೋಗ್ಯ ಹೊಂದಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗುವುದು ಎಂದು ಶ್ರೀಧರ ಕುಲಕರ್ಣಿ ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಅವರು ಅಧ್ಯಕ್ಷತೆ […]